ಹಿಟ್ಲರ್ ಕಲ್ಯಾಣ ಧಾರಾವಾಹಿಯ ಎಡವಟ್ಟು ಲೀಲಾ ರವರು ನಿಜಕ್ಕೂ ಯಾರು ಗೊತ್ತೇ?? ಇವರ ನಿಜವಾಗ ಕಹಾನಿ ಬಗ್ಗೆ ನಿಮಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳು ಜನರಿಗೆ ಅತ್ಯಂತ ಇಷ್ಟವಾಗುತ್ತಿವೆ. ಹೀಗಾಗಿ ಹೊಸ ಹೊಸ ಧಾರವಾಹಿಗಳು ಸ್ಪರ್ಧೆಗೆ ಬಿದ್ದಂತೆ ಪ್ರಸಾರವಾಗುತ್ತಿವೆ. ಅದರಲ್ಲೂ ಇತ್ತೀಚಿಗೆ ಪ್ರಸಾರವನ್ನು ಆರಂಭಿಸಿರುವ ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿ ಹಲವಾರು ವಿಚಾರಗಳಿಗೆ ರೇಟಿಂಗ್ ವಿಚಾರದಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಧಾರಾವಾಹಿಯ ಮೇಕಿಂಗ್ ಕಥೆ ಹಾಗೂ ಪಾತ್ರ ವರ್ಗವನ್ನು ಕೂಡ ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಇನ್ನು ಧಾರವಾಹಿಯ ನಾಯಕಿ ಲೀಲಾ ಪಾತ್ರವನ್ನು ನಿರ್ವಹಿಸುತ್ತಿರುವ ಮಲೈಕ ಟಿ ವಸುಪಾಲ್ ಈಗಾಗಲೇ ಎಲ್ಲರ ನೆಚ್ಚಿನ ನಟಿಯಾಗಿದ್ದಾರೆ.

ಇನ್ನು ಈ ಹಿಟ್ಲರ್ ಕಲ್ಯಾಣ ಧಾರಾವಾಹಿ ತೆಲುಗಿನ ಹಿಟ್ಲರ್ ಗಾರು ಪೆಲ್ಲಾಮ್ ಧಾರವಾಹಿಯ ರೀಮೇಕ್ ಆಗಿದೆ. 40ರ ವಯಸ್ಸಿನ ವ್ಯಕ್ತಿ ಇಪ್ಪತ್ತರ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಆಗುವ ಕಥಾನಕವನ್ನು ಈ ಧಾರವಾಹಿ ಹೊಂದಿದೆ. ಅಭಿರಾಮ್ ಪಾತ್ರವನ್ನು ದಿಲೀಪ್ ರಾಜ್ ಹಾಗೂ ಲೀಲಾ ಪಾತ್ರವನ್ನು ಮಲೈಕ ನಿರ್ವಹಿಸುತ್ತಿದ್ದಾರೆ. ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಾಯಕಿಯ ಲೀಲಾ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾಳೆ. ಅವಳು ತನ್ನ ಮುಗ್ಧತೆ ಹಾಗೂ ಸೌಂದರ್ಯದಿಂದಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಾಳೆ. ಇದಕ್ಕಾಗಿಯೇ ಎಲ್ಲರೂ ಅವಳನ್ನು ಎಡವಟ್ಟು ಲೀಲಾ ಎಂಬುದಾಗಿ ಕರೆಯುತ್ತಾರೆ.

malaika vasupal | ಹಿಟ್ಲರ್ ಕಲ್ಯಾಣ ಧಾರಾವಾಹಿಯ ಎಡವಟ್ಟು ಲೀಲಾ ರವರು ನಿಜಕ್ಕೂ ಯಾರು ಗೊತ್ತೇ?? ಇವರ ನಿಜವಾಗ ಕಹಾನಿ ಬಗ್ಗೆ ನಿಮಗೆ ಗೊತ್ತೇ?
ಹಿಟ್ಲರ್ ಕಲ್ಯಾಣ ಧಾರಾವಾಹಿಯ ಎಡವಟ್ಟು ಲೀಲಾ ರವರು ನಿಜಕ್ಕೂ ಯಾರು ಗೊತ್ತೇ?? ಇವರ ನಿಜವಾಗ ಕಹಾನಿ ಬಗ್ಗೆ ನಿಮಗೆ ಗೊತ್ತೇ? 3

ಧಾರವಾಹಿಯಲ್ಲಿ ಲೀಲಾ ಪಾತ್ರದಾರಿ ಧಾರವಾಹಿ ನಟರನ್ನು ಅನುಕರಿಸುವ ಹುಚ್ಚು ಅಭಿಮಾನಿ ಆಗಿರುತ್ತಾರೆ. ಹಾಗೂ ಅಭಿರಾಮ್ ಜೊತೆಗೆ ಜಗಳ ಆಡುವ ದೃಶ್ಯಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇದೇ ಕಾರಣದಿಂದಾಗಿ ಸತತವಾಗಿ ಪ್ರತಿ ವಾರಗಳಲ್ಲಿ ರೇಟಿಂಗ್ ವಿಚಾರದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡು ಬರುತ್ತಿದೆ ಹಿಟ್ಲರ್ ಕಲ್ಯಾಣ ಧಾರವಾಹಿ. ಲೀಲಾ ಪಾತ್ರದ ಮೂಲಕ ತಮ್ಮ ಕ್ಯೂಟ್ನೆಸ್ ನಿಂದಾಗಿ ಮಲೈಕ ರವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗಿದ್ದರೆ ಮಲೈಕಾ ರವರು ನಿಜಕ್ಕೂ ಯಾರು ಎಂಬುದನ್ನು ನಾವು ವಿವರವಾಗಿ ತಿಳಿಯೋಣ ಬನ್ನಿ.

ನಟಿ ಮಲೈಕ ರವರು ಮೂಲತಹ ನಮ್ಮ ಕರ್ನಾಟಕದವರೇ ಆಗಿದ್ದು ದಾವಣಗೆರೆಯವರಾಗಿದ್ದಾರೆ. ಚಿಕ್ಕವಯಸ್ಸಿನಿಂದಲೂ ಕೂಡ ನಟನೆ ಹಾಗೂ ನೃತ್ಯದ ಕುರಿತಂತೆ ಸಾಕಷ್ಟು ಒಲವಿದ್ದವರು. ಸ್ಕೂಲ್ನಲ್ಲಿ ನಟನೆಯನ್ನು ಕೂಡ ಮಾಡಿಕೊಂಡು ಬಂದವರು. ಆದರೆ ಮನೆಯಲ್ಲಿ ಡಿಗ್ರಿಯನ್ನು ಪಡೆಯುವವರೆಗೂ ಕೂಡ ನಟನೆಗೆ ಹೋಗಬಾರದು ಎಂಬುದಾಗಿ ಷರತ್ತನ್ನು ವಿಧಿಸಿದ್ದರು. ಹೀಗಾಗಿ ಮಲೈಕಾ ರವರು ಇಂಜಿನಿಯರಿಂಗ್ ನಲ್ಲಿ ಪದವಿ ಮುಗಿಸಿ ಈಗ ತಮ್ಮ ಕನಸಿನ ಕೆಲಸವಾಗಿರುವ ನಟನೆಯಲ್ಲಿ ಮುಂದುವರೆದಿದ್ದಾರೆ.

ಸಾಮಾನ್ಯವಾಗಿ ಮಲೈಕಾ ರವರನ್ನು ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನೋಡುವವರು ಅವರ ಜೀವನ ಸುಲಭವಾಗಿ ನಡೆದಿರಬಹುದು ಎಂಬುದಾಗಿ ಅಂದುಕೊಳ್ಳುತ್ತಾರೆ. ಆದರೆ ಅವರು ಒಂದು ಅವಕಾಶಕ್ಕಾಗಿ ಹಲವಾರು ಬಾರಿ ಆಡಿಶನ್ ನೀಡಿದ್ದರೂ ಕೂಡ ಯಾವುದೇ ಪ್ರತಿಫಲ ಸಿಕ್ಕಿರಲಿಲ್ಲ. ಆಡಿಷನ್ ನೀಡಲು ಪ್ರತಿ ಬಾರಿ ದಾವಣಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದರಂತೆ. ಹಿಟ್ಲರ್ ಕಲ್ಯಾಣ ಧಾರವಾಹಿಗೂ ಕೂಡ ಆಡಿಶನ್ ನೀಡುವಾಗ ಯಾವುದೇ ಅಪೇಕ್ಷೆಯಿಲ್ಲದೆ ಬಂದಿದ್ದರು. ಆದರೆ ದಿಲೀಪ್ ರಾಜ್ ರವರ ಪತ್ನಿ ಮಲೈಕ ಅವರಿಗೆ ಕರೆ ಮಾಡಿ ಧಾರವಾಹಿಯಲ್ಲಿ ನೀವು ಸೆಲೆಕ್ಟ್ ಆಗಿದ್ದೀರಿ ಬೆಂಗಳೂರಿನಲ್ಲಿ ಖಾಯಂ ಇರಬೇಕಾಗುತ್ತದೆ ಎಂದು ಹೇಳಿದಾಗ ತುಂಬಾನೇ ಎಕ್ಸೈಟೆಡ್ ಆಗಿದ್ದರು.

malaika vasupal 2 | ಹಿಟ್ಲರ್ ಕಲ್ಯಾಣ ಧಾರಾವಾಹಿಯ ಎಡವಟ್ಟು ಲೀಲಾ ರವರು ನಿಜಕ್ಕೂ ಯಾರು ಗೊತ್ತೇ?? ಇವರ ನಿಜವಾಗ ಕಹಾನಿ ಬಗ್ಗೆ ನಿಮಗೆ ಗೊತ್ತೇ?
ಹಿಟ್ಲರ್ ಕಲ್ಯಾಣ ಧಾರಾವಾಹಿಯ ಎಡವಟ್ಟು ಲೀಲಾ ರವರು ನಿಜಕ್ಕೂ ಯಾರು ಗೊತ್ತೇ?? ಇವರ ನಿಜವಾಗ ಕಹಾನಿ ಬಗ್ಗೆ ನಿಮಗೆ ಗೊತ್ತೇ? 4

ಈಗಾಗಲೇ ಹಲವಾರು ಅವಕಾಶಗಳು ದೂರವಾಗಿದ್ದರು ಕೂಡ ಹಿಟ್ಲರ್ ಕಲ್ಯಾಣ ಧಾರಾವಾಹಿ ಅವಕಾಶ ಮಲೈಕಾ ಅವರಿಗೆ ಸಿಕ್ಕಿದ್ದು ಈಗಾಗಲೇ ಅವಕಾಶದಿಂದಾಗಿ ಕಿರುತೆರೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಹೆಸರನ್ನು ಸಂಪಾದಿಸುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಮನೆಯವರನ್ನು ಭೇಟಿಯಾಗಿ ಬರುತ್ತಾರೆ. ಮಲೈಕಾ ರವರಿಗೆ ಅವರ ಕುಟುಂಬ ಸಾಕಷ್ಟು ಸಪೋರ್ಟಿವ್ ಆಗಿರುವುದು ಕೂಡ ಇಲ್ಲಿ ಮತ್ತೊಂದು ಗಮನಿಸಬೇಕಾದಂತಹ ವಿಚಾರ. ಈಗಾಗಲೇ ಹಲವಾರು ಸಿನಿಮಾಗಳು ಅವಕಾಶ ಹುಡುಕಿಕೊಂಡು ಬಂದರು ಕೂಡ ಹಿಟ್ಲರ್ ಕಲ್ಯಾಣ ಧಾರವಾಹಿ ಕುರಿತಂತೆ ಸಾಕಷ್ಟು ಡೆಡಿಕೇಟೆಡ್ ಆಗಿದ್ದಾರೆ. ತಮ್ಮ ಮುಗ್ಧತೆ ನಟನಾ ಚಾತುರ್ಯತೆ ಯಿಂದಾಗಿ ಮಲೈಕಾ ರವರು ಇನ್ನಷ್ಟು ಅವಕಾಶಗಳನ್ನು ಹಾಗೂ ಇನ್ನಷ್ಟು ಜನರ ಮನಸ್ಸನ್ನು ಗೆಲ್ಲಲಿ ಎಂದು ಹಾರೈಸೋಣ.

Comments are closed.