ಕೊನೆಗೂ ಸಿಕ್ಕವೂ ಸುಂದರ ಕ್ಷಣಗಳು, ಜೊತೆ ಜೊತೆಯಲಿ ನಟ ಅನಿರುದ್ ರವರ ಹುಟ್ಟುಹಬ್ಬದ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿದ ಧಾರಾವಾಹಿ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿ ಎಂದರೆ ಯಾವುದೇ ಅತಿಶಯೋಕ್ತಿ ಎಂದು ಅನಿಸುವುದಿಲ್ಲ. ಪ್ರಸಾರವನ್ನು ಆರಂಭಿಸಿದ ಸಮಯದಲ್ಲಿ ಯಾವುದೇ ಧಾರವಾಹಿಗಳು ಕೂಡ ಜೊತೆ ಜೊತೆಯಲಿ ಧಾರವಾಹಿಯ ಲೆವೆಲ್ ಮ್ಯಾಚ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಿನಿಮಾರಂಗದಲ್ಲಿ ಅನಿರುದ್ಧ್ ರವರು ಸಾಧಿಸಲಾಗದ್ದನ್ನು ಜೊತೆ ಜೊತೆಯಲ್ಲಿ ಧಾರವಾಹಿ ಮೂಲಕ ಸಾಧಿಸಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ನಟಿಸಿದರು ಕೂಡ ಇಷ್ಟೊಂದು ಜನಪ್ರಿಯತೆಯನ್ನು ಅನಿರುದ್ಧ್ ರವರು ಪಡೆದಿರಲಿಲ್ಲ. ಆದರೆ ಕೇವಲ ಕೆಲವೇ ವರ್ಷಗಳ ಜೊತೆ ಜೊತೆಯಲ್ಲಿ ಧಾರವಾಹಿ ಪ್ರಸಾರದ ಮೂಲಕ ಹಿಂದೆಂದೂ ಕಂಡಿರದ ಜನಪ್ರಿಯತೆಯನ್ನು ಅನಿರುದ್ಧ್ ರವರು ಪಡೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಕಿರುತೆರೆಯ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಇದೇ ಫೆಬ್ರವರಿ 16ರಂದು ಅನಿರುದ್ಧ್ ರವರು ತಮ್ಮ ಜನ್ಮದಿನಾಚರಣೆಯನ್ನು ಜೊತೆ ಜೊತೆಯಲ್ಲಿ ಧಾರವಾಹಿ ತಂಡದ ಜೊತೆಗೆ ಹಾಗೂ ಕುಟುಂಬದ ಜೊತೆಗೆ ಆಚರಿಸಿಕೊಂಡಿದ್ದಾರೆ.

jothe jotheyali anirud | ಕೊನೆಗೂ ಸಿಕ್ಕವೂ ಸುಂದರ ಕ್ಷಣಗಳು, ಜೊತೆ ಜೊತೆಯಲಿ ನಟ ಅನಿರುದ್ ರವರ ಹುಟ್ಟುಹಬ್ಬದ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ??
ಕೊನೆಗೂ ಸಿಕ್ಕವೂ ಸುಂದರ ಕ್ಷಣಗಳು, ಜೊತೆ ಜೊತೆಯಲಿ ನಟ ಅನಿರುದ್ ರವರ ಹುಟ್ಟುಹಬ್ಬದ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?? 2

ಇದೇ ಸಂದರ್ಭದಲ್ಲಿ ತಮ್ಮ ಪತ್ನಿ ಕೀರ್ತನ ರವರ ಜೊತೆಗೆ ವಿವಾಹ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಂಡು ಡಬಲ್ ಧಮಾಕ ಖುಷಿಯನ್ನು ಎಲ್ಲರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೇಘ ಶೆಟ್ಟಿ ಸೇರಿದಂತೆ ಜೊತೆ ಜೊತೆಯಲಿ ಧಾರಾವಾಹಿ ತಂಡ ಹಾಜರಿತ್ತು. ಗಟ್ಟಿಮೇಳ ಧಾರವಾಹಿಯ ರಕ್ಷ್ ಹಾಗೂ ದಂಪತಿಗಳು ಕೂಡ ಇದ್ದರು. ವೇದಿಕೆಯಲ್ಲಿ ಕೇಕನ್ನು ಕ’ಟ್ ಮಾಡುವ ಮೂಲಕ ಹಾಗೂ ಹಾಡು ಹೇಳಿ ಡ್ಯಾನ್ಸ್ ಮಾಡುವ ಮೂಲಕ ಸಂತೋಷವನ್ನು ಆಚರಿಸಿದ್ದಾರೆ. ಚಿತ್ರರಂಗದ ಹಾಗೂ ಕಿರುತೆರೆ ಕ್ಷೇತ್ರದ ಹಲವಾರು ಸೆಲೆಬ್ರಿಟಿಗಳು ಅನಿರುದ್ಧ ರವರಿಗೆ ಜನ್ಮದಿನಾಚರಣೆ ಶುಭಾಶಯಗಳನ್ನು ಕೋರಿದ್ದಾರೆ.

Comments are closed.