ಆರ್ಸಿಬಿ ತಂಡ ಅದೊಂದು ತಪ್ಪು ಮಾಡದೆ ಇದ್ದರೇ ಖಂಡಿತಾ ಉತ್ತಮ ಪ್ರದರ್ಶನ ನೀಡಲಿದೆ ಎಂದ ಮಾಜಿ ಕ್ರಿಕೆಟರ್. ಆರಂಭಿಕ ಸ್ಥಾನಕ್ಕೆ ಯಾರು ಫಿಕ್ಸ್ ಆಗಬೇಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ 2022 ರಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಿದೆ. ಆದರೆ ಆರಂಭಿಕ ಆಟಗಾರರಲ್ಲಿ ಅಸಮತೋಲನ ಹೆಚ್ಚಾಗಿ ಕಂಡುಬರುತ್ತಿದೆ. ಇದು ಕೊಂಚ ಮಟ್ಟಿಗೆ ತಂಡದ ತಲೆಬಿಸಿಯ ವಿಚಾರವಾಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ನಿಮಗೆ ತಿಳಿದಿರುವಂತೆ ಮೊದಲ ಪಂದ್ಯವನ್ನು ಸೋತಿತ್ತು. ನಂತರ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದುಕೊಂಡು ಬೀಗಿತ್ತು.

ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಗೆ ಸೋತಿತ್ತಾದರೂ ಕೂಡ ವೀರೋಚಿತ ಸೋಲನ್ನು ಕಂಡಿತ್ತು. ಇನ್ನು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ರನ್ನುಗಳ ರೋಚಕ ಗೆಲುವನ್ನು ಸಾಧಿಸಿತ್ತು. ಮಧ್ಯಮ ಹಾಗೂ ಕೆಳವರ್ಗದ ಬ್ಯಾಟಿಂಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೀರಿಸುವ ತಂಡ ಮತ್ತೊಂದಿಲ್ಲ ಎಂಬುದಾಗಿ ಸಾಬೀತಾಗಿದೆ. ಇದಕ್ಕೆ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮ್ಮದ್ ರವರ ಬ್ಯಾಟಿಂಗ್ ಪ್ರದರ್ಶನವೇ ಸಾಕ್ಷಿ ಎಂದು ಹೇಳಬಹುದಾಗಿದೆ. ಆದರೆ ಆರಂಭಿಕ ಬ್ಯಾಟಿಂಗ್ನಲ್ಲಿ ಸಾಕಷ್ಟು ಸತತವಾಗಿ ವಿಫಲತೆ ಕಂಡುಬರುತ್ತಿದೆ. ಹೀಗಾಗಿ ಎಲ್ಲರೂ ಕೂಡ ಆರಂಭಿಕ ಆಟಗಾರರನ್ನು ಎಂದರೆ ಡುಪ್ಲೆಸಿಸ್ ಅನುಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ರವರನ್ನು ಅವರವರ ಸ್ಥಾನದಿಂದ ಬದಲಿಸಿ ಎನ್ನುವುದಾಗಿ ಸಲಹೆಯನ್ನು ನೀಡಲು ಆರಂಭಿಸಿದ್ದಾರೆ.

hogg about rcb openers | ಆರ್ಸಿಬಿ ತಂಡ ಅದೊಂದು ತಪ್ಪು ಮಾಡದೆ ಇದ್ದರೇ ಖಂಡಿತಾ ಉತ್ತಮ ಪ್ರದರ್ಶನ ನೀಡಲಿದೆ ಎಂದ ಮಾಜಿ ಕ್ರಿಕೆಟರ್. ಆರಂಭಿಕ ಸ್ಥಾನಕ್ಕೆ ಯಾರು ಫಿಕ್ಸ್ ಆಗಬೇಕಂತೆ ಗೊತ್ತೇ??
ಆರ್ಸಿಬಿ ತಂಡ ಅದೊಂದು ತಪ್ಪು ಮಾಡದೆ ಇದ್ದರೇ ಖಂಡಿತಾ ಉತ್ತಮ ಪ್ರದರ್ಶನ ನೀಡಲಿದೆ ಎಂದ ಮಾಜಿ ಕ್ರಿಕೆಟರ್. ಆರಂಭಿಕ ಸ್ಥಾನಕ್ಕೆ ಯಾರು ಫಿಕ್ಸ್ ಆಗಬೇಕಂತೆ ಗೊತ್ತೇ?? 2

ಆದರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಾಗಿರುವ ಬ್ರಾಡ್ ಹಾಗ್ ರವರು ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ಹೇಳಿದ್ದಾರೆ. ಹೌದು ಆಟಗಾರರ ಬದಲಾವಣೆ ಮಾಡುವುದಕ್ಕಿಂತ ಹೆಚ್ಚಾಗಿ ಡುಪ್ಲೆಸಿಸ್ ರವರ ಜೊತೆಗೆ ಅನುಜ್ ರಾವತ್ ರವರನ್ನು ಓಪನಿಂಗ್ ಗೆ ಕಳಿಸುವುದು ಉತ್ತಮ. ಯಾಕೆಂದರೆ ಮೂರನೇ ಕ್ರಮಾಂಕದಲ್ಲಿ ಒತ್ತಡವನ್ನು ನಿಭಾಯಿಸುವ ಚಾಣಾಕ್ಷತೆ ವಿರಾಟ್ ಕೊಹ್ಲಿ ಅವರಲ್ಲಿದೆ. ಮೂರನೇ ಕ್ರಮಾಂಕದಲ್ಲಿ ಅನುಜ್ ಒತ್ತಡವನ್ನು ನಿಭಾಯಿಸುವ ಆಟವನ್ನು ಆಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ. ಹೀಗಾಗಿ ಈ ವಿಧಾನವನ್ನು ಅನುಸರಿಸಿದರೆ ಖಂಡಿತವಾಗಿ ಬ್ಯಾಟಿಂಗ್ ವಿಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮತೋಲನವನ್ನು ಸಾಧಿಸಲಿದೆ ಎನ್ನುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.