ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ನಟಿಯರು ಭಾರತ ಚಿತ್ರರಂಗದಾದ್ಯಂತ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಮೂಲದ ರಶ್ಮಿಕ ಮಂದಣ್ಣ ನವರು ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ದೊಡ್ಡಮಟ್ಟದ ಜನಪ್ರಿಯತೆಯು ಪಡೆದಿರುವುದು ನಿಮಗೆಲ್ಲಾ ಗೊತ್ತಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ನಾಯಕ ನಟಿಯರ ವಿದ್ಯಾರ್ಹತೆ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲ ನಟಿಯರಿದ್ದಾರೆ ಹಾಗೂ ಅವರ ವಿದ್ಯಾರ್ಹತೆ ಏನು ಎಂಬುದನ್ನು ತಿಳಿಯೋಣ ಬನ್ನಿ.

samantha 4 | ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ??
ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ?? 4

ಸಮಂತ: ಸಮಂತ ರವರ ಕುರಿತಂತೆ ಯಾರಿಗೆ ಗೊತ್ತಿಲ್ಲ ಹೇಳಿ. ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಮೂಲಕ ಯಶಸ್ಸನ್ನು ಪಡೆದಿರುವವರು ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ಹಿಂದಿ ಚಿತ್ರರಂಗಕ್ಕೂ ಕೂಡ ಪರಿಚಿತರಾಗುತ್ತಾರೆ. ಇತ್ತೀಚಿಗೆ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಮೂಲಕವೂ ಕೂಡ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಇನ್ನು ಇವರ ವಿದ್ಯಾರ್ಹತೆ ಕುರಿತಂತೆ ತಿಳಿಯುವುದಾದರೆ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರು ನಂತರ ನೇರವಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

ರಶ್ಮಿಕ ಮಂದಣ್ಣ; ಕೊಡಗಿನ ಮೂಲದವರಾದ ಇವರು ಕಿರಿಕ್ ಪಾರ್ಟಿ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ. ಈಗಂತೂ ಹೇಳುವುದೇ ಬೇಡ ನ್ಯಾಷನಲ್ ಕ್ರಷ್ ಆಗಿ ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಕೂಡ ಪರಿಚಿತರಾಗಿದ್ದಾರೆ. ಇನ್ನು ಇವರು ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸುವುದಕ್ಕಿಂತ ಮುಂಚೆ ಸೈಕಾಲಜಿ ಜರ್ನಲಿಸಂ ಹಾಗೂ ಇಂಗ್ಲೀಷ್ ವಿಷಯಗಳಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.

anushka shetty 1 | ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ??
ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ?? 5

ಅನುಷ್ಕಾ ಶೆಟ್ಟಿ; ಅನುಷ್ಕಾ ಶೆಟ್ಟಿ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ ಎಂಬುದು ಹಲವರಿಗೆ ತಿಳಿದಿಲ್ಲ. ಇವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚಿನ ಸಂಭಾವನೆ ಪಡೆಯುವಂತಹ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವಿ ಪಡೆದಿರುವ ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುವುದು. ಇನ್ನು ಯೋಗಾಭ್ಯಾಸದಲ್ಲಿ ಕೂಡ ಪರಿಣತಿಯನ್ನು ಹೊಂದಿದ್ದಾರೆ.

ನಯನತಾರ; ಸದ್ಯಕ್ಕೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರ ನಿಜವಾದ ಹೆಸರು ಮರಿಯನ್ ಕುರಿಯನ್ ಎಂದು. ಇನ್ನು ಇವರು ಥಿರುವಲ್ಲದ ಮಾರ್ಥೋಮ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯನ್ನು ಪಡೆದಿದ್ದಾರೆ.

ಪೂಜಾ ಹೆಗ್ಡೆ; ಪೂಜಾ ಅವರು ಮೊಹಂಜದಾರೋ ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಆರಂಭಿಸಿದ್ದಾರೆ. ಈಗಾಗಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲ ಪ್ರಮುಖ ಭಾಷೆಗಳಲ್ಲಿ ನಟಿಸಿದ್ದಾರೆ. ಮೂಲತಃ ಕರಾವಳಿಯವರಾಗಿದ್ದರೂ ಕೂಡ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಮುಂಬೈನ ಎಂಎಂಕೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. 2010 ರ ಭುವನ ಸುಂದರಿ ಸ್ಪರ್ಧೆಯಲ್ಲಿ ಪೂಜಾ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

keerti suresh2 | ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ??
ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ ಸೇರಿದಂತೆ ವಿವಿಧ ದಕ್ಷಿಣ ಭಾರತದ ನಟಿಯರು ಎಷ್ಟು ಓದಿದ್ದಾರೆ ಗೊತ್ತೇ?? ನಟಿಯರ ಅಚ್ಚರಿಯ ಓದಿನ ಕುರಿತು ನಿಮಗೆಷ್ಟು ಗೊತ್ತೇ?? 6

ಕೀರ್ತಿ ಸುರೇಶ್; ಮೂಲತಃ ತಮಿಳು ಚಿತ್ರರಂಗದವರಾಗಿರುವ ಕೀರ್ತಿ ಸುರೇಶ್ ರವರು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಪರ್ಲ್ ಅಕಾಡೆಮಿಯಲ್ಲಿ ಫ್ಯಾಷನ್ ಡಿಸೈನ್ ಪದವಿಯನ್ನು ಮುಗಿಸಿ ಸ್ಕಾಟ್ಲೆಂಡ್ನಲ್ಲಿ ಹೆಚ್ಚುವರಿ ಪದವಿಯನ್ನು ಮುಗಿಸಿ 2ತಿಂಗಳ ಇಂಟರ್ನ್ಶಿಪ್ ಕೂಡ ಮಾಡಿದ್ದಾರೆ.

ಶ್ರುತಿ ಹಾಸನ್; ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಕಮಲಹಾಸನ್ ರವರ ಪುತ್ರಿಯಾಗಿರುವ ಶೃತಿಹಾಸನ್ ರವರು ಮುಂಬೈನ ಆಂಡ್ರೂಸ್ ಕಾಲೇಜಿನಲ್ಲಿ ಸೈಕಾಲಜಿಯನ್ನು ಸ್ಟಡಿ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಕ್ಯಾಲಿಫೋರ್ನಿಯಾದಲ್ಲಿ ಮ್ಯೂಸಿಷಿಯನ್ ಇನ್ಸ್ಟಿಟ್ಯೂಟ್ ನಲ್ಲಿ ಉನ್ನತ ಜ್ಞಾನವನ್ನು ಕೂಡ ಸಂಪಾದಿಸಿದ್ದಾರೆ. ನಮ್ಮ ದಕ್ಷಿಣ ಭಾರತದ ನಟಿಯರು ಕೇವಲ ಸೌಂದರ್ಯ ಮತ್ತು ನಟನೆಯಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಯಲ್ಲಿ ಕೂಡ ಅರ್ಹರಾಗಿದ್ದಾರೆ.

Comments are closed.