ಕೆಲವೊಂದು ಸೆಕೆಂಡ್ ಗಳ ವಿಡಿಯೋ ಈಕೆಯ ಜೀವನವನ್ನೇ ಹಾಳು ಮಾಡಿತ್ತು, ಅಂತದ್ದು ಏನಿತ್ತು ಗೊತ್ತೇ ಆ ವಿಡಿಯೋ ದಲ್ಲಿ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ನೀಲಿಕಣ್ಣಿನ ಸುಂದರಿಯಾಗಿ ಮಿಂಚಿದ ನಟಿ ಮಂದಾಕಿನಿ ಅವರು ಇತ್ತೀಚಿನ ದಿನಗಳಲ್ಲಿ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮೊದಲಿಗೆ ಬಾಲಿವುಡ್ ಚಿತ್ರರಂಗಕ್ಕೆ ಆಕೆ ಬಂದಾಗ ಎಲ್ಲರೂ ಕೂಡ ಆಕೆಯನ್ನು ತಿರಸ್ಕರಿಸಿದ್ದರು. ನಂತರ ಆಕೆಯನ್ನು ಕುಮಾರ್ ಗೌರವ್ ಜೊತೆಗೆ ನಟಿಸಲು ನಿರ್ದೇಶಕರು ಒಬ್ಬರು ಚಿಂತಿಸುತ್ತಾರೆ. ಆ ಸಂದರ್ಭದಲ್ಲಿ ಹೊಸ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದ ಕುಮಾರ್ ಗೌರವ ಮಂದಾಕಿನಿ ಅವರ ಜೊತೆ ನಟಿಸಲು ತಿರಸ್ಕರಿಸುತ್ತಾರೆ.

ಇದರಿಂದ ಬೇಸರಗೊಂಡ ಮಂದಾಕಿನಿ ಮತ್ತೆ ತಮ್ಮ ಊರಿಗೆ ಮರಳಿ ವಾಪಸ್ ಬರುತ್ತಾರೆ. ಅಂದಿನ ಕಾಲದಲ್ಲಿ ರಾಜ್ ಕಪೂರ್ ರವರು ಆಂಗ್ಲೋ ಇಂಡಿಯನ್ ಮುಖಚರ್ಹೆ ಹೊಂದಿರುವ ನಾಯಕಿಯ ಹುಡುಕಾಟದಲ್ಲಿದ್ದರೂ ಆ ಸಂದರ್ಭದಲ್ಲಿ ಆಡಿಷನ್ ನಲ್ಲಿ ಮಂದಾಕಿನಿ ಪಾಲ್ಗೊಂಡು ಯಶಸ್ವಿಯಾಗುತ್ತಾರೆ. ನಂತರ ರಾಮ್ ತೇರಿ ಗಂಗಾ ಮೈಲಿ ಸಿನಿಮಾದಲ್ಲಿ ರಾಜೀವ್ ಕಪೂರ್ ರವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಚಿತ್ರಗಳ ವಿಚಾರವಾಗಿಯೂ ಕೂಡ ಅವರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದರಲ್ಲೂ ಅವರ ಸಿನಿಮಾ ಜೀವನಕ್ಕೆ ಕುತ್ತು ತಂದದ್ದು ಆ ಕೆಲವು ಸೆಕೆಂಡುಗಳ ವಿಡಿಯೋ ಕ್ಲಿಪ್.

mandakini | ಕೆಲವೊಂದು ಸೆಕೆಂಡ್ ಗಳ ವಿಡಿಯೋ ಈಕೆಯ ಜೀವನವನ್ನೇ ಹಾಳು ಮಾಡಿತ್ತು, ಅಂತದ್ದು ಏನಿತ್ತು ಗೊತ್ತೇ ಆ ವಿಡಿಯೋ ದಲ್ಲಿ??
ಕೆಲವೊಂದು ಸೆಕೆಂಡ್ ಗಳ ವಿಡಿಯೋ ಈಕೆಯ ಜೀವನವನ್ನೇ ಹಾಳು ಮಾಡಿತ್ತು, ಅಂತದ್ದು ಏನಿತ್ತು ಗೊತ್ತೇ ಆ ವಿಡಿಯೋ ದಲ್ಲಿ?? 2

ಹೌದು ಗೆಳೆಯರೇ ಕ್ರಿಕೆಟ್ ಸ್ಟೇಡಿಯಂ ನಲ್ಲಿ ದಾವುದ್ ಇಬ್ರಾಹಿಂ ಜೊತೆಗೆ ಮಂದಾಕಿನಿ ಕ್ರಿಕೆಟ್ ವೀಕ್ಷಿಸಿರುವ ವಿಡಿಯೋ ವೈರಲ್ ಆಗಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಗದ್ದಲವನ್ನು ಸೃಷ್ಟಿಸಿತ್ತು. ಇವರು ಭೂಗತ ಲೋಕದ ದೊರೆಯ ಜೊತೆಗೆ ಇರುವ ವಿಡಿಯೋ ವೈರಲ್ ಆದಮೇಲೆ ಇವರಿಗೆ ಸಿಗುವ ಸಿನಿಮಾ ಅವಕಾಶಗಳು ಕಡಿಮೆ ಆಯಿತು. ಮಂದಾಕಿನಿ ಇದನ್ನು ನೇರ ನೇರವಾಗಿ ತಿರಸ್ಕರಿಸಿದರು ಕೂಡ ಅಪವಾದ ಕಡಿಮೆಯಾಗಲಿಲ್ಲ. ಇದಾದ ನಂತರ ಒಂದು ಲೆಕ್ಕದಲ್ಲಿ ಸಂಪೂರ್ಣವಾಗಿ ಬಾಲಿವುಡ್ ಚಿತ್ರರಂಗದಿಂದ ಅವರು ಕಣ್ಮರೆಯಾಗಿ ಬಿಡುತ್ತಾರೆ. 90 ರಲ್ಲಿ ಡಾ ಕಗ್ಯೂರ್ ಟಿ ರಿಂಪೋಚೆ ಠಾಕೂರ್ ರವರ ಜೊತೆಗೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಪಡೆಯುತ್ತಾರೆ ಆದರೆ ಮತ್ತೆಂದು ಸಿನಿಮಾದ ಕಡೆಗೆ ತಲೆ ಹಾಕಿ ಕೂಡ ನೋಡುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗೆ ಬರಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಸುದ್ದಿ ಇದೆ.

Comments are closed.