20 ವರ್ಷಗಳ ನಂತರ ಮರು ಬಿಡುಗಡೆಯಾದ ಮೆಜೆಸ್ಟಿಕ್ ಗಳಿಸಿದ ಹಣ ಎಷ್ಟು ಗೊತ್ತೇ?? ಆ ಹಣವನ್ನು ಡಿ ಬಾಸ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಕಾಲಿಟ್ಟು ಈಗಾಗಲೇ 20 ವರ್ಷಗಳು ಪೂರ್ಣವಾಗಿದೆ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ಖಳನಟನ ಮಗನಾಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಕಾರ್ಯನಿರ್ವಹಿಸುವುದರ ಮೂಲಕ ಹಂತಹಂತವಾಗಿ ಯಶಸ್ಸಿನ ಮೆಟ್ಟಿಲು ಹತ್ತಿ ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಹಾಗೂ ಅತ್ಯಧಿಕ ಸಂಭಾವನೆಯನ್ನು ಪಡೆಯುವ ನಾಯಕನಟನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನ್ಮ ದಿನದ ಪ್ರಯುಕ್ತವಾಗಿ ಅವರ ಮೊದಲ ಚಿತ್ರ ಮೆಜೆಸ್ಟಿಕ್ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಕೆಲವೇ ಕೆಲವು ಚಿತ್ರಗಳು ಮಾತ್ರ ರೀ-ರಿಲೀಸ್ ಆದ ಮೇಲೂ ಕೂಡ ಅಷ್ಟೇ ಮಟ್ಟದ ಕ್ರೇಜ್ ಅನ್ನು ಹೊಂದಿರುತ್ತದೆ. ಅವುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೊದಲ ಚಿತ್ರ ಮೆಜೆಸ್ಟಿಕ್ ಕೂಡ ಹೌದು.

darshan majestic | 20 ವರ್ಷಗಳ ನಂತರ ಮರು ಬಿಡುಗಡೆಯಾದ ಮೆಜೆಸ್ಟಿಕ್ ಗಳಿಸಿದ ಹಣ ಎಷ್ಟು ಗೊತ್ತೇ?? ಆ ಹಣವನ್ನು ಡಿ ಬಾಸ್ ಮಾಡಿದ್ದೇನು ಗೊತ್ತೇ??
20 ವರ್ಷಗಳ ನಂತರ ಮರು ಬಿಡುಗಡೆಯಾದ ಮೆಜೆಸ್ಟಿಕ್ ಗಳಿಸಿದ ಹಣ ಎಷ್ಟು ಗೊತ್ತೇ?? ಆ ಹಣವನ್ನು ಡಿ ಬಾಸ್ ಮಾಡಿದ್ದೇನು ಗೊತ್ತೇ?? 2

ಮೆಜೆಸ್ಟಿಕ್ ಚಿತ್ರ ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನುಮದಿನದ ಪ್ರಯುಕ್ತವಾಗಿ ಅಭಿಮಾನಿಗಳ ಬೇಡಿಕೆ ಮೇರೆಗೆ ಬಿಡುಗಡೆಯಾಗಿದ್ದು ಮಾಡಿರುವ ಕಲೆಕ್ಷನ್ ಖಂಡಿತವಾಗಿ ನಿಮ್ಮನ್ನು ಆಶ್ಚರ್ಯ ಕ್ಕೆ ತಳ್ಳಲಿದೆ. ಹೌದು ಗೆಳೆಯರೇ ಮೆಜೆಸ್ಟಿಕ್ ಚಿತ್ರ ರೀ ರಿಲೀಸ್ ಆದ ಮೇಲೆ ಕೂಡ ಬರೋಬ್ಬರಿ 2 ಕೋಟಿ ರೂಪಾಯಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಹಣವನ್ನು ಬಡ ಜನರ ಕಲ್ಯಾಣಕ್ಕಾಗಿ ಉಪಯೋಗಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅಲ್ವಾ ಡಿ ಬಾಸ್ ಅನ್ನು ಈ ಜಮಾನದ ಯಜಮಾನ ಎಂದು ಕರೆಯುವುದು. ಇದೇ ರೀತಿಯ ಒಳ್ಳೆ ಕೆಲಸಕ್ಕೆ ಡಿ ಬಾಸ್ ರವರು ಎಲ್ಲರಿಗೂ ಇಷ್ಟವಾಗುವುದು. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.