ಪದವಿ ಮುಗಿದವರಿಗೆ ಯುಸಿಐಎಲ್ ನಲ್ಲಿ ಉದ್ಯೋಗಾವಕಾಶ; ಸಿಗುತ್ತೆ48 ಸಾವಿರ ಸಂಬಳ, ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕರೊನಾ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಉದ್ಯೋಗವನ್ನು ಕಳೆದುಕೊಂಡ್ರು, ಇನ್ನೊಂದಿಷ್ಟು ಜನ ಉದ್ಯೋಗವನ್ನು ಬಿಟ್ರು. ಆದರೆ ಇದೀಗ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇದ್ದು, ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನಹರಿಸಿದ್ದಾರೆ. ಹಾಗಾಗಿ ನಿಮ್ಮ ನಿಮ್ಮ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಇದೀಗ ದೇಶದ ನಾನಾಕಡೆ ಉದ್ಯೋಗಗಳು ಲಭ್ಯ. ಈ ಲೇಖನದಲ್ಲಿ ಯುಸಿಐಎಲ್, ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಇರುವ ಹುದ್ದೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಯುಸಿಐಎಲ್ ನಲ್ಲಿರುವ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನಾಂಕವಾಗಿರುತ್ತದೆ. ಈ ದಿನದ ಒಳಗೆ ನಿಮ್ಮ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕು. ಅಂದರೆ ಸಂಬಂಧಪತ್ಟ ಇಲಾಖೆಗೆ ಕಳುಹಿಸಬೇಕು. ಇನ್ನು ಲಭ್ಯವಿರುವ ಹುದ್ದೆಗಳು ಹೀಗಿವೆ. ಮೈನಿಂಗ್ ಮೇಟ್- 38 ಹುದ್ದೆಗಳು, ಅಕೌಂಟ್ಸ್ ಆಫೀಸರ್-3 ಹುದ್ದೆಗಳು ಒಟ್ಟೂ 41 ಹುದ್ದೆಗಳು ಖಾಲಿ ಇವೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಕೌಂಟ್ಸ್ ಆಫೀಸರ್, ಮೈನಿಂಗ್ ಮೇಟ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಸಿಎ, ಐಸಿಡ್ಭ್ಯೂಎ ಪದವಿ ಪಡೆದಿರಬೇಕು.

ucil jobs | ಪದವಿ ಮುಗಿದವರಿಗೆ ಯುಸಿಐಎಲ್ ನಲ್ಲಿ ಉದ್ಯೋಗಾವಕಾಶ; ಸಿಗುತ್ತೆ48 ಸಾವಿರ ಸಂಬಳ, ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??
ಪದವಿ ಮುಗಿದವರಿಗೆ ಯುಸಿಐಎಲ್ ನಲ್ಲಿ ಉದ್ಯೋಗಾವಕಾಶ; ಸಿಗುತ್ತೆ48 ಸಾವಿರ ಸಂಬಳ, ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ?? 2

ಮೈನಿಂಗ್ ಮೇಟ್ ಹುದ್ದೆಸಾಮಾನ್ಯ/EWS-50 ವರ್ಷ, ಒಬಿಸಿ-53 ವರ್ಷ, ಎಸ್ಸಿ/ಎಸ್ಟಿ-55 ವರ್ಷ ಮೀರಿರಬಾರದು. ಹಾಗೆಯೇ ಅಕೌಂಟ್ಸ್ ಆಫೀಸರ್ ಹುದ್ದೆಗೆ 35 ವರ್ಷ ವಯಸ್ಸು ಕಡ್ಡಾಯ. ಇನ್ನು ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಜಾರ್ಖಂಡ್ನ ಈಸ್ಟ್ ಸಿಂಗ್ಭುಮ್ನಲ್ಲಿ ಉದ್ಯೋಗ ಮಾಡಲು ಸಿದ್ಧರಿರಬೇಕು. ಮೈನಿಂಗ್ ಮೇಟ್ ಹುದ್ದೆಗೆ ಆಯ್ಕೆಯಾದರೆ ತಿಂಗಳಿಗೆ 35,904 ರೂ. ಗಳು ಹಾಗೂ ಅಕೌಂಟ್ಸ್ ಆಫೀಸರ್ ಗೆ ಆಯ್ಕೆಯಾದರೆ ತಿಂಗಳಿಗೆ 46,020 ರೂಪಾಯಿ ವೇತನ ನೀಡಲಾಗುತ್ತದೆ. ಟ್ರೇಡ್ ಟೆಸ್ಟ್, ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನ ಇವು ಆಯ್ಕೆಯ ವಿಧಾನಗಳು. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿಕೊಡಿ. ವಿಳಾಸ: ಜನರಲ್ ಮ್ಯಾನೇಜರ್, ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪಿ.ಒ. ಜಡುಗುಡ ಮೈನ್ಸ್, ಸಿಂಗ್ಭುಮ್ ಈಸ್ಟ್, ಜಾರ್ಖಂಡ್- 832102.

Comments are closed.