ರಾಮಾಚಾರಿ ಧಾರವಾಹಿಯ ನಾಯಕನಟಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲವು ದಾರವಾಹಿಗಳು ಹಾಗೂ ಧಾರವಾಹಿಯಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿರುವ ಕಲಾವಿದರ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ಜನಪ್ರಿಯತೆ ಹಾಗೂ ಕುತೂಹಲಗಳು ಕೂಡ ಮೂಡುತ್ತಿವೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಆರಂಭಿಸಿರುವ ರಾಮಾಚಾರಿ ಧಾರವಾಹಿ ಕುರಿತಂತೆ. ಅದರಲ್ಲಿ ಚಾರು ಪಾತ್ರವನ್ನು ನಿರ್ವಹಿಸುತ್ತಿರುವ ನಟಿಯ ಕುರಿತಂತೆ ಹಲವಾರು ಜನರಿಗೆ ಕುತೂಹಲ ಇದೆ.

ಅವರು ಯಾರು ಅವರ ಹಿನ್ನೆಲೆ ಏನು ಎಂಬುದು ಕೂಡ ನಿಮ್ಮೆಲ್ಲರ ಕುತೂಹಲಕ್ಕೆ ಕಾರಣವಾಗಿರಬಹುದು. ಇಂದಿನ ಲೇಖನಿಯಲ್ಲಿ ನಾವು ಯಾರು ಪಾತ್ರದಾರಿಯ ಹಿನ್ನೆಲೆಯನ್ನು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದುವುದನ್ನು ಮಾತ್ರ ಮರೆಯಬೇಡಿ. ಚಾರು ಪಾತ್ರದಾರಿಯ ನಿಜವಾದ ಹೆಸರು ಮೌನ ಗುಡ್ಡೆಮನೆ ಎಂದು ಇವರು ಮೂಲತಹ ಕರಾವಳಿಯ ಮಂಗಳೂರಿನವರು. ಸದ್ಯಕ್ಕೆ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾಡೆಲ್ ಆಗಿ ಹಲವಾರು ಫೋಟೋಶೂಟ್ ಗಳಲ್ಲಿ ಕೂಡ ಭಾಗವಹಿಸಿದ್ದಾರೆ. 2020 ರಲ್ಲಿ ನಡೆದಿರುವ ಮಿಸ್ ಟೀನ್ ತುಳುನಾಡು ಕಾಂಪಿಟೇಷನ್ನಲ್ಲಿ ಎರಡನೇ ರನ್ನರ್ ಅಪ್ ಆಗಿ ಕೂಡ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Mouna guddemane | ರಾಮಾಚಾರಿ ಧಾರವಾಹಿಯ ನಾಯಕನಟಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಏನು ಗೊತ್ತೇ??
ರಾಮಾಚಾರಿ ಧಾರವಾಹಿಯ ನಾಯಕನಟಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಏನು ಗೊತ್ತೇ?? 2

ಇವರ ವಿದ್ಯಾಭ್ಯಾಸದ ಕುರಿತಂತೆ ಹೇಳುವುದಾರೆ ಸೇಂಟ್ ಅಲೋಶಿಯಸ್ ನಲ್ಲಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಿಗ್ರಿಯನ್ನು ಕೂಡ ಮುಗಿಸಿದ್ದಾರೆ. ಹಲವಾರು ಕನ್ನಡ ಹಾಗೂ ತುಳು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ. ಒಂದು ವಿಶೇಷ ಆಲ್ಬಮ್ ಸಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ವಿಶ್ವನಾಥ್ ಹಾವೇರಿ ರವರ ಜೊತೆಗೆ ಜೋಡಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇವರ ಡೇಟ್ ಆಫ್ ಬರ್ತ್ ಜೂನ್ ಆರು ಸದ್ಯಕ್ಕೆ ಇವರ ವಯಸ್ಸು 21 ವರ್ಷ ಎಂದು ಹೇಳಲಾಗುತ್ತಿದೆ. ಇವರು ಎತ್ತರ 5.4 ಎಂದು ಹೇಳಲಾಗುತ್ತಿದೆ ಹಾಗೂ ಇವರ ತೂಕ 52 ಕೆಜಿ ಎಂದು ಹೇಳಲಾಗುತ್ತಿದೆ. ರಾಮಾಚಾರಿ ಧಾರಾವಾಹಿ ಇವರ ಮೊದಲು ಧಾರವಾಹಿ ಆಗಿದ್ದರೂ ಕೂಡ ಇವರ ನಟನೆ ಇವರ ಆತ್ಮ ವಿಶ್ವಾಸವನ್ನು ನಿರೂಪಿಸುತ್ತಿದೆ. ಇವರಿಗೆ ಇಂತಹ ಇನ್ನೂ ಹೆಚ್ಚೆಚ್ಚು ಅವಕಾಶಗಳು ಹುಡುಕಿಕೊಂಡು ಬರಲಿ ಎಂದು ಹಾರೈಸೋಣ.

Comments are closed.