ಇದ್ದಕ್ಕಿದ್ದ ಹಾಗೆ ಅಭಿಮಾನಿಗಳ ಜೊತೆ ಭಾವನಾತ್ಮಕ ಪಾತ್ರ ಬರೆದು ಹಂಚಿಕೊಂಡ “ಮಹಾ” ನಟಿ ಕೀರ್ತಿ ಸುರೇಶ್. ಹೇಳಿದ್ದೇನು ಗೊತ್ತೇ??

ದಕ್ಷಿಣ ಭಾರತ ಚಿತ್ರರಂಗದ ಈಗಿನ ಜೆನೆರೇಷನ್ ನಟಿಯರಲ್ಲಿ ಮಹಾನಟಿ ಎಂದೇ ಹೆಸರು ಮಾಡಿರುವವರು ನಟಿ ಕೀರ್ತಿ ಸುರೇಶ್. ರಾಷ್ಟ್ರಪ್ರಶಸ್ತಿ ವಿಜೇತೆ ಆಗಿರುವ ಕೀರ್ತಿ ಸುರೇಶ್ ಅವರು, ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದರು. ಇದರಿಂದ ಅವರ ಕೆರಿಯರ್ ಇಳಿಮುಖ ಕಂಡಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ಕೀರ್ತಿ ಸುರೇಶ್ ಅವರು ಅಭಿಮಾನಿಗಳಿಗೆ ಒಂದು ಭಾವನಾತ್ಮಕ ಪತ್ರ ಬರೆದು, ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಶೇರ್ ಮಾಡಿ, ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅಷ್ಟಕ್ಕೂ ಕೀರ್ತಿ ಸುರೇಶ್ ಅವರು ಹೇಳಿದ್ದೇನು ಗೊತ್ತಾ?

ನಟಿ ಕೀರ್ತಿ ಸುರೇಶ್ ಅವರಿಗೆ ಬಿಗ್ ಬ್ರೇಕ್ ತಂದು ಕೊಟ್ಟ ಸಿನಿಮಾ ಮಹಾನಟಿ. ಆ ಸಿನಿಮಾ ಇಂದ ಕೀರ್ತಿ ಅವರಿಗೆ ಬೇಡಿಕೆ ಹೆಚ್ಚಾಯಿತು, ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶಗಳು ಹೆಚ್ಚಾಯಿತು. ಆದರೆ ಮಹಾನಟಿ ಸಾವಿತ್ರಿ ಅವರ ಪಾತ್ರದಲ್ಲಿ ಕೀರ್ತಿ ಅವರನ್ನು ನೋಡಿದ್ದ ಜನರು, ಸಾಮಾನ್ಯವಾದ ಪಾತ್ರಗಳಲ್ಲಿ ಕೀರ್ತಿ ಅವರನ್ನು ಒಪ್ಪಿಕೊಳ್ಳಲಿಲ್ಲ ,ಕೀರ್ತಿ ಸುರೇಶ್ ಅಭಿನಯದ ಸಾಲು ಸಾಲು ಸಿನಿಮಾಗಳು ಸೋಲು ಕಂಡವು. ಆದರೆ ಈಗ ಮತ್ತೆ ಗೆಲುವಿನ ಹಾದಿಗೆ ಬಂದಿದ್ದಾರೆ ಕೀರ್ತಿ. ಅದು ಮಹೇಶ್ ಬಾಬು ಅವರೊಡನೆ ಕೀರ್ತಿ ಸುರೇಶ್ ನಟಿಸಿದ, ಸರ್ಕಾರು ವಾರಿ ಪಾಟ ಸಿನಿಮಾ ಮೂಲಕ, ಈ ಸಿನಿಮಾ ಸೂಪರ್ ಹಿಟ್ ಆಗಿ, ಕೀರ್ತಿ ಸುರೇಶ್ ಅವರಿಗೆ ಸ್ಟಾರ್ ಸ್ಟೇಟಸ್ ತಂದುಕೊಟ್ಟಿದೆ. ಈ ಸಂತೋಷದಲ್ಲಿರುವ ಕೀರ್ತಿ ಸುರೇಶ್, ಒಂದು ಭಾವನಾತ್ಮಕ ಪತ್ರ ಬರೆದು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ..

Keerthy suresh | ಇದ್ದಕ್ಕಿದ್ದ ಹಾಗೆ ಅಭಿಮಾನಿಗಳ ಜೊತೆ ಭಾವನಾತ್ಮಕ ಪಾತ್ರ ಬರೆದು ಹಂಚಿಕೊಂಡ "ಮಹಾ" ನಟಿ ಕೀರ್ತಿ ಸುರೇಶ್. ಹೇಳಿದ್ದೇನು ಗೊತ್ತೇ??
ಇದ್ದಕ್ಕಿದ್ದ ಹಾಗೆ ಅಭಿಮಾನಿಗಳ ಜೊತೆ ಭಾವನಾತ್ಮಕ ಪಾತ್ರ ಬರೆದು ಹಂಚಿಕೊಂಡ "ಮಹಾ" ನಟಿ ಕೀರ್ತಿ ಸುರೇಶ್. ಹೇಳಿದ್ದೇನು ಗೊತ್ತೇ?? 2

“ವೃತ್ತಿ ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ.. ಕಳೆದ ಒಂದೆರಡು ವರ್ಷಗಳು ನನಗೆ ಪರೀಕ್ಷೆಯ ಹಾಗಿದ್ದವು, ಆದರೆ ಸಾನಿ ಕಾಯಿಧಮ್ ಮತ್ತು ಸರ್ಕಾರು ವಾರಿ ಪಾಟ ಸಿನಿಮಾ, ಮತ್ತು ಕಲಾವತಿ ಹಾಡು ಜನರು ಬಹಳ ಪ್ರೀತಿಯಿಂದ ಇಷ್ಟಪಟ್ಟಿದ್ದಾರೆ..ಈ ಪ್ರೀತಿಗೆ ನಾನು ಸದಾ ಆಭಾರಿ..” ಎಂದು ಬರೆದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಕೀರ್ತಿ ಸುರೇಶ್.. ಜೊತೆಗೆ ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಸಿನಿಮಾಗಳಲ್ಲಿ ನಟಿಸುವುದಾಗಿ ಭರವಸೆ ನೀಡಿದ್ದಾರೆ. ಕೀರ್ತಿ ಸುರೇಶ್ ಅವರು ಜನರಿಗೆ ಇಷ್ಟ ಆಗುವುದು,ಅವರ ಸಿಂಪ್ಲಿಸಿಟಿ ಮತ್ತು ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ. ಈ ಪತ್ರದ ಮೂಲಕ ತಾವು ಮತ್ತೆ ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವುದಾಗಿ ಭರವಸೆ ನೀಡಿದ್ದಾರೆ ಕೀರ್ತಿ. ಪ್ರಸ್ತುತ ಇವರು ನ್ಯಾಚುರಲ್ ಸ್ಟಾರ್ ನಾನಿ ಅವರ ಜೊತೆ ದಸರಾ ಸಿನಿಮಾದಲ್ಲಿ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರೊಡನೆ ಭೋಲಾ ಶಂಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Comments are closed.