ಈಗಾಗ್ಲೇ ಮದುವೆ ಆಗಿರುವ ಖ್ಯಾತ ನಟನನ್ನು ಪ್ರೀತಿಸಿ ಮದುವೆ ಆಗ್ತಿರುವ ಗೂಗ್ಲಿ ನಟಿ ಕೃತಿ ಕರಬಂಧ. ಆ ನಟ ಯಾರು ಗೊತ್ತ?

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಗೂಗ್ಲಿ ಚಿತ್ರದ ಮೂಲಕ ಕರ್ನಾಟಕದ ಪಡ್ಡೆಹೈಕಳ ನೆಚ್ಚಿನ ನಟಿ ಹಾಗೂ ಕೃಷ್ ಆಗಿದ್ದವರು ಕೃತಿ ಕರಬಂಧ. ಈಗ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಕೃತಿ ಕರಬಂಧ ಗುಡ್ ನ್ಯೂಸ್ ಒಂದನ್ನು ಹೇಳಲು ಹೊರಟಿದ್ದಾರೆ. ಹೌದು ಸ್ನೇಹಿತರೆ ಕೃತಿ ಕರಬಂಧ ಪರಭಾಷೆಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದರು ಕೂಡ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಮಾತನಾಡಲು ಕೂಡ ಚೆನ್ನಾಗಿ ಬರುತ್ತದೆ. ಇನ್ನು ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಗೂಗ್ಲಿ ಚಿತ್ರದ ಮೂಲಕ ಸ್ವಾತಿ ಆಗಿ ಎಲ್ಲರ ಮನ ಗೆದ್ದಂತಹ ಪ್ರತಿಭಾನ್ವಿತ ನಟಿ.

ಕೇವಲ ಯಶ್ ಜೊತೆಗೆ ಮಾತ್ರವಲ್ಲದೆ ಶಿವಣ್ಣ ಪ್ರೇಮ್ ಹೀಗೆ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿದ ಅನುಭವ ಕೃತಿ ಕರಬಂದ ರವರಿಗೆ ಇದೆ. ಇನ್ನು ಕನ್ನಡ ಚಿತ್ರಗಳಿಗಿಂತ ಹೆಚ್ಚಾಗಿ ಅವರು ಕಾಣಿಸಿಕೊಂಡಿರುವುದು ಬಾಲಿವುಡ್ ಚಿತ್ರರಂಗದಲ್ಲಿ. ಬಾಲಿವುಡ್ನ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೃತಿಕರಬಂದ ಅವರು ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡು ಬಾಲಿವುಡ್ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೃತಿಕರಬಂದ ರವರು ಸುದ್ದಿಯಾಗುತ್ತಿರುವುದು ಹೊಸದಾದ ಗುಡ್ ನ್ಯೂಸ್ ಒಂದನ್ನು ಹೇಳಲು ಹೊರಟಿರುವುದಕ್ಕೆ. ಹೌದು ಸ್ನೇಹಿತರೆ ಆ ಗುಡ್ ನ್ಯೂಸ್ ಏನು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಕೃತಿಕರಬಂದ ರವರು ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಅದು ಕೂಡ ಈಗಾಗಲೇ ಮದುವೆಯಾಗಿ ವಿಚ್ಛೇದಿತರಾಗಿರುವ ನಟನೊಂದಿಗೆ. ಹೌದು ಸ್ನೇಹಿತರೆ ನಟಿ ಕೃತಿಕರಬಂದ ಮದುವೆಯಾಗುವುದಕ್ಕೆ ಹೊರಟಿರುವುದು ನಟ ಪುಲ್ಕಿತ್ ಸಾಮ್ರಾಟ್ ರವರನ್ನು. ಕೃತಿಕರಬಂದ ಹಾಗೂ ಪುಲ್ಕಿತ್ ಸಾಮ್ರಾಟ್ ಈ ಹಿಂದೆ ಒಂದು ಚಿತ್ರದಲ್ಲಿ ಜೊತೆಯಾಗಿ ನಟಿಸಿ ಇಬ್ಬರು ಕೂಡ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪುಲ್ಕಿತ್ ರವರಿಗೆ ಈಗಾಗಲೇ ಮದುವೆಯಾಗಿ ಅವರ ಹೆಂಡತಿಯನ್ನು ಕಾನೂನಾತ್ಮಕವಾಗಿ ವಿವಾಹ ವಿಚ್ಛೇದನ ನೀಡಿದ್ದಾರೆ. ಸದ್ಯದಲ್ಲೇ ಇವರಿಬ್ಬರು ಹಸೆಮಣೆ ಏರಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Comments are closed.