ಚಿತ್ರಾನ್ನ ಬೋರ್ ಆಯ್ತಾ?? ಈ ರೀತಿ ಸಬ್ಬಕ್ಕಿ ಚಿತ್ರಾನ್ನ ಟ್ರೈ ಮಾಡಿ, ಎಲ್ಲರೂ ಪ್ಲೇಟ್ ಖಾಲಿ ಮಾಡಿ ಮತ್ತೆ ಮತ್ತೆ ಕೇಳಿ ಮಾಡಿಸಿಕೊಳ್ತಾರೆ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರ ಮನೆಯಲ್ಲಿ ಚಿತ್ರಾನ್ನ ಮಾಡಲಾಗುತ್ತದೆ, ಕರ್ನಾಟಕದಲ್ಲಿ ಚಿತ್ರಾನ್ನ ಎನ್ನುವುದು ಒಂದು ಹೆಚ್ಚು ಕಂಡು ಬರುವ ತಿನಿಸುಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು. ಅದೇ ಕಾರಣಕ್ಕೆ ಹೋಟೆಲ್ ನಿಂದ ಹಿಡಿದು ಮನೆಯ ವರೆಗೂ ಕೂಡ ಚಿತ್ರಾನ್ನ ಲಭ್ಯವಿರುತ್ತದೆ. ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಚಿತ್ರಾನ್ನ ಮಾಡದ ಮನೆಯೇ ಇಲ್ಲ. ಆದ ಕಾರಣ ಎಲ್ಲರಿಗೂ ಸಾಮಾನ್ಯ ಚಿತ್ರಾನ್ನ ತಿಂದು ಬೋರ್ ಆಗಿದ್ದರೇ ಬನ್ನಿ ಇಂದು ನಾವು ಸಬ್ಬಕ್ಕಿ ಸೊಪ್ಪಿನ ಚಿತ್ರಾನ್ನ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ.

ಸಬ್ಬಕ್ಕಿ ಸೊಪ್ಪಿನ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಕಟ್ಟು ಸಬ್ಬಕ್ಕಿ ಸೊಪ್ಪು, 3 ಚಮಚ ಎಣ್ಣೆ, 1 ಈರುಳ್ಳಿ, 4 ಒಣಮೆಣಸಿನಕಾಯಿ, 2 ಚಮಚ ಕಡಲೆಬೀಜ, 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆ ಬೇಳೆ, 1 ಚಮಚ ಜೀರಿಗೆ, ಸ್ವಲ್ಪ ಸಾಸುವೆ, ಸ್ವಲ್ಪ ಕರಿಬೇವು, 1 ಚಮಚ ನಿಂಬೆ ಹಣ್ಣಿನ ರಸ, ಕಾಲು ಚಮಚ ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು,ಕಾಲು ಕೆಜಿ ಅಕ್ಕಿಯಿಂದ ಮಾಡಿದ ಅನ್ನ.

ಸಬ್ಬಕ್ಕಿ ಸೊಪ್ಪಿನ ಚಿತ್ರಾನ್ನ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಮುರಿದ ಒಣಮೆಣಸಿನಕಾಯಿ, ಕರಿಬೇವನ್ನು ಹಾಕಿ 40 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಸಬ್ಬಕ್ಕಿ ಸೊಪ್ಪನ್ನು ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ ಅರಿಶಿನ ಪುಡಿಯನ್ನು ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮಾಡಿಕೊಂಡ ಅನ್ನ, ಫ್ರೈ ಮಾಡಿಕೊಂಡ ಕಡಲೆಬೀಜ, ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಸಬ್ಬಕ್ಕಿ ಸೊಪ್ಪಿನ ಚಿತ್ರಾನ್ನ ಸವಿಯಲು ಸಿದ್ದ.

Comments are closed.