3 ತಿಂಗಳ ರಾಯರ ಸೇವೆ ಬಳಿಕ ನಡೆದಿತ್ತು ಜಗ್ಗೇಶ್ ರವರ ಜೀವನದಲ್ಲಿ ಪವಾಡ, ಜಗ್ಗೇಶ್ ರವರು ಮತ್ತೊಮ್ಮೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಖಳನಾಯಕನಾಗಿ ಹಾಸ್ಯನಟನಾಗಿ ಎಲ್ಲಾ ವರ್ಗದಲ್ಲಿ ಕೂಡ ಯಶಸ್ಸನ್ನು ಸಾಧಿಸಿರುವ ನಟ ಎಂದರೆ ಅದು ನವರಸ ನಾಯಕ ಜಗ್ಗೇಶ್. ಕನ್ನಡ ಚಿತ್ರರಂಗದಲ್ಲಿ ಅವರ ಸಿನಿಮಾ ಜರ್ನಿ ಎನ್ನುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕ ವಾದದ್ದು.

ಹಲವಾರು ವಿಚಾರಗಳಿಗಾಗಿ ನವರಸ ನಾಯಕ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಅವಮಾನವನ್ನು ಹೊಂದಿದ್ದರೂ ಕೂಡ ಜಗ್ಗದೆ ಬಗ್ಗದೆ ಛಲದಿಂದ ಮುನ್ನಡೆದು ಇಂದು ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾದ ಸ್ಥಾನವನ್ನು ಹೊಂದಿದ್ದಾರೆ. ನಿಮಗೆ ಹೇಳುವ ಅವಶ್ಯಕತೆ ಇಲ್ಲ ನವರಸನಾಯಕ ಜಗ್ಗೇಶ್ ರವರು ಎಷ್ಟು ದೊಡ್ಡ ರಾಯರ ಭಕ್ತರು ಎಂದು. ಇನ್ನು ಚಿಕ್ಕ ಹಳ್ಳಿಯಿಂದ ಬಂದಂತಹ ಹುಡುಗ 40 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತನ್ನ ಅದ್ಭುತ ಪ್ರಯಾಣವನ್ನು ನಡೆಸುತ್ತಾನೆ ಎಂದರೆ ನಿಜಕ್ಕೂ ಕೂಡ ನಂಬುವುದು ಅಸಾಧ್ಯ.

ಇದು ನಾವು ಹೇಳುವ ಮಾತಲ್ಲ ಸ್ವತಹ ನವರಸನಾಯಕ ಜಗ್ಗೇಶ್ ರವರ ಹೇಳುವ ಮಾತು. ಆದರೆ ಜಗ್ಗೇಶ್ ಅವರ ಜೀವನದಲ್ಲಿ ಇಷ್ಟೆಲ್ಲ ಸಾಧ್ಯವಾಗಿದ್ದು ರಾಯರ ಪವಾಡದಿಂದ ಎಂದು ಅವರು ಹೇಳುತ್ತಾರೆ. ಅಷ್ಟಕ್ಕೂ ಜಗ್ಗೇಶ್ ಅವರ ಜೀವನದಲ್ಲಿ ನಡೆದಿರುವ ರಾಯರ ಪವಾಡ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಕುರಿತಂತೆ ಸ್ವತಹ ನವರಸನಾಯಕ ಜಗ್ಗೇಶ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

1980 ಹಾಗೂ 81 ರ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್ ಅವರಿಗೆ ಯಾವುದೇ ಸಿನಿಮಾಗಳ ಅವಕಾಶವಿಲ್ಲದೆ, ಅಂಬರೀಶ್ ರವರ ಸಿನಿಮಾದಲ್ಲಿ ಸಿಗಬೇಕಾದಂತಹ ಅವಕಾಶವೂ ಕೂಡ ಕೈತಪ್ಪಿ ಬೇಸರದಿಂದ ಮನೆಯಕಡೆಗೆ ಬರುತ್ತಿರಬೇಕಾದರೆ ಜ್ಯೋತಿಷಿಯೊಬ್ಬರು ನಿನ್ನ ಜೀವನದಲ್ಲಿ ರಾಯರು ಒಬ್ಬರೇ ಸಹಾಯ ಮಾಡಲು ಸಾಧ್ಯ ಎಂಬುದಾಗಿ ಹೇಳುತ್ತಾರೆ. ಮನೆಗೆ ಬಂದಾಗ ನವರಸನಾಯಕ ಜಗ್ಗೇಶ್ ಅವರ ತಾಯಿ ರಾಯರ ಬಳಿಗೆ ಹೋಗಿ ಬಾ ಎಂಬುದಾಗಿ ಐನೂರು ರೂಪಾಯಿಯನ್ನು ತೆಗೆದುಕೊಡುತ್ತಾರೆ.

ನವರಸನಾಯಕ ಜಗ್ಗೇಶ್ ಅವರು ಮೂರು ತಿಂಗಳುಗಳ ಕಾಲ ರಾಯರ ಸೇವೆ ಮಾಡಿ ವಾಪಸಾಗುತ್ತಾರೆ. ವಾಪಸು ಬಂದಾಗ ಶ್ವೇತಗುಲಾಬಿ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರದ ಅವಕಾಶ ಜಗ್ಗೇಶ್ ಅವರಿಗೆ ಸಿಗುತ್ತದೆ. ಹೀಗೆ ಇಲ್ಲಿಂದ ಜಗ್ಗೇಶ್ ಅವರ ಜೀವನದಲ್ಲಿ ರಾಯರ ಪವಾಡಗಳು ನಡೆದು ಒಂದೊಂದೇ ಅವಕಾಶಗಳು ಹುಡುಕಿಕೊಂಡು ಬರುತ್ತದೆ.

ಮುಂದೆ ಪರಿಮಳ ರವರನ್ನು ಜಗ್ಗೇಶ್ ರವರ ಮದುವೆಯಾದ ನಂತರ ಒಂದು ತಿಂಗಳುಗಳ ಕಾಲ ಮಂತ್ರಾಲಯದಲ್ಲಿ ವಾಸವಾಗುತ್ತಾರೆ. ಆಗ ಪರಿಮಳ ರವರಿಗೆ ಸಂತರೊಬ್ಬರು ಸಿಕ್ಕಿ ನಿಮ್ಮ ಗಂಡ ಮುಂದೊಂದು ದಿನ ದೊಡ್ಡಮಟ್ಟದ ವ್ಯಕ್ತಿಯಾಗುತ್ತಾರೆ ಎಂಬುದಾಗಿ ಹೇಳುತ್ತಾರೆ. ರಾಯರ ಆಶೀರ್ವಾದದಂತೆ ಇಂದು 40 ವರ್ಷಗಳ ನಂತರ ನವರಸನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಬ್ಬರಾಗಿದ್ದಾರೆ. ಇದೇ ರಾಯರ ಪವಾಡವನ್ನು ಹಾಗೂ ಮಹಿಮೆಯನ್ನು ಜಗ್ಗೇಶ್ ಅವರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Comments are closed.