ಪಾಲಕರ ವಿರೋಧದ ನಡುವೆಯೇ ಪ್ರೀತಿ ಮಾಡಿ ಮದುವೆಯಾದ ಜೋಡಿಗಳು. ಆದರೆ ಮರು ದಿನವೇ ಹುಡುಗಿ ಏನು ಮಾಡಿದ್ದಾಳೆ ಗೊತ್ತೇ? ಗಂಡಿನಿಗೆ ಶಾಕ್ ಕೊಟ್ಟ ಪತ್ನಿ..

ಪ್ರಪಂಚದಲ್ಲಿ ಏನು ಬೇಕಾದರು ನಡೆಯಬಹುದು, ಇನ್ಯಾರು ನಮ್ಮನ್ನು ಪ್ರೀತಿಸುತ್ತಿರುವವರು, ನಾಳೆ ನಮ್ಮ ವಿರುದ್ಧವಾಗಿಯೂ ಮಾತನಾಡಬಹುದು. ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇತ್ತೀಚೆಗೆ ಜಲಜ ಎನ್ನುವ ಹುಡುಗಿ ಗಂಗಾಧರ ಎನ್ನುವ ಹುಡುಗನ ಜೊತೆಗೆ ತನ್ನ ಸ್ವಇಚ್ಛೆಯಿಂದ ಮದುವೆಯಾಗಿದ್ದಳು. ಈ ಮದುವೆ ಆಕೆಯ ಪೋಷಕರಿಗೆ ಇಷ್ಟವಿರಲಿಲ್ಲ. ಹಾಗಾಗಿ ಮದುವೆಯಾದ ಬಳಿಕ ಜಲಜಳನ್ನು ಆಕೆಯ ತಂದೆ ಮತ್ತು ಅವರ ಸ್ನೇಹಿತರು ಬಲವಂತವಾಗಿ ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದಾರೆ ಎನ್ನುವ ವಿಚಾರ ಸುದ್ದಿಯಾಗಿತ್ತು. ಆದರೆ ಈಗ ಆ ಪ್ರಕರಣ ಬೇರೆಯದೇ ತಿರುವು ಬಂದಿದೆ.. ಇದೀಗ ಆ ಹುಡುಗಿ ಜಲಜ ತನ್ನನ್ನು ಮದುವೆ ಆಗಿರುವ ಹುಡುಗನ ವಿರುದ್ಧವೇ ದೂರು ಕೊಟ್ಟಿದ್ದಾಳೆ..

ಜಲಜ ಮತ್ತು ಗಂಗಾಧರ್ ಕೆಲ ಸಮಯದಿಂದ ಪ್ರೀತಿಸುತ್ತಿದ್ದು, ಜಲಜೆಕ್ ಪೋಷಕರು ಒಪ್ಪಿಕೊಳ್ಳದೆ ಇದ್ದ ಕಾರಣ, ಇಬ್ಬರೇ ಮದುವೆಯಾಗಿದ್ದರು. ಜಲಜ ತಂದೆ ಆಕೆಯನ್ನು ಕರೆದುಕೊಂಡು ಹೋಗಿದ್ದರು. ಇದೀಗ ಜಲಜ, ಇದಕ್ಕೆ ವಿರುದ್ಧವಾಗಿ ಮಾತನಾಡಿದ್ದು, ತಂದೆ ತನ್ನನ್ನು ಕಿಡ್ನ್ಯಾಪ್ ಮಾಡಿಲ್ಲ, ತನ್ನ ಇಚ್ಛೆಯಿಂದಲೇ ಮನೆಯಿಂದ ಹೊರಬಂದಿರುವುದಾಗಿ ಹೇಳಿದ್ದಾಳೆ. ಗಂಗಾಧರ್ ಜೊತೆ ಇಷ್ಟಪಟ್ಟು ಮದುವೆಯಾಗಿದ್ದು, ಆದರೆ ಮದುವೆಯ ನಂತರ ಆತನಿಗೆ ಬೇರೊಬ್ಬರ ಜೊತೆಗೆ ಸಂಬಂಧ ಇತ್ತು ಎಂದು ಗೊತ್ತಾದ ಬಳಿಕ, ತಾನೇ ತನ್ನ ತಂದೆಯ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದು, ಅಂದು ರಾತ್ರಿ ತಂದೆ ಮನೆಯ ಬಳಿ ಬಂದಾಗ ಅವರ ಜೊತೆ ಹೋಗಿರುವುದಾಗಿ ಜಲಜ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ತಂದೆಯ ವಿರುದ್ಧವೇ ದೂರು ನೀಡಿದ್ದರು..

jalaja | ಪಾಲಕರ ವಿರೋಧದ ನಡುವೆಯೇ ಪ್ರೀತಿ ಮಾಡಿ ಮದುವೆಯಾದ ಜೋಡಿಗಳು. ಆದರೆ ಮರು ದಿನವೇ ಹುಡುಗಿ ಏನು ಮಾಡಿದ್ದಾಳೆ ಗೊತ್ತೇ? ಗಂಡಿನಿಗೆ ಶಾಕ್ ಕೊಟ್ಟ ಪತ್ನಿ..
ಪಾಲಕರ ವಿರೋಧದ ನಡುವೆಯೇ ಪ್ರೀತಿ ಮಾಡಿ ಮದುವೆಯಾದ ಜೋಡಿಗಳು. ಆದರೆ ಮರು ದಿನವೇ ಹುಡುಗಿ ಏನು ಮಾಡಿದ್ದಾಳೆ ಗೊತ್ತೇ? ಗಂಡಿನಿಗೆ ಶಾಕ್ ಕೊಟ್ಟ ಪತ್ನಿ.. 2

ಇನ್ನು ಜಲಜ ತಂದೆ ಹೇಳುವ ಪ್ರಕಾರ, ಆ ದಿನ ಅವರು ಆಸ್ಪತ್ರೆಯಲ್ಲಿದ್ದರು ಎಂದಿದ್ದು, ಅವರ ಸ್ನೇಹಿತರು, ಮಗಳನ್ನು ಕರೆದುಕೊಂಡು ಬಂದಿರುವುದಾಗಿ ಹೇಳಿದ್ದಾರೆ. ಇತ್ತ ಗಂಗಾಧರ್ ಸಹ ಈ ವಿಚಾರದ ಬಗ್ಗೆ ಮಾತನಾಡಿ, ಜಲಜ ತನ್ನ ವಿರುದ್ಧ ಮಾಡುತ್ತಿರುವ ಅಪರಾಧ ಎಲ್ಲವೂ ಸುಳ್ಳು. ತನ್ನ ಮೇಲೆ ಇಷ್ಟ ಇಲ್ಲದೆ ಹೋದರೆ, ಅದನ್ನು ಎದುರು ಬಂದು ಆಕೆ ಹೇಳಿದರೆ, ಎಲ್ಲೋ ಒಂದು ಕಡೆ ಚೆನ್ನಾಗಿರು ಎಂದು ಹೇಳಿ ನಾನು ಸುಮ್ಮನಾಗುತ್ತೇನೆ, ಅದು ಬಿಟ್ಟು ಈ ರೀತಿ ಇಲ್ಲಸಲ್ಲದ ಆಪಾದನೆ ಹೊರಿಸುವುದು ಸರಿ ಅಲ್ಲ, ಇದ್ಯಾವುದನ್ನು ಜಲಜ ಮಾಡುತ್ತಿಲ್ಲ, ಆಕೆಯ ಮನೆಯವರ ಬಲವಂತಕ್ಕೆ ಈ ರೀತಿ ಮಾಡಿದ್ದಾಳೆ ಎಂದು ಹೇಳಿದ್ದಾರೆ ಗಂಗಾಧರ್. ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

Comments are closed.