ನಿಮಗೆ ಕಿರಿಕ್ ಪಾರ್ಟಿ ಸಿನಿಮಾ ಇಷ್ಟವಾಗಿತ್ತೇ?? ಹಾಗಿದ್ದರೆ ಕಿರಿಕ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ರಕ್ಷಿತ್ ಶೆಟ್ಟಿ. ಹೇಳಿದ್ದೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರ ಜೀವನದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಯಾವ ಮಟ್ಟದಲ್ಲಿ ಅವರನ್ನು ಕರೆದುಕೊಂಡು ಹೋಗಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಹೌದು ಗೆಳೆಯರೇ ರಕ್ಷಿತ್ ಶೆಟ್ಟಿ ರವರ ಸಿನಿಮಾ ಜೀವನದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆಯಾಗಿದ್ದಾವೆ. ರಕ್ಷಿತ್ ಶೆಟ್ಟಿ ಅವರ ನಟನಾ ಕೌಶಲ್ಯವನ್ನು ಕೂಡ ಪ್ರೇಕ್ಷಕರ ಮುಂದೆ ಸಾಬೀತುಪಡಿಸಿವೆ. ಆದರೆ ರಕ್ಷಿತ್ ಶೆಟ್ಟಿ ರವರ ಸಿನಿಮಾ ಜೀವನದಲ್ಲಿ ಅತ್ಯುತ್ತಮ ತಿರುವನ್ನು ನೀಡಿದ್ದು ಮಾತ್ರ ಕಿರಿಕ್ ಪಾರ್ಟಿ ಸಿನಿಮಾ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೇವಲ ರಕ್ಷಿತ್ ಶೆಟ್ಟಿ ರವರಿಗೆ ಮಾತ್ರವಲ್ಲದೆ ನಟಿಯರಾಗಿ ರಶ್ಮಿಕ ಮಂದಣ್ಣ ಹಾಗೂ ಸಂಯುಕ್ತ ಹೆಗಡೆ ಇಬ್ಬರಿಗೂ ಕೂಡ ಮತ್ತು ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರಿಗೂ ಕೂಡ ಸಿನಿಮಾರಂಗದಲ್ಲಿ ದೊಡ್ಡಮಟ್ಟದ ಪ್ರಶಸ್ತಿ ಹಾಗೂ ಗೌರವಗಳು ಸಿಗುವಂತೆ ಮಾಡುತ್ತದೆ. ಕೇವಲ 4 ಕೋಟಿ ಬಜೆಟ್ ನಲ್ಲಿ ಮೂಡಿಬಂದ ಕಿರಿಕ್ ಪಾರ್ಟಿ ಸಿನಿಮಾ ಬರೋಬ್ಬರಿ 44 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಈ ಸಿನಿಮಾದ ನಂತರ ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ ರವರ ಮಾರ್ಕೆಟ್ ಇನ್ನು ದೊಡ್ಡದಾಯಿತು. ಸದ್ಯಕ್ಕೆ ರಕ್ಷಿತ್ ಶೆಟ್ಟಿ ರವರ ಚಾರ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ.

ಸಾಮಾನ್ಯವಾಗಿ ಒಂದು ಚಿತ್ರದ ಸೀಕ್ವೆಲ್ ಯಾವತ್ತೂ ಕೂಡ ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಒಂದು ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಅವರು ರಿಚರ್ಡ್ ಆಂಟೋನಿ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಕಿರಿಕ್ ಪಾರ್ಟಿ 2 ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ರಿಷಬ್ ಶೆಟ್ಟಿ ರವರೇ ಈ ಸಿನಿಮಾವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಈಗ ಇರುವ ಸಿನಿಮಾಗಳ ಕಮಿಟ್ಮೆಂಟ್ ಮುಗಿಯುತ್ತಿದ್ದಂತೆ ಕಿರಿಕ್ ಪಾರ್ಟಿ 2 ಚಿತ್ರದ ಕುರಿತಂತೆ ಕೆಲಸಗಳನ್ನು ನಾವು ಚಿಕ್ಕ ಟೀಮ್ ಇಟ್ಟುಕೊಂಡು ಪ್ರಾರಂಭಿಸುತ್ತೇವೆ ಎಂಬುದಾಗಿ ರಕ್ಷಿತ್ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಖಂಡಿತವಾಗಿ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಶುಭಸುದ್ದಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Comments are closed.