ಒಂದು ಕಾಲದ ನಟ, ಅದ್ಬುತ ಪ್ರತಿಭೆ ವಿನೋದ್ ರಾಜ್ ರವರು, ಇಂದಿನ ಟಾಪ್ ನಟ ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಕಿಂಗ್ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದರು. ಆದರೆ ಚಿತ್ರರಂಗದವರೇ ರಚಿಸಿದ ಸಂಚಿನಿಂದಾಗಿ ವಿನೋದ್ ರಾಜ್ ಕನ್ನಡ ಚಿತ್ರರಂಗದಿಂದ ದೂರವಾಗುವಂತೆ ಆಯಿತು ಎಂದರೆ ತಪ್ಪಾಗಲಾರದು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದಿಂದ ಹೊರ ಬಂದ ನಂತರ ತಮ್ಮ ತಾಯಿಯವರ ಜೊತೆಗೆ ನೆಲಮಂಗಲದಲ್ಲಿ ಕೃಷಿ ಜೀವನವನ್ನು ನಡೆಸುವ ಮೂಲಕ ಶಾಂತಿ ಹಾಗೂ ಸೌಹಾರ್ದಯುತ ಜೀವನವನ್ನು ನಡೆಸುತ್ತಿದ್ದಾರೆ.

ಆದರೂ ಕೂಡ ಆಗಾಗ ಕನ್ನಡ ಚಿತ್ರರಂಗ ಪರವಾಗಿ ಕುರಿತಂತೆ ತಮ್ಮ ಧ್ವನಿಯನ್ನು ಒಟ್ಟು ಗೂಡಿಸುತ್ತಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕೂಡ ತಮ್ಮ ಆಸ್ತಿಯನ್ನು ಮಾರಿ ಕಷ್ಟದಲ್ಲಿರುವವರಿಗೆ ಆರ್ಥಿಕವಾಗಿ ಹಾಗೂ ಔಷಧಿ ಮತ್ತು ಆಹಾರಕ್ಕಾಗಿ ಕೂಡ ಸಹಾಯವನ್ನು ಮಾಡಿ ಸುದ್ದಿಯಾಗಿದ್ದರು. ಇಷ್ಟು ಮಾತ್ರವಲ್ಲದೆ ನೆಲಮಂಗಲದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡ ಕಟ್ಟಿಸಿಕೊಟ್ಟಿದ್ದರು. ತಾವು ಕಷ್ಟದಲ್ಲಿದ್ದರೂ ಕೂಡ ತಮ್ಮ ಸುತ್ತಮುತ್ತಲು ಇರುವವರಿಗೆ ಕಷ್ಟ ಆಗಬಾರದು ಎನ್ನುವ ರೀತಿಯಲ್ಲಿ ನಿಸ್ವಾರ್ಥ ಜೀವನವನ್ನು ಇಬ್ಬರೂ ಕೂಡ ನಡೆಸಿಕೊಂಡು ಬಂದಿದ್ದಾರೆ. ಇನ್ನು ಇತ್ತೀಚಿಗಷ್ಟೇ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದ ಎಲ್ಲಾ ನಟರ ಕುರಿತಂತೆ ಮಾತನಾಡುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತಂತೆ ಕೂಡ ಹೊಗಳಿದ್ದಾರೆ. ಹಾಗಿದ್ದರೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

vinod raj darshan | ಒಂದು ಕಾಲದ ನಟ, ಅದ್ಬುತ ಪ್ರತಿಭೆ ವಿನೋದ್ ರಾಜ್ ರವರು, ಇಂದಿನ ಟಾಪ್ ನಟ ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ??
ಒಂದು ಕಾಲದ ನಟ, ಅದ್ಬುತ ಪ್ರತಿಭೆ ವಿನೋದ್ ರಾಜ್ ರವರು, ಇಂದಿನ ಟಾಪ್ ನಟ ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? 2

ಆರಂಭದ ದಿನದಲ್ಲಿ ಎಲ್ಲರೂ ಹೇಳಿದ ಹಾಗೆ ಕೇಳುವ ಪರಿಸ್ಥಿತಿ ಅವರಲ್ಲಿ ನಿರ್ಮಾಣವಾಗಿತ್ತು ಆದರೆ ಇಂದು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಹೀಗಾಗಿ ಒಬ್ಬ ಕಲಾವಿದನಾಗಿ ಬೆಳೆಯುವುದು ಎಷ್ಟು ಕಷ್ಟ ಎನ್ನುವುದು ಅವರಿಗೆ ಗೊತ್ತು ಅದಕ್ಕಾಗಿಯೇ ಇಂದು ಚಿತ್ರರಂಗಕ್ಕೆ ಕಾಲಿಟ್ಟಿರುವ ಹೊಸ ಕಲಾವಿದರಿಗೆ ಅವರು ಸಪೋರ್ಟ್ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಕೇವಲ ಸಿನಿಮಾದ ಮೂಲಕ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಅವರಿಗೆ ದೇವರು ಇನ್ನಷ್ಟು ಸಹಾಯ ಮಾಡುವ ಶಕ್ತಿಯನ್ನು ನೀಡಲಿ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.