ಕೆ ಎಂ ಎಫ್ ಮನ್ ಮುಲ್ ನಲ್ಲಿ ಭರ್ತಿಯಾಗಬೇಕಿದೆ ವಿವಿಧ 187 ಹುದ್ದೆಗಳು, ಪೋಸ್ಟ್ ಮೂಲಕವೇ ಅರ್ಜಿ ಸಲ್ಲಿಸಿ, ತಿಂಗಳಿಗೆ 97 ಸಾವಿರ ಸಂಬಳ.

ನಮಸ್ಕಾರ ಸ್ನೇಹಿತರೇ, ಕೆಎಂಎಫ್ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಗೆಜ್ಜಲಗೆರೆಯಲ್ಲಿ 187 ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ಟೆಕ್ನಿಷಿಯನ್, ಎಕ್ಸ್ಟೆನ್ಶನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ನಿಮಗೂ ಆಸಕ್ತಿ ಇದ್ದರೆ ಅರ್ಜಿ ಸಲ್ಲಿಸಿ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಇಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ನೇರ ನೇಮಕಾತಿ ನಡೆಯುತ್ತದೆ. ಇನ್ನು ಅರ್ಜಿಯನ್ನು ಆನ್ ಲೈನ್ ಮೂಲಕವೇ ಸಲ್ಲಿಸತಕ್ಕದ್ದು. ಕೊರಿಯರ್ ಮಾಡುವುದು ಅಥವಾ ಸ್ಥಳಕ್ಕೆ ಹೋಗಿ ಅರ್ಜಿ ಕೊಟ್ಟುಬರುವಂತಿಲ್ಲ. ಇನ್ನು ವಿದ್ಯಾರ್ಹತೆ ಕೇಳುವುದಾದರೆ, ಮಂಡ್ಯ ಹಾಲು ಒಕ್ಕೂಟಗಳ ಅಧಿನಿಯಮಗಳ ಪ್ರಕಾರ ಹುದ್ದೆಗನುಸಾರ ವಿದ್ಯಾರ್ಹತೆ ಇರಬೇಕು. ಇನ್ನು ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗುವುದಿಲ್ಲ.

ಅಭ್ಯರ್ಥಿಗಳ ಆಯ್ಕೆಗಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನವಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮುಂದಿನ ತಿಂಗಳು ಅಂದರೆ ಫೆಬ್ರವರಿ ಮೊದಲನೇ ದಿನವೇ ಆರಂಭ ದಿನ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 02, 2022. ಅರ್ಜಿಸಲ್ಲಿಸಲು ಅಭ್ಯರ್ಥಿಗಳಿಗೆ ಒಂದು ತಿಂಗಳ ಅವಕಾಶವಿದೆ. ಇನ್ನು ವೇತನದ ಬಗ್ಗೆ ಮಾತನಾಡುವುದಾದರೆ, ಹುದ್ದೆಗೆ ಅನುಸಾರವಾಗಿ ರೂ.21,400-97,100ರೂಪಾಯಿಗಳವರೆಗೆ ಇರುತ್ತದೆ. ನೀವು ಈ ಉದ್ಯೋಗದಲ್ಲಿ ಆಸಕ್ತಿ ಇದ್ದರೆ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ manmul.coop ವೆಬ್ ಸೈಟ್ ಗೆ ಭೇಟಿ ನೀಡಬಹುದು.

ಇಲ್ಲಿ ಖಾಲಿ ಇರುವ ಹುದ್ದೆಗಳು ಹೀಗಿವೆ; ಸಹಾಯಕ ವ್ಯವಸ್ಥಾಪಕರು- 23, ಕಾನೂನು ಅಧಿಕಾರಿಗಳು- 1, ತಾಂತ್ರಿಕ ಅಧಿಕಾರಿಗಳು- 12, ಸ್ಟೋರ್ ಕೀಪರ್ / I.M ಅಧಿಕಾರಿ- 1, ಡೈರಿ ಮೇಲ್ವಿಚಾರಕ ಗ್ರೇಡ್-2 5. ವಿಸ್ತರಣಾಧಿಕಾರಿ ಗ್ರೇಡ್-3 25, ಆಡಳಿತ ಸಹಾಯಕ ಗ್ರೇಡ್-2 14, ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 8, ರಸಾಯನಶಾಸ್ತ್ರಜ್ಞ ಗ್ರೇಡ್-2 9, ಜೂನಿಯರ್ ಸಿಸ್ಟಮ್ ಆಪರೇಟರ್ 10, ಕೋ-ಆರ್ಡಿನೇಟರ್ (ರಕ್ಷಣೆ) 4. ಹೆಲ್ತ್ ಪ್ರಾಸ್ಪೆಕ್ಟ್ಸ್ 1, ನರ್ಸ್ 2, ಮಾರ್ಕೆಟಿಂಗ್ ಸಹಾಯಕ ಗ್ರೇಡ್-3 14, ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟ್ರಿಕಲ್ 16, ಜೂನಿಯರ್ ತಂತ್ರಜ್ಞ – M.R.A.C 6, ಜೂನಿಯರ್ ಟೆಕ್ನಿಷಿಯನ್ – ವೆಲ್ಡರ್ 2. ಜೂನಿಯರ್ ತಂತ್ರಜ್ಞ – ಫಿಟ್ಟರ್ 9, ಜೂನಿಯರ್ ತಂತ್ರಜ್ಞ – ಬಾಯ್ಲರ್ 6, ಜೂನಿಯರ್ ಟೆಕ್ನಿಷಿಯನ್ – ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ 5, ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ 6, ಚಾಲಕರು 6

ಕೃಷಿ ಸಹಾಯಕ 1, ತೋಟಗಾರಿಕಾ ಸಹಾಯಕ 1: ಈ ಹುದ್ದೆಗಳಿಗೆ ಮಾಸಿಕ ವೇತನ ಹೀಗಿದೆ: ಸಹಾಯಕ ವ್ಯವಸ್ಥಾಪಕರು – ಮಾಸಿಕ ₹ 52,750-97,100/-, ಕಾನೂನು ಅಧಿಕಾರಿಗಳು – ಮಾಸಿಕ ₹ 43100-83900/-, ತಾಂತ್ರಿಕ ಅಧಿಕಾರಿಗಳು -ಮಾಸಿಕ ₹ 43100-83900/-, ಸ್ಟೋರ್ ಕೀಪರ್ / I.M ಅಧಿಕಾರಿ-ಮಾಸಿಕ ₹ 43100-83900/-, ಡೈರಿ ಮೇಲ್ವಿಚಾರಕ ಗ್ರೇಡ್-2 -ಮಾಸಿಕ ₹ 33450-62600, ವಿಸ್ತರಣಾಧಿಕಾರಿ ಗ್ರೇಡ್-3 -ಮಾಸಿಕ ₹ 33450-62600

ಆಡಳಿತ ಸಹಾಯಕ ಗ್ರೇಡ್-2 -ಮಾಸಿಕ ₹ 27650-52650, ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 -ಮಾಸಿಕ ₹ 27650-52650, ರಸಾಯನಶಾಸ್ತ್ರಜ್ಞ ಗ್ರೇಡ್-2 -ಮಾಸಿಕ ₹ 27650-52650, ಜೂನಿಯರ್ ಸಿಸ್ಟಮ್ ಆಪರೇಟರ್ -ಮಾಸಿಕ ₹ 27650-52650, ಕೋ-ಆರ್ಡಿನೇಟರ್ (ರಕ್ಷಣೆ) -ಮಾಸಿಕ ₹ 27650-52650 ಹೆಲ್ತ್ ಪ್ರಾಸ್ಪೆಕ್ಟ್ಸ್ -ಮಾಸಿಕ ₹ 27650-52650, ನರ್ಸ್ -ಮಾಸಿಕ ₹ 27650-52650, ಮಾರ್ಕೆಟಿಂಗ್ ಸಹಾಯಕ ಗ್ರೇಡ್-3- ಮಾಸಿಕ ₹ 21400-42000/, ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟ್ರಿಕಲ್ -ಮಾಸಿಕ ₹ 21400-42000.

ಜೂನಿಯರ್ ತಂತ್ರಜ್ಞ – M.R.A.C -ಮಾಸಿಕ ₹ 21400-42000/, ಜೂನಿಯರ್ ಟೆಕ್ನಿಷಿಯನ್ – ವೆಲ್ಡರ್ -ಮಾಸಿಕ ₹ 21400-42000/, ಜೂನಿಯರ್ ತಂತ್ರಜ್ಞ – ಫಿಟ್ಟರ್ -ಮಾಸಿಕ ₹ 21400-42000/. ಜೂನಿಯರ್ ತಂತ್ರಜ್ಞ – ಬಾಯ್ಲರ್ -ಮಾಸಿಕ ₹ 21400-42000/, ಜೂನಿಯರ್ ಟೆಕ್ನಿಷಿಯನ್ – ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ -ಮಾಸಿಕ ₹ 21400-42000/, ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ -ಮಾಸಿಕ ₹ 21400-42000/, ಚಾಲಕರು -ಮಾಸಿಕ ₹ 21400-42000/, ಕೃಷಿ ಸಹಾಯಕ -ಮಾಸಿಕ ₹ 21400-42000/, ತೋಟಗಾರಿಕಾ ಸಹಾಯಕ -ಮಾಸಿಕ ₹ 21400-42000/-

Comments are closed.