ಬಿಗ್ ನ್ಯೂಸ್: ತಂಡದಿಂದ ಹೊರಗುಳಿದ ಕೆ ಎಲ್ ರಾಹುಲ್; ಭಾರತೀಯ ಕ್ರಿಕೆಟ್ ತಂಡದ ಹೊಸ ಉಪನಾಯಕ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಅಂತೂ-ಇಂತೂ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯನ್ನು ವೈಟ್ ವಾಶ್ ಮೂಲಕ ಗೆದ್ದುಕೊಂಡು ಈ ವರ್ಷಕ್ಕೆ ಉತ್ತಮ ಆರಂಭವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಇನ್ನು ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಮುಂದಿರುವ ಮತ್ತೊಂದು ಅಗ್ನಿಪರೀಕ್ಷೆ ಎಂದರೆ ಅದು ಶ್ರೀಲಂಕಾ ವಿರುದ್ಧದ ಸರಣಿ. ಶ್ರೀಲಂಕಾ ಸರಣಿಯ ಮೂಲಕ ರೋಹಿತ್ ಶರ್ಮಾ ರವರು ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ ಗಳಲ್ಲಿ ವಿರಾಟ್ ಕೊಹ್ಲಿ ರವರ ನಂತರ ನಾಯಕತ್ವದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.

ತಂಡಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ವಾಪಸಾಗುತ್ತಿದ್ದಾರೆ. ರಿಷಬ್ ಪಂತ್ ಹಾಗೂ ವಿರಾಟ್ ಕೊಹ್ಲಿಗೆ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಈ ಬಾರಿಯ ಸರಣಿಗೆ ತಂಡದ ಉಪ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರ ತಂಡದಿಂದ ಹೊರಗುಳಿದಿದ್ದಾರೆ ಹಾಗೂ ಅವರ ಸ್ಥಾನಕ್ಕೆ ತಂಡಕ್ಕೆ ಹೊಸ ಉಪನಾಯಕ ಸೇರಿದ್ದಾರೆ. ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

rohith kl rahul | ಬಿಗ್ ನ್ಯೂಸ್: ತಂಡದಿಂದ ಹೊರಗುಳಿದ ಕೆ ಎಲ್ ರಾಹುಲ್; ಭಾರತೀಯ ಕ್ರಿಕೆಟ್ ತಂಡದ ಹೊಸ ಉಪನಾಯಕ ಯಾರು ಗೊತ್ತಾ??
ಬಿಗ್ ನ್ಯೂಸ್: ತಂಡದಿಂದ ಹೊರಗುಳಿದ ಕೆ ಎಲ್ ರಾಹುಲ್; ಭಾರತೀಯ ಕ್ರಿಕೆಟ್ ತಂಡದ ಹೊಸ ಉಪನಾಯಕ ಯಾರು ಗೊತ್ತಾ?? 2

ಹೌದು ಗಾ’ಯದ ಕಾರಣದಿಂದಾಗಿ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ರವರು ಈ ಸರಣಿಯಿಂದ ಹೊರಗುಳಿದಿದ್ದು. ಈ ಕಾರಣದಿಂದಾಗಿಯೇ ಈ ಬಾರಿಯ ಶ್ರೀಲಂಕಾ ಸರಣಿಯಲ್ಲಿ ಟಿ-20 ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಉಪನಾಯಕನಾಗಿ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ರವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶ್ರೀಲಂಕಾ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು ಯುವ ಉದಯೋನ್ಮುಖ ಆಟಗಾರರ ರಿಂದಲೇ ತಂಡ ತುಂಬಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Comments are closed.