ತೆರೆ ಹಿಂದಿನ ಮತ್ತೊಂದು ಮುಖ: ಮ್ಯಾನೇಜರ್ ಜೊತೆ ಸಲುಗೆಯಿಂದ ಜಾಸ್ತಿ ದುಡ್ಡು ಎಂದಾಗ ಈ ಸ್ಟಾರ್ ಮಾಡಿದ್ದೇನು ಗೊತ್ತೇ? ಕಹಿ ಅನುಭವ ಬಿಚ್ಚಿಟ್ಟ ಕಲಾವಿದೆ

ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವ ವಿಚಾರ ಈಗ ಸಾಮಾನ್ಯ ಎನ್ನುವಂತೆ ಆಗಿದೆ. ಬಹುತೇಕ ಎಲ್ಲಾ ನಟಿಯರು ಈ ಸಮಸ್ಯೆ ಎದುರಿಸುತ್ತಾರೆ. ಕೆಲವರು ಇದರ ಬಗ್ಗೆ ಬಹಿರಂಗವಾಗಿ ಹೇಳಿಕೊಂಡರೆ, ಇನ್ನು ಕೆಲವರು ಈ ಸಮಸ್ಯೆ ಬಗ್ಗೆ ಮಾತನಾಡಲು ಹೆದರುತ್ತಾರೆ. ಕೆಲವು ನಟಿಯರು ಇದರ ವಿರುದ್ಧ ಧೈರ್ಯವಾಗಿ ಮಾತನಾಡಿ, ತಮಗೆ ಈ ಸಮಸ್ಯೆ ಆಗದ ಹಾಗೆ ನೋಡಿಕೊಳ್ಳುತ್ತಾರೆ. ಇನ್ನು ಕೆಲವರು, ಈ ಸಮಸ್ಯೆಯಲ್ಲಿ ನರಳುತ್ತಾರೆ. ಇದೀಗ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಬಗ್ಗೆ ಖ್ಯಾತ ತೆಲುಗು ನಟಿಯೊಬ್ಬರು ಮಾತನಾಡಿದ್ದಾರೆ..

ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಗೀತು ಅವರು ಕ್ಯಾಸ್ಟಿಂಗ್ ಕೌಚ್ ಇಂದ ತಮಗಾದ ಅನುಭವವನ್ನು ಹೇಳಿದ್ದಾರೆ. ಗೀತು ಅವರು ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ವಿಡಿಯೋಗಳ ಮೂಲಕ ಸದ್ದು ಮಾಡಿದ್ದ ಇವರು, ಕಿರುತೆರೆಯಲ್ಲಿ ಶ್ರೀದೇವಿ ಡ್ರಾಮಾ ಕಂಪನಿ ಮತ್ತು ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲು ಬಹಳ ಫೇಮಸ್ ಆಗಿದ್ದಾರೆ. ಈ ನಟಿಗೆ ಒಂದು ಸಾರಿ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದು, ಆದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇವರಿಗೆ ದೊಡ್ಡ ಪ್ರೊಡಕ್ಷನ್ ಹೌಸ್ ಗಳಲ್ಲಿ ಕೆಲಸ ಮಾಡುವ ಅವಕಾಶ ಸಹ ಸಿಕ್ಕಿತ್ತು. ಗೀತು ಅವರು ಹೇಳಿರುವ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಒಂದು ಕಾರ್ಯಕ್ರಮ ನಡೆಯುವ ಸಮಯದಲ್ಲಿ, ಗೀತು ಅವರು ಕಾರ್ಯಕ್ರಮ ನಿರೂಪಣೆ ಮಾಡಬೇಕು ಎಂದು ಹೇಳಿದ್ದರಂತೆ.

geethu | ತೆರೆ ಹಿಂದಿನ ಮತ್ತೊಂದು ಮುಖ: ಮ್ಯಾನೇಜರ್ ಜೊತೆ ಸಲುಗೆಯಿಂದ ಜಾಸ್ತಿ ದುಡ್ಡು ಎಂದಾಗ ಈ ಸ್ಟಾರ್ ಮಾಡಿದ್ದೇನು ಗೊತ್ತೇ? ಕಹಿ ಅನುಭವ ಬಿಚ್ಚಿಟ್ಟ ಕಲಾವಿದೆ
ತೆರೆ ಹಿಂದಿನ ಮತ್ತೊಂದು ಮುಖ: ಮ್ಯಾನೇಜರ್ ಜೊತೆ ಸಲುಗೆಯಿಂದ ಜಾಸ್ತಿ ದುಡ್ಡು ಎಂದಾಗ ಈ ಸ್ಟಾರ್ ಮಾಡಿದ್ದೇನು ಗೊತ್ತೇ? ಕಹಿ ಅನುಭವ ಬಿಚ್ಚಿಟ್ಟ ಕಲಾವಿದೆ 2

ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಎಂದಮೇಲೆ, ಹಣ ಹೆಚ್ಚಾಗಿ ಸಿಗುತ್ತದೆ ಎಂದುಕೊಂಡಿದ್ದರಂತೆ ಗೀತು. ಆದರೆ ಕಾರ್ಯಕ್ರಮದ ಆಯೋಜಕರು ಗೀತು ಅವರಿಗೆ ಕರೆಮಾಡಿ, ನೀವು ನಮ್ಮ ಮ್ಯಾನೇಜರ್ ಜೊತೆ ಸಲುಗೆಯಿಂದ ಇದ್ದರೆ ಇನ್ನು ಹೆಚ್ಚಿನ ಹಣ ಕೊಡುತ್ತೇವೆ ಎಂದು ಹಳಿದ್ದರಂತೆ, ಆ ಮಾತು ಕೇಳಿ ಶಾಕ್ ಆದ ಗೀತು ಅವರು, ತಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದರಂತೆ. ಆ ರೀತಿ ಹೇಳಿದ ಬಳಿಕ ಕೂಡ ಪದೇ ಪದೇ ಕರೆ ಬರಲು ಶುರುವಾದ ಕಾರಣ, ಗೀತು ಅವರು, ಆ ರೀತಿ ಮಾತುಗಳು ಬಂದಮೇಲೆ, ಕೆಲಸ ಮಾಡುವುದು ಸರಿ ಅಲ್ಲ ಎಂದು ಅನ್ನಿಸಿ, ನಂಬರ್ ಬ್ಲಾಕ್ ಮಾಡಿಬಿಟ್ಟರಂತೆ. ಮಹಿಳೆಯರಿಗೆ ಹಿಂಸೆ ನೀಡುವ ಈ ರೀತಿಯ ಸಾಕಷ್ಟು ಘಟನೆಗಳು ಚಿತ್ರರಂಗದಲ್ಲಿ ನಡೆಯುತ್ತವೆ. ಅವುಗಳಲ್ಲಿ ಇದು ಕೂಡ ಒಂದು ಉದಾಹರಣೆ ಆಗಿದ್ದು, ಗೀತು ಅವರ ಹಾಗೆ ಹೆಣ್ಣುಮಕ್ಕಳು ಧೈರ್ಯವಾಗಿರಬೇಕು.

Comments are closed.