ಬಿಗ್ ನ್ಯೂಸ್: ಭಾರತೀಯ ಸೇನೆಯಲ್ಲಿದೆ ಹಲವು ಉದ್ಯೋಗ; 10 ನೇತರಗತಿ ಮುಗಿಸಿದ್ರೂ ಇಲ್ಲಿ ಕೆಲಸ ಸಿಗತ್ತೆ.

ನಮಸ್ಕಾರ ಸ್ನೇಹಿತರೇ, ನೀವೇನಾದರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿದ್ದೀರಾ? ಆದ್ರೆ ಯುದ್ಧ ಮಾಡೋಕೆ ಬರಲ್ವಲ್ಲ ಅಂತನ! ಹಾಗಾದ್ರೆ ಗಡಿ ಕಾಯುವ ಕೆಲಸಕ್ಕಿಂತ ವಿಭಿನ್ನವಾದ ಕೆಲಸಗಳು ಸೇನೆಯಲ್ಲಿ ಖಾಲಿ ಇವೆ. ಹತ್ತನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯ ಖಾಲಿ ಇರುವ ಹುದ್ದೆಗಳು ಹೀಗಿವೆ; ಆಹಾರ ವಿತರಕರು (ಸಫೈವಾಲಾ) -10 ಹುದ್ದೆಗಳು, ವಾಷರ್ಮನ್ -3 ಹುದ್ದೆಗಳು ಮೆಸ್ ವೇಟರ್- 6 ಹುದ್ದೆಗಳು, ಮಸಾಲ್ಚಿ -2 ಹುದ್ದೆಗಳು, ಅಡುಗೆ -16 ಹುದ್ದೆಗಳು, ಹೌಸ್ ಕೀಪರ್- 2 ಹುದ್ದೆಗಳು, ಕ್ಷೌರಿಕ- 2 ಹುದ್ದೆಗಳು. ಇನ್ನು ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರುವ ದಾಖಲೆ ಒದಗಿಸಬೇಕು.

indian army | ಬಿಗ್ ನ್ಯೂಸ್: ಭಾರತೀಯ ಸೇನೆಯಲ್ಲಿದೆ ಹಲವು ಉದ್ಯೋಗ; 10 ನೇತರಗತಿ ಮುಗಿಸಿದ್ರೂ ಇಲ್ಲಿ ಕೆಲಸ ಸಿಗತ್ತೆ.
ಬಿಗ್ ನ್ಯೂಸ್: ಭಾರತೀಯ ಸೇನೆಯಲ್ಲಿದೆ ಹಲವು ಉದ್ಯೋಗ; 10 ನೇತರಗತಿ ಮುಗಿಸಿದ್ರೂ ಇಲ್ಲಿ ಕೆಲಸ ಸಿಗತ್ತೆ. 2

ಹಾಗೆಯೇ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ವಯಸ್ಸು 18-25 ವರ್ಷದೊಳಗಿರಬೇಕು. ಆದರೆ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸರ್ಕಾರಿ ಸೇವಕರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಸೇನೆಯ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಮೆಡಿಕಲ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 19, 2022. ಆಫ್ ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು. OC, 412 MC/MF Det, ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ – 110013

Comments are closed.