ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಜಿಯೋ, ಕಡಿಮೆ ಬೆಲೆಗೆ ದಿನಕ್ಕೆ 3 ಜಿಬಿ ಡಾಟಾ ಪ್ಲಾನ್, ಅಷ್ಟೇ ಅಲ್ಲ, ಇನ್ನು ಏನೇನು ಸಿಗುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ , ಜಿಯೋ ತನ್ನ ಗ್ರಾಹಕರಿಗೆ ಅನುಕೂಲವಾಗುವಂಥ ಹಲವು ಹೊಸ್ ಅಹೊಸ ಪ್ಲ್ಯಾನ್ ಗಳನ್ನು ಪರಿಚಯಿಸುತ್ತಿರುತ್ತದೆ. ಕೆಲವು ಪ್ಲ್ಯಾನ್ ಗಳ ದರ ತುಸು ಜಾಸ್ತಿ ಎನಿಸಿದರೂ ಕೂಡ ಅದರಲ್ಲಿ ಕೊಡಲ್ಪಡುವ ಸೌಲಭ್ಯಗಳಿಂದಾಗಿ ಆ ಪ್ಲ್ಯಾನ್ ಸೂಕ್ತವಾಗಿಯೇ ಇರುತ್ತದೆ. ಈಗ ಜಿಯೋದ ಹೊಸ ಯೋಜನೆಯ ಬಗ್ಗೆ ನೋಡುವುದಾದರೆ, ಸದ್ಯ ಜಿಯೋ ನಾಲ್ಕು ಯೋಜನೆಗಳನ್ನು ಘೋಷಿಸಿದೆ. ಇದು ಪ್ರತಿದಿನ 3ಜಿಬಿ ಇಂಟರ್ನೆಟ್, ಅನಿಯಮಿತ ಕರೆ ಮತ್ತು ಎಸ್ ಎಂ ಎಸ್ ಪ್ರಯೋಜನಗಳನ್ನು ಹೊಂದಿದೆ. ಇದರ ಜೊತೆಯಲ್ಲಿ ಈ ಯೋಜನೆ ಮೂಲಕ ಓಟಿಟಿ ಯ ಪ್ರಯೋಜನಗಳನ್ನು ಸಹ ಪಡೆಯಬಹುದು. ಅಂದಹಾಗೆ ಈ ಯೋಜನೆಗಳ ಬೆಲೆ 419ರೂವಿನಿಂದ 4,199 ರೂ.ವರೆಗೆಗೂ ಇದೆ.

ಜಿಯೋ ತನ್ನ 419 ರೂ. ಗಳ ಪ್ಲ್ಯಾನ್ ನಲ್ಲಿ 28 ದಿನಗಳ ಮಾನ್ಯತೆ, ಪ್ರತಿದಿನ 3ಜಿಬಿ ಡೇಟಾ ನೀಡುತ್ತಿದೆ ಮತ್ತು ಇಂಟರ್ನೆಟ್ ಮಿತಿಯನ್ನು ಖಾಲಿ ಆದರೆ ಇಂಟರ್ನೆಟ್ ವೇಗವು 64Kbps ಗೆ ಬರುತ್ತದೆ. ಇನ್ನು ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಎಂಎಸ್ ಸೌಲಭ್ಯ ಮತ್ತು ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾದಂತಹ ಎಲ್ಲಾ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಕೂಡ ಪಡೆಯಬಹುದು.

ಇನ್ನು ಜಿಯೋದ 601 ರೂ ಪ್ಲಾನ್ ಬಗ್ಗೆ ಹೇಳುವುದಾದರೆ, 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ, ದಿನಕ್ಕೆ 100 SMS ಹಗೂ ದಿನಕ್ಕೆ 3ಜಿಬಿ ಹೈ ಸ್ಪೀಡ್ ಡೇಟಾ ಸೌಲಭ್ಯವನ್ನು ಹೊಂದಿದೆ. ಈ ಯೋಜನೆಯಲ್ಲಿ 6ಜಿಬಿ ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತದೆ. ಇನ್ನು ಜಿಯೋ ಕ್ಲೌಡ್, ಜೊಯೋ ಟಿವಿ ಹಾಗೂ ಜಿಯೋ ಸಿನಿಮಾ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ ಇದೆ. ಜಿಯೋ ಪರಿಚಯಿಸಿದ ಇನ್ನೊಂದು ಪ್ರೀಪೇಯ್ಡ್ ಪ್ಲಾನ್ ರೂ.1,199ರದ್ದು. ಇದು 84 ದಿನಗಳ ವ್ಯಾಲಿಡಿಟಿ ಜೊತೆಗೆ 3ಜಿಬಿ ದೈನಂದಿನ ಡೇಟಾ, ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಅನ್ನು ನೀಡುತ್ತದೆ. ಈ ಯೋಜನೆಯಲ್ಲಿ 252ಜಿಬಿ ಇಂಟರ್ನೆಟ್ ಅನ್ನು ಪಡೆಯುತ್ತೀರಿ. ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಟಿವಿ ಕೂಡ ಈ ಯೋಜನೆ ಒಳಗೊಂಡಿದೆ.

ಇನ್ನು ಜಿಯೋದ 4ನೇ ಯೋಜನೆಯ ಬಗ್ಗೆ ನೋಡೋಣ ಬನ್ನಿ. ಈ ಯೋಜನೆಯು 4,199 ರೂ.ನದಗಿದ್ದು, ಒಂದು ವರ್ಷದ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಒಮ್ಮೆ ರೀಚಾರ್ಜ್ ಮಾಡಿದರೆ ವರ್ಷವಿಡಿ ರೀಚಾರ್ಜ್ ಮಾಡುವ ತಲೆನೋವೇ ಇರುವುದಿಲ್ಲ. ಉಳಿದ ಯೋಜನೆಗಳಂತೆ ಪ್ರತಿದಿನ 3ಜಿಬಿ ಇಂಟರ್ನೆಟ್ ಸೌಲಭ್ಯವಿದ್ದು ಒಟ್ಟು ಸಿಗುವ ಡಾಟಾ 1095ಜಿಬಿ. ಡೇಟಾ ಮುಗಿದರೆ ನಂತರದ ಇಂಟರ್ ನೆಟ್ ವೇಗ 64Kbpsಕ್ಕೆ ಇಳಿಯುತ್ತದೆ. ಇನ್ನು ಅನಿಯಮಿತ ಧ್ವನಿ ಕರೆ ದಿನಕ್ಕೆ 100 SMS ಜೊತೆಗೆ ಎಲ್ಲಾ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ ಸೌಲಭ್ಯ ಇದರಲ್ಲೂ ಇರುತ್ತದೆ.

Comments are closed.