ಗಂಡನಿಂದ ವಿಚ್ಚೇದನ ಪಡೆಯಲು ಮುಂದಾದ ಕನ್ನಡದ ಟಾಪ್ ನಟಿ ಯಾರು ಗೊತ್ತೇ?? ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಅದ್ಯಾಕೋ ತಿಳಿದಿಲ್ಲ ಹಲವಾರು ಸೆಲೆಬ್ರಿಟಿಗಳು ವಿಚ್ಛೇದನ ನೀಡುತ್ತಿದ್ದಾರೆ, ಬಾಲಿವುಡ್ ನಿಂದ ಹಿಡಿದು ವಿವಿಧ ಚಿತ್ರರಂಗಗಳಲ್ಲಿ ಹಲವಾರು ಸೆಲೆಬ್ರಿಟಿಗಳು ವಿಚ್ಛೇದನ ತೆಗೆದು ಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ನಟಿಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ಕನ್ನಡದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಅಷ್ಟಕ್ಕೂ ಆ ನಟಿ ಯಾರು ಹಾಗೂ ವಿಚ್ಛೇದನಕ್ಕೆ ಕಾರಣಗಳಾದರೂ ಏನಿರಬಹುದು ಎಂಬುದರ ಕುರಿತು ಸಂಪೂರ್ಣವಾಗಿ ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ ನಾವು ಮಾತನಾಡುತ್ತಿರುವುದು ಮತ್ಯಾರು ಬಗ್ಗೆಯಲ್ಲ ಇತ್ತೀಚೆಗೆ ವಿವಿಧ ವಿಷಯಗಳಲ್ಲಿ ಇಡೀ ಕರ್ನಾಟಕದಾದ್ಯಂತ ಭಾರಿ ಸದ್ದು ಮಾಡಿದ್ದ ಸಂಜನಾ ಗಲ್ರಾನಿ ರವರ ಬಗ್ಗೆ, ಇವರು ಕಂಬಿ ಹಿಂದೆ ಇರುವಾಗ ಇವರ ಮದುವೆ ಕುರಿತು ಇಡೀ ಕರ್ನಾಟಕದ ಎಲ್ಲೆಡೆ ಸುದ್ದಿಗಳು ಪ್ರಸಾರ ಆಗಿದ್ದವು, ಇವರು ಮದುವೆಯಾಗಿದ್ದಾರೆ ಎಂದು ಯಾರಿಗೂ ಕೂಡ ಹೇಳಿ ಕೊಂಡಿರಲಿಲ್ಲ ಆದರೆ ಇವರು ಕೇಸೊಂದರಲ್ಲಿ ಕಂಬಿ ಹಿಂದೆ ಹೋದಾಗ ಇವರ ಮದುವೆಯ ವಿಚಾರಗಳು ಬಯಲಾಗಿದ್ದವು.

ವೈದ್ಯ ಪಾಶ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದಾರೆ ಸಂಜನಾ ರವರು ತಮ್ಮ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದರು, ಇಬ್ಬರು ಬಹಳ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೊರಬಂದ ಬಳಿಕ ತಿಳಿಸಿದರು ಇದಾದ ಕೆಲವು ದಿನಗಳ ಬಳಿಕ ಕೆಲವೇ ಕೆಲವು ದಿನಗಳ ಹಿಂದೆ ಪತಿಯ ಹೆಸರನ್ನು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡು ಫೋಟೋ ಶೇರ್ ಮಾಡಿದ್ದರು, ಇದನ್ನೆಲ್ಲ ನೋಡಿದ ಅಭಿಮಾನಿಗಳು ಉತ್ತಮ ಜೋಡಿ ಎಂದು ಕರೆಯುತ್ತಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಸಂಜನಾ ರವರು ಪತಿಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೆ ವಿವಿಧ ಭಾಷೆಗಳಲ್ಲಿ ಪ್ರತಿಷ್ಠಿತ ಮಾಧ್ಯಮ ಎನಿಸಿಕೊಂಡಿರುವ ನ್ಯೂಸ್ 18 ಸಂಸ್ಥೆ ಈ ಕುರಿತು ಸುದ್ದಿ ಪ್ರಸಾರ ಮಾಡಿದ್ದು ಇನ್ನು ಸಂಜನಾ ಹಾಗೂ ಅವರ ಪತಿಯ ಕಡೆಯಿಂದ ಯಾವುದೇ ಅಧಿಕೃತ ಆದೇಶ ಕೇಳಿಬಂದಿಲ್ಲ.

Comments are closed.