ನೀವು ಉದ್ಯೋಗ ಹುಡುಕಿದ್ದರೇ ಈಗಲೇ ಅಪ್ಲೈ ಮಾಡಿ, UCIL ನಲ್ಲಿ ಇದೆ ವಿವಿಧ ಉದ್ಯೋಗಾವಕಾಶ. ಅರ್ಹತೆ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?

ನಮಸ್ಕಾರ ಸ್ನೇಹಿತರೇ ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಕೆಲವು ಪ್ರಮುಖ ಹುದ್ದೆಗಳು ಖಾಲಿ ಇದ್ದು ಈ ವರ್ಷದ ಆರಂಭದಲ್ಲಿಯೇ ಆ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಒಟ್ಟು 41 ಹುದ್ದೆಗಳು ಖಾಲಿ ಇದ್ದು ಅಕೌಂಟ್ಸ್ ಆಫೀಸರ್, ಮೈನಿಂಗ್ ಮೇಟ್ ಹುದ್ದೆಗಳೂ ಸೇರಿವೆ. ಈ ಹುದ್ದೆಗಳ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿ ಕೊಡಲಾಗಿದೆ.

ಯು ಸಿ ಐ ಸಿ ಕಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು ಫೆಬ್ರವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಇದು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಾಗಿದ್ದು, ಕಚೇರಿಗೆ ನೇರವಾಗಿ ಅರ್ಜಿ ಕಳುಹಿಸಬೇಕು. ಖಾಲಿ ಇರುವ ಹುದ್ದೆಗಳಲ್ಲಿ ಮೈನಿಂಗ್ ಮೇಟ್- 38 ಹುದ್ದೆ, ಅಕೌಂಟ್ಸ್ ಆಫೀಸರ್- 3 ಹುದ್ದೆಗಳು ಭರ್ತಿಯಾಗಬೇಕಿವೆ.

ಇನ್ನು ಈ ಹುದ್ದೆಗ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ನಿಂದ ಕಡ್ಡಾಯವಾಗಿ ಸಿ ಎ, ಐ ಸಿ ಡಬ್ಲ್ಯೂ ಎ ಪದವಿ ಪಡೆದಿರಬೇಕು. ಹಾಗೆಯೇ ವಯೋಮಿತಿಯ ಬಗ್ಗೆ ಹೇಳುವುದಾದರೆ, ಸಾಮಾನ್ಯ/ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 53 ವರ್ಷ, ಎಸ್ಸಿ/ಎಸ್ಟಿ ಗರಿಷ್ಠ 55 ವರ್ಷ ವಯಸ್ಸಾಗಿರಬೇಕು. ಅಕೌಂಟ್ಸ್ ಆಫೀಸರ್ ಹುದ್ದೆಗೆ 35 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.

ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದ ಅಭ್ಯರ್ಥಿಗಳು ಜಾರ್ಖಂಡ್ನ ಈಸ್ಟ್ ಸಿಂಗ್ಭುಮ್ ಗೆ ಹೋಗಲು ಸಿದ್ಧರಿರಬೇಕು. ಅಕೌಂಟ್ಸ್ ಆಫೀಸರ್ ಹುದ್ದೆಗೆ ತಿಂಗಳಿಗೆ 46,020 ರೂ ಹಾಗೂ ಮೈನಿಂಗ್ ಮೇಟ್ ಹುದ್ದೆಗೆ ತಿಂಗಳಿಗೆ 35,904 ರೂ ವೇತನ ಸಿಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ವಿಳಾಸಕ್ಕೆ ಮಾಹಿತಿ ಪೂರ್ಣಗೊಳಿಸಿದ ಅರ್ಜಿ ಹಾಗೂ ದಾಖಲೆಗಳನ್ನು ಕಳುಹಿಸತಕ್ಕದ್ದು. ವಿಳಾಸ: ಜನರಲ್ ಮ್ಯಾನೇಜರ್, ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪಿ.ಒ. ಜಡುಗುಡ ಮೈನ್ಸ್, ಸಿಂಗ್ಭುಮ್ ಈಸ್ಟ್, ಜಾರ್ಖಂಡ್- ೮೩೨೧೦೨, ಹೆಚ್ಚಿನ ಮಾಹಿತಿಗಾಗಿ www.ucil.gov.in ಗೆ ಭೇಟಿ ನೀಡಿ

Comments are closed.