ಮತ್ತೊಂದು ಸಾಧನೆ ಮಾಡಿ ನಮ್ಮ ಕನ್ನಡಿಗರ ಹೆಮ್ಮೆಯ ನಂದಿನಿ ಹಾಲಿನ ಓಕ್ಕೂಟ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕರ್ನಾಟಕದ ಮೂಲೆ ಮೂಲೆಯಲ್ಲೂ ತನ್ನ ಉದ್ಯಮದಿಂದ ಹೆಸರುವಾಸಿಯಾದ ಕೆ ಎಂ ಎಫ್ (ಕರ್ನಾಟಕ ಹಾಲು ಒಕ್ಕೂಟ) ಈಗ ದಿನದಿಂದ ದಿನಕ್ಕೆ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲಿಯೂ ಕೂಡ ಹಾಲು ಮಾರಾಟಕ್ಕೆ ಮುಂದಾಗಿದೆ ಕೆ ಎಂ ಎಫ್ ಸಂಸ್ಥೆ. ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಇನ್ನು ಮಹಾರಾಷ್ಟ್ರದಲ್ಲೂ ಲಭಿಸಲಿವೆ. ಮಹಾರಾಷ್ಟ್ರದ ವಿದರ್ಭ ಪ್ರದೇಶದ ವರೆಗೂ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ ನಮ್ಮ ಹೆಮ್ಮೆಯ ಕೆ ಎಂ ಎಫ್.

ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿ 1 ಕೋಟಿ ವೆಚ್ಚದಲ್ಲಿ ಡೈರಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಿದೆ ಎನ್ನಲಾಗುತ್ತಿದೆ. ವಿದರ್ಭ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿರುವ ಕರ್ನಾಟಕ ಹಾಲಿನ ಒಕ್ಕೂಟ ಇದರ ಜೊತೆಗೆ ನಾಗ್ಪುರ, ವಾರ್ಧಾ, ಯಾವತ್ಮಲ್ ಮತ್ತು ಚಂದ್ರಪುರ ಪ್ರದೇಶಗಳಲ್ಲಿಯೂ ಕೂಡ ಉದ್ಯಮವನ್ನು ಆರಂಭಿಸಲಿದೆ ಎಂದು ವರದಿಯಾಗಿದೆ.

ನಾವು ಮುಂಬೈನಲ್ಲಿ ಎರಡು ಹಾಗೆಯೇ ಗೋವಾ, ಪುಣೆಯಲ್ಲಿ ಒಂದೊಂದು ಪ್ಲಾಂಟ್ ಗಳನ್ನು ಖರೀದಿಸಿ ಡೈರಿ ಸ್ಥಾಪಿಸಲಿದ್ದೇವೆ. ಇದಕ್ಕಾಗಿ ಮುಂಬೈನಲ್ಲಿ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ₹1,000 ಕೋಟಿ ವೆಚ್ಚ ಮಾಡಲು ಯೋಜನೆ ರೂಪಿಸಿರುವುದಾಗಿ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ. ಈಗಾಗಲೇ ಕೆಎಂಎಫ್, ಕರ್ನಾಟಕ, ಸೊಲ್ಲಾಪುರ, ಪುಣೆ, ಚೆನೈ, ಹೈದರಾಬಾದ್, ವಿಜಯವಾಡ ಮೊದಲಾದ ಭಾಗಗಳಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕರ್ನಾಟಕದ ವಿಜಯಪುರದಲ್ಲಿ ಹಾಲು ಸಂಸ್ಕರಣಾ ಡೈರಿ ಇದ್ದು, ಇಲ್ಲಿಂದ ಸುಮಾರು 650 ಕಿಮೀ ದೂರದ ಚಂದ್ರಪುರಕ್ಕೆ ಹಾಲನ್ನು ತಲುಪಿಸಲಾಗುತ್ತದೆ. ಸ್ಥಳೀಯ ಡೈರಿ ಬ್ರಾಂಡ್ ಸ್ವಪ್ನಪೂರ್ತಿಯ ಸಹಯೋಗದೊಂದಿಗೆ ಹಾಲನ್ನು ಪ್ಯಾಕ್ ಮಾಡಲಾಗುತ್ತದೆ.

Comments are closed.