ದೇಶಗಳನ್ನು ಮೀರಿದ ಪ್ರೀತಿ ಇದು, ಈ ಮಹಿಳೆ ಬಾಂಗ್ಲಾದೇಶದಿಂದ ಈಜಿಕೊಂಡು ಗಡಿ ದಾಟಿದ್ದು ಯಾಕೆ ಗೊತ್ತೇ?? ಆದರೆ ಕೊನೆಗೆ ಸೇರಿದ್ದು ಎಲ್ಲಿಗೆ ಗೊತ್ತೇ?

ಪ್ರೀತಿ ಪ್ರೇಮ, ತಾವು ಪ್ರೀತಿಸಿದ ವ್ಯಕ್ತಿಯನ್ನು ಹೇಗಾದರೂ ಮಾಡಿ ಪಡೆಯಬೇಕು, ಅವರ ಜೊತೆಯಲ್ಲೇ ಮದುವೆ ಆಗಬೇಕು ಎಂದು ಪ್ರೇಮಿಗಳು ಹಲವು ರೀತಿಯ ಸಾಹಸಗಳಿಗೆ ಕೈ ಹಾಕುತ್ತಾರೆ. ಹಿಂದಿನ ಕಾಲದಲ್ಲಿ ರಾಜಕುಮಾರಿಯನ್ನು ಮದುವೆಯಾಗಲು ರಾಜಕುಮಾರರು ಏಳು ಸಮುದ್ರ ದಾಟಿ ಬರುತ್ತಿದ್ದರು ಎಂದು ಕಥೆಗಳಲ್ಲಿ ಹೇಳುತ್ತಿದ್ದರು. ಇದೀಗ ತಾನು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಬೇಕು ಎಂದು ಬಾಂಗ್ಲಾದೇಶದ ಮಹಿಳೆಯೊಬ್ಬಳು ಈಜಿಕೊಂಡೇ ಭಾರತ ತಲುಪಿದ್ದಾಳೆ.. ಈ ಘಟನೆ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಭಾರತಕ್ಕೆ ಅಕ್ರಮವಾಗಿ ಈಜಿಕೊಂಡೇ ಬಂದಿರುವ ಈ ಹುಡುಗಿಯ ಹೆಸರು ಕೃಷ್ಣ ಮಂಡಲ್. ಈಕೆ ಬಾಂಗ್ಲಾದೇಶದ ಹುಡುಗಿ, ಆಕೆ ಪ್ರೀತಿ ಮಾಡಿದ ಹುಡುಗ ಭಾರತದವನಾಗಿದ್ದು, ಅವನನ್ನು ನೋಡಬೇಕು, ಅವನ ಜೊತೆಯೇ ಮದುವೆಯಾಗಬೇಕು ಎಂದು ಆಕೆ ಭಾರತಕ್ಕೆ ಬಂದಿದ್ದಾಳೆ. ಕೃಷ್ಣ ಮಂಡಲ್ ಬಳಿ ಪಾಸ್ ಪೋರ್ಟ್ ಇರಲಿಲ್ಲ. ಹಾಗಾಗಿ ಈಕೆ ಅಕ್ರಮವಾಗಿ ಆದರು ಭಾರತಕ್ಕೆ ಬರಲೇಬೇಕು ಎಂದು ನಿರ್ಧರಿಸಿ, ತನ್ನ ಪ್ರೀತಿಗೋಸ್ಕರ, ಬಾಂಗ್ಲಾದೇಶದಿಂದ ಈಜಿಕೊಂಡೇ ಭಾರತಕ್ಕೆ ಬಂದಿದ್ದಾಳೆ. ಕೆಲ ಸಮಯದ ಹಿಂದೆ ಈಕೆಗೆ ಫೇಸ್ ಬುಕ್ ನಲ್ಲಿ ಅಭಿಕ್ ಮಂಡಲ್ ಎನ್ನುವ ಹುಡುಗನ ಪರಿಚಯವಾಗಿತ್ತು. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದರು.

Krishna mandal | ದೇಶಗಳನ್ನು ಮೀರಿದ ಪ್ರೀತಿ ಇದು, ಈ ಮಹಿಳೆ ಬಾಂಗ್ಲಾದೇಶದಿಂದ ಈಜಿಕೊಂಡು ಗಡಿ ದಾಟಿದ್ದು ಯಾಕೆ ಗೊತ್ತೇ?? ಆದರೆ ಕೊನೆಗೆ ಸೇರಿದ್ದು ಎಲ್ಲಿಗೆ ಗೊತ್ತೇ?
ದೇಶಗಳನ್ನು ಮೀರಿದ ಪ್ರೀತಿ ಇದು, ಈ ಮಹಿಳೆ ಬಾಂಗ್ಲಾದೇಶದಿಂದ ಈಜಿಕೊಂಡು ಗಡಿ ದಾಟಿದ್ದು ಯಾಕೆ ಗೊತ್ತೇ?? ಆದರೆ ಕೊನೆಗೆ ಸೇರಿದ್ದು ಎಲ್ಲಿಗೆ ಗೊತ್ತೇ? 2

ಆತನಿಗಾಗಿ ಈಕೆ ಭಾರತಕ್ಕೆ ಈಜಿಕೊಂಡೇ ಬಂದಿರುವುದು ಮಾತ್ರವಲ್ಲದೆ, ಮೂರು ದಿನಗಳ ಹಿಂದೆ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಅಭಿಕ್ ಮಂಡಲ್ ಜೊತೆಗೆ ಮದುವೆ ಸಹ ಮಾರಿಕೊಂಡಿದ್ದಾಳೆ. ಈ ವಿಚಾರ ಪೊಲೀಸರ ವರೆಗೂ ಹೋಗಿದ್ದು, ಇವರಿಬ್ಬರು ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದಾರೆ. ಅಕ್ರಮವಾಗಿ ದೇಶದ ಪ್ರವೇಶ ಮಾಡಿರುವುದಕ್ಕೆ ಕೃಷ್ಣ ಮಂಡಲ್ ರನ್ನು ಸೋಮವಾರ ಬಂಧಿಸಿದ್ದಾರೆ ಪೊಲೀಸರು. ಹಾಗೂ ಈ ಹುಡುಗಿಯನ್ನು ಬಾಂಗ್ಲಾದೇಶದ ಹೈ ಕಮಿಷನರ್ ಅವರಿಗೆ ಒಪ್ಪಿಸಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಹುಡುಗಿಯ ಮೇಲೆ ಇನ್ನು ಏನಾದರೂ ಕ್ರಮ ಕೈಗೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಹುಸೇನ್ ಎನ್ನುವ ವ್ಯಕ್ತಿಯೊಬ್ಬ ತನಗೆ ಇಷ್ಟವಾದ ಚಾಕೊಲೇಟ್ ಕೊಂಡುಕೊಳ್ಳಲು ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿಕೊಂಡೇ ಬಂದಿದ್ದನು, ಈತನನ್ನು ಕೂಡ ಬಂಧಿಸಲಾಗಿತ್ತು.

Comments are closed.