News from ಕನ್ನಡಿಗರು

ಭಾರತ ತಂಡಕ್ಕೆ ಸೇರಿಕೊಳ್ಳದಿರಲು ಕಾರಣ ತಿಳಿಸಿ ಭಾವುಕರಾದ ರಾಹುಲ್: ಯಾಕೆ ತಂಡಕ್ಕೆ ಆಯ್ಕೆ ಆಗಿಲ್ಲ ಅಂತೇ ಗೊತ್ತೇ?? ರಾಹುಲ್ ಹೇಳಿದಿಷ್ಟು.

8

ನಮಸ್ಕಾರ ಸ್ನೇಹಿತರೆ ಈ ಬಾರಿಯ ಐಪಿಎಲ್ ನಲ್ಲಿ ಕೆಎಲ್ ರಾಹುಲ್ ರವರು 500ಕ್ಕೂ ಅಧಿಕಾರಗಳನ್ನು ಬಾರಿಸುವ ಮೂಲಕ ಎರಡನೇ ಅತ್ಯಧಿಕ ಸ್ಕೋರರ್ ಆಗಿ ಕಾಣಿಸಿಕೊಳ್ಳುವ ಮೂಲಕ ಖಂಡಿತವಾಗಿ ಅಂತರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಈ ಬಾರಿ ಸ್ಥಿರ ಪ್ರದರ್ಶನವನ್ನು ನೀಡುವ ಏಕೈಕ ಭಾರತೀಯ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಭರವಸೆಯನ್ನು ಹೊಂದಿದ್ದರು.

ಆದರೆ ಅದೇ ಹಿನ್ನೆಲೆಯಲ್ಲಿ ಐಪಿಎಲ್ ಮುಗಿದ ನಂತರ ನಡೆದ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಕೆಎಲ್ ರಾಹುಲ್ ರವರನ್ನು ಹಿರಿಯ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ನಾಯಕನಾಗಿ ಆಯ್ಕೆ ಮಾಡಲಾಗಿತ್ತು ಆದರೆ ಇಂಜುರಿಯ ಸಮಸ್ಯೆಯ ಕಾರಣದಿಂದಾಗಿ ತಂಡದಿಂದ ಹೊರ ಬಿದ್ದರು. ಇದಾದ ನಂತರ ನಡೆದ ಐರ್ಲೆಂಡ್ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೂಡ ಅವರು ತಂಡದಲ್ಲಿ ಆಯ್ಕೆಯಾಗಲಿಲ್ಲ. ಅಷ್ಟೇ ಯಾಕೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ರವರು ಕಾಮ್ಯಾಕ್ ಮಾಡುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು ಆದರೆ ಅಲ್ಲಿ ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಕಾದಿತ್ತು. ಇದೇ ರೀತಿ ನಡೆದರೆ ಖಂಡಿತವಾಗಿ ಮುಂದೆ ಪ್ರಮುಖವಾಗಿ ಕಾಣಿಸಿಕೊಳ್ಳಲಿರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಕೆ ಎಲ್ ರಾಹುಲ್ ರವರು ಗೈರು ಹಾಜರಾಗಬಹುದು ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಹಾಗೂ ಸ್ಪಷ್ಟೀಕರಣ ನೀಡುತ್ತಾ ಕೆಎಲ್ ರಾಹುಲ್ ರವರು ಸ್ವತಹ ಖುದ್ದಾಗಿ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಆರೋಗ್ಯ ಹಾಗೂ ಫಿಟ್ನೆಸ್ ಸಮಸ್ಯೆಯಿಂದಾಗಿ ನಾನು ಶತ ಜಗತ್ತಿಗೆ ಒಳಗಾಗಿದ್ದೆ ವೆಸ್ಟ್ ಇಂಡೀಸ್ ಸರಣಿಯನ್ನು ಆಡಬೇಕು ಎಂಬುದಾಗಿ ಅಭ್ಯಾಸವನ್ನು ಕೂಡ ಆರಂಭಿಸಿದ್ದೆ. ಜಿಂಬಾಬ್ವೆ ಸರಣಿಯನ್ನು ಆಡಲು ಸಿದ್ದನಾಗಿದ್ದೆ ಆದರೆ ಅಲ್ಲಿ ಕೂಡ ಮಹಾಮಾರಿ ಪಾಸಿಟಿವ್ ಆಗಿತ್ತು ಎಂಬುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿ ಹೇಗಾದರೂ ಮಾಡಿ ತಂಡವನ್ನು ಪ್ರತಿನಿಧಿಸಬೇಕು ಅದೇ ನನ್ನ ಪ್ರಮುಖ ಧ್ಯೇಯ ಟೀಮ್ ಇಂಡಿಯಾಗೆ ಆಡಬೇಕು ಅದೇ ನನ್ನ ಗುರಿ ಎಂಬುದಾಗಿ ಕೆ ಎಲ್ ರಾಹುಲ್ ರವರು ಹೇಳಿಕೊಂಡಿದ್ದಾರೆ.

Leave A Reply

Your email address will not be published.