ಕವಿತಾ ಗೌಡರವನ್ನು ಮದುವೆಯಾಗುತ್ತಿರುವ ಚಂದನ್ ರವರ ನಿಜವಾದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?? ಯಪ್ಪಾ ಇಷ್ಟೊಂದ??

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕಿರುತೆರೆಯ ಟಾಪ್ ಜೋಡಿಗಳಲ್ಲಿ ಒಂದಾಗಿದ್ದ ಕವಿತಾ ಗೌಡ ಹಾಗೂ ಚಂದನ್ ರವರು ನಿಜ ಜೀವದಲ್ಲಿಯೂ ಕೂಡ ಜೋಡಿಗಳಾಗುವ ಮೂಲಕ ಲಕ್ಷಾಂತರ ಅಭಿಮಾನಿಗಳ ಕನಸನ್ನು ನನಸು ಮಾಡುತ್ತಿದ್ದಾರೆ, ಹಲವಾರು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದ ಇವರಿಬ್ಬರನ್ನು ನೋಡಿದ ಅಭಿಮಾನಿಗಳು ಇಬ್ಬರು ನಿಜ ಜೀವನದಲ್ಲಿಯೂ ಕೂಡ ಮದುವೆಯಾಗಬೇಕು ಎಂದು ಮನವಿ ಮಾಡುತ್ತಿದ್ದರು. ಇದೀಗ ಕೊನೆಗೂ ಅಭಿಮಾನಿಗಳ ಆಸೆ ಈಡೇರುವ ಸಮಯ ಬಂದಿದೆ.

ಚಂದನ್ ಹಾಗೂ ಕವಿತಾ ಗೌಡ ರವರು ಒಬ್ಬರೊನ್ನಬ್ಬರು ಹಲವಾರು ವರ್ಷಗಳ ಕಾಲ ಪ್ರೀತಿಸಿ ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇದಕ್ಕಾಗಿ ಭರ್ಜರಿ ಸಿದ್ದತೆಗಳು ಕೂಡ ನಡೆದಿವೆ. ಮೆಹಂದಿಯ ಶಾಸ್ತ್ರದ ಫೋಟೋಗಳು ಕೂಡ ಎಂದಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ, ಹೀಗಿರುವಾಗ ಇವರಿಬ್ಬರ ಕುರಿತಾದ ಕೆಲವೊಂದು ಆಸಕ್ತಿಕರ ವಿಷಯ ಹಾಗೂ ನಾವು ಧಾರಾವಾಹಿಯಲ್ಲಿ ನೋಡಿರುವ ಶ್ರೀಮಂತ ನಟ ಚಂದನ್ ರವರು ನಿಜ ಜೀವನದಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚಂದನ್ ರವರು ಧಾರಾವಾಹಿಯಲ್ಲಿ ನಟಿಸುವ ಯಾವುದೇ ಆಲೋಚನೆ ಇಟ್ಟುಕೊಂಡು ಕಿರುತೆರೆ ಪ್ರವೇಶ ಮಾಡಲಿಲ್ಲ, ಬದಲಾಗಿ ತಮ್ಮದೇ ಆದ ಬಿಸಿನೆಸ್ ನಡೆಸುತ್ತಿದ್ದ ಚಂದನ್ ರವರು, ಸಿಕ್ಕ ಅವಕಾಶವನ್ನು ಯಾಕೆ ಬಿಡಬೇಕು ಎಂದು ಧಾರಾವಾಹಿಯಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಮೊದಲಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಇವರು ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು. ತದನಂತರ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ ಕುರಿತೆರೆಯ ಟಾಪ್ ನಟರಾದರು. ಆಮೇಲೆ ಸಿನಿಮಾ ಗಳಲ್ಲಿ ಕೂಡ ನಟಿಸುವ ಅವಕಾಶ ಪಡೆದ ಇವರು ಇದೀಗ ತೆಲುಗಿನಲ್ಲಿಯೂ ಕೂಡ ಬಹುಬೇಡಿಕೆಯ ನಟ. ಹೀಗೆ ಸಾಲು ಸಾಲು ಯಶಸ್ಸನ್ನು ಕಂಡಿರುವ ಇವರು ತಮ್ಮದೇ ಆದ ಹೋಟೆಲ್ ಕೂಡ ಹೊಂದಿದ್ದಾರೆ, ಇನ್ನು ಇವರು ಒಟ್ಟಾರೆಯಾಗಿ 20 ಕೊತಿ ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ.

Comments are closed.