ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ 1 ಚಿತ್ರ ಬಿಡುಗಡೆಯಾದ ನಂತರ ಕನ್ನಡ ಚಿತ್ರರಂಗದ ಕುರಿತಂತೆ ಜಾಗತಿಕವಾಗಿ ಯಾವ ಮಟ್ಟದ ಮಾತುಕತೆಗಳು ನಡೆಯುತ್ತಿದ್ದವು ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಎನ್ನುವುದು ಕೆಜಿಎಫ್ ಚಾಪ್ಟರ್ 1 ಚಿತ್ರದ ನಂತರ ದೊಡ್ಡಮಟ್ಟದಲ್ಲಿ ವಿಸ್ತರಣೆಯಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಬರೋಬ್ಬರಿ ಮೂರರಿಂದ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರು ಕಾದಿದ್ದರು. ಈಗ ಅವರ ಕಾಯುವಿಕೆಗೂ ಕೂಡ ಸಾರ್ಥಕತೆ ಸಿಕ್ಕಿದೆ ಎಂಬುದಾಗಿ ಹೇಳಬಹುದಾಗಿದೆ.

kgf2 missing paatragalu | ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ??
ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ?? 4

ಮೊದಲ ಕೆಜಿಎಫ್ ಚಾಪ್ಟರ್ 1 ರ ಕುರಿತಂತೆ ಹೇಳುವುದಾದರೆ ಇದರಲ್ಲಿ ಕೇವಲ ರಾಕಿಂಗ್ ಸ್ಟಾರ್ ಯಶ್ ರವರು ನಿರ್ವಹಿಸಿರುವ ಅಂತಹ ರಾಕಿ ಪಾತ್ರವಲ್ಲದೇ ಹಲವಾರು ಪಾತ್ರಗಳು ನಮ್ಮ ಕಣ್ಮನವನ್ನು ಸೆಳೆದಿವೆ. ಕಥೆಯನ್ನು ಹೇಳುವ ಹುಚ್ಚನ ಪಾತ್ರವಿರಬಹುದು ನಿರೂಪಕಿಯಾಗಿ ಮಾಳವಿಕಾ ಅವಿನಾಶ್ ರವರ ಪಾತ್ರವಿರಬಹುದು ಅಥವಾ ಆನಂದ ಇಂಗಳಿಗೆ ಆಗಿ ಅನಂತ್ ನಾಗ್ ರವರ ಪಾತ್ರ ಹರೀಶ್ ರವರ ಚಾಚಾ ಪಾತ್ರ. ಹೀಗೆ ಹತ್ತು ಹಲವಾರು ಪಾತ್ರಗಳು ತಮ್ಮದೇ ಆದಂತಹ ಪ್ರಾಮುಖ್ಯತೆಯನ್ನು ಕೆಜಿಎಫ್ ಚಾಪ್ಟರ್ ಒಂದು ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ತೋರಿಸಿ ಸಾಬೀತುಪಡಿಸಿದ್ದವು. ಪ್ರತಿಯೊಂದು ಪಾತ್ರವನ್ನು ಅಚ್ಚುಕಟ್ಟಾಗಿ ಹೆಣೆದಿರುವಂತಹ ಪ್ರಶಾಂತ್ ನೀಲ್ ರವರ ಯೋಚನ ಶಕ್ತಿಗೆ ನಾವು ಸಲಾಂ ಹೊಡೆಯಲೇ ಬೇಕು.

ಇನ್ನು ಕೆಜಿಎಫ್ ಚಾಪ್ಟರ್ ಒಂದು ಚಿತ್ರವನ್ನು ನೋಡಿರುವವರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿದರೆ ನಾಲ್ಕು ಪ್ರಮುಖ ಪಾತ್ರಗಳು ಇಲ್ಲದೆ ಇರುವುದು ಸರಿಯಾಗಿ ಎದ್ದುಕಾಣುತ್ತದೆ. ಹೀಗಾಗಿ ಇಂದಿನ ಲೇಖನದಲ್ಲಿ ಆ ನಾಲ್ಕು ಪಾತ್ರಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ. ಮೊದಲನೆಯದು ಪ್ರಮುಖವಾಗಿ ಅನಂತನಾಗ್ ರವರು ನಿರ್ವಹಿಸಿರುವ ಆನಂದ್ ಇಂಗಳಿಗಿ ಪಾತ್ರ. ಈ ವಿಚಾರ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಗೊತ್ತಾಗಿತ್ತು ಆದರೆ ಪ್ರಶಾಂತ್ ನೀನು ರವರು ಮೊದಲು ಇದನ್ನು ಸುಳ್ಳು ಎಂದು ಹೇಳಿದ್ದರು. ನಂತರ ಕೊನೆಗೆ ಇದಕ್ಕೆ ಕಾರಣವಿದೆ ಎಂಬುದಾಗಿ ಹೇಳಿದ್ದರು. ಚಿತ್ರವನ್ನು ನೋಡಿರುವವರಿಗೆ ಈ ಕಾರಣ ಏನು ಎನ್ನುವುದು ಸಂಪೂರ್ಣವಾಗಿ ಅರ್ಥವಾಗಿದೆ ಎಂಬುದಾಗಿ ತಿಳಿದುಬರುತ್ತದೆ.

suresh kgf2 | ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ??
ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ?? 5

ಎರಡನೇದಾಗಿ ನಟ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ ಬಿ ಸುರೇಶ್ ರವರು ಕೂಡ ವಿಠ್ಠಲ್ ಎನ್ನುವ ಪಾತ್ರದಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕೆಜಿಎಫ್ ಚಾಪ್ಟರ್ 1 ಚಿತ್ರದಲ್ಲಿ ಇಂಟರ್ವಲ್ ನಂತರ ಯಶ್ ರವರ ಜೊತೆಗೆ ಅವರು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಎಲ್ಲಿಯೂ ಕೂಡ ಅವರ ಸುಳಿವು ಸಹ ಕಂಡುಬರುವುದಿಲ್ಲ. ಇಲ್ಲಿ ಸರಿಯಾದ ಕಾರಣವನ್ನು ಕೂಡ ನೀಡಿದ ಹಾಗಾಗಿ ಇವರ ಪಾತ್ರ ಅಚಾನಕ್ಕಾಗಿ ಕಾಣೆಯಾಗಲು ಕಾರಣವೇನು ಎನ್ನುವುದು ಕೂಡ ತಿಳಿದುಬಂದಿಲ್ಲ.

ಇನ್ನು ಮೂರನೇದಾಗಿ ಗರುಡನ ಮನೆಯಲ್ಲಿ ಕುಲಕರ್ಣಿ ಎನ್ನುವ ಪಾತ್ರವನ್ನು ನಿರ್ವಹಿಸಿರುವ ಅಶ್ವಥ್ ನಿನಾಸಂ ರವರು. ಗರುಡನ ತಮ್ಮ ವಿರಾಟ್ ಪಾತ್ರವು ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ಇದಕ್ಕೆ ಕಾರಣವನ್ನು ಕೂಡ ನಿರ್ದೇಶಕರು ನೀಡಿದ್ದು ರಾಕಿ ಇವನನ್ನು ಮುಗಿಸಿರುತ್ತಾನೆ. ಆದರೆ ಕುಲಕರ್ಣಿ ಪಾತ್ರದ ಕುರಿತಂತೆ ಎಲ್ಲೂ ಕೂಡ ಕ್ಲಾರಿಫಿಕೇಶನ್ ನೀಡಿಲ್ಲ. ಹಾಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕುಲಕರಣಿ ಪಾತ್ರ ಎಲ್ಲಿ ಹೋಯಿತು ಎನ್ನುವುದರ ಕುರಿತಂತೆ ಪ್ರೇಕ್ಷಕರಿಗೆ ಕುತೂಹಲ ಮೂಡುವುದು ಸುಳ್ಳಲ್ಲ.

kgf | ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ??
ಕೆಜಿಎಫ್ ಚಿತ್ರದ ಮೊದಲ ಭಾಗದಲ್ಲಿರುವ ಪ್ರಮುಖ ಕಲಾವಿದರು ಕೆಜಿಎಫ್ ಚಾಪ್ಟರ್ 2ರಲ್ಲಿ ಇಲ್ಲ, ಯಾರೆಲ್ಲಾ ಗೊತ್ತಾ?? ಆ ನಾಲ್ಕು ಮುಖ್ಯ ಪಾತ್ರಗಳು ಯಾವ್ಯಾವು ಗೊತ್ತೇ?? 6

ನಾಲ್ಕನೆಯದಾಗಿ ಕೆಜಿಎಫ್ ಚಾಪ್ಟರ್ 1 ಚಿತ್ರದ ಸಮಯದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ ಹುಚ್ಚನ ಪಾತ್ರ. ನರಾಚಿಯಲ್ಲಿ ಮಕ್ಕಳಿಗೆ ಕಥೆ ಹೇಳುವ ಸಂದರ್ಭದಲ್ಲಿ ಅವರ ಡೈಲಾಗ್ ಡೆಲಿವರಿ ಇಂದಿಗೂ ಕೂಡ ಪ್ರತಿಯೊಬ್ಬರ ಬಾಯಿಯಲ್ಲಿ ಜನಪ್ರಿಯವಾಗಿದೆ. ಆದರೆ ದುರದೃಷ್ಟವಶಾತ್ ಇವರು ಕೆಜಿಎಫ್ ಚಾಪ್ಟರ್ 1 ಚಿತ್ರದ ಬಿಡುಗಡೆಗೂ ಮೊದಲೇ ಅಕಾಲಿಕವಾಗಿ ಮರಣವನ್ನು ಹೊಂದಿದ್ದಾರೆ. ಹೀಗಾಗಿ ಇವರನ್ನು ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಎಲ್ಲರೂ ಮಿಸ್ ಮಾಡಿಕೊಂಡಿದ್ದಾರೆ.

ಇನ್ನು ಹತ್ತು ಹಲವಾರು ಪಾತ್ರಗಳು ಇಲ್ಲಿ ಕಾಣಿಸಿಕೊಂಡಿಲ್ಲ ಎನ್ನುವ ಕೊರಗು ಪ್ರೇಕ್ಷಕರಲ್ಲಿ ಇದೆ ಆದರೆ ಕೆಜಿಎಫ್ ಚಾಪ್ಟರ್ 2 ದಿದ್ದರೆ ನೀಡಿರುವ ಸಿನಿಮಾ ಅನುಭವ ನಿಜಕ್ಕೂ ಕೂಡ ಅವಿಸ್ಮರಣೀಯ. ಎಲ್ಲರೂ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ನಿರ್ಮಿಸಿರುವ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಜಿಎಫ್ ಚಾಪ್ಟರ್ 3 ಚಿತ್ರದ ಅಧಿಕೃತ ಘೋಷಣೆಗಾಗಿ ಕೂಡ ಕಾತರರಾಗಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.