Loan EMI: ಲೋನ್ ತಗೊಂಡು ಕಟ್ಟೋಕೆ ಕಷ್ಟ ಆಗಿ EMI ಕಟ್ಟಿಲ್ವಾ?ದಂಡ ಹಾಕ್ತಾ ಇದ್ದಾರಾ?? RBI ಹೊಸ ರೂಲ್ಸ್- EMI ಕಟ್ಟಿಲ್ಲ ಅಂದ್ರು ಚಿಂತೆ ಬೇಡ.
Loan EMI: ನಮಸ್ಕಾರ ಸ್ನೇಹಿತರೇ ನಾವು ಪ್ರತಿಯೊಬ್ಬರೂ ಕೂಡ ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೆಲವೊಂದು ಬ್ಯಾಂಕುಗಳಿಂದ ಲೋನನ್ನು(bank loans) ಪಡೆದುಕೊಳ್ಳುತ್ತೇವೆ. ಸರಿಯಾದ ಸಂದರ್ಭದಲ್ಲಿ ಕಂತುಗಳನ್ನು ಕಟ್ಟುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಆದರೆ ಕೆಲವೊಂದು ಸಮಸ್ಯೆಗಳ ಕಾರಣದಿಂದಾಗಿ ಕೆಲವೊಮ್ಮೆ ಕಂತುಗಳನ್ನು ಸರಿಯಾಗಿ ಕಟ್ಟಲು ಸಾಧ್ಯವಾಗುವುದಿಲ್ಲ. ಅಂಥವರು ಇನ್ಮುಂದೆ ಯೋಚನೆ ಮಾಡಬೇಕಾದ ಅಗತ್ಯ ಇಲ್ಲ. RBI ಘೋಷಿಸಿರುವಂತಹ ಈ ಹೊಸ ಯೋಜನೆಯಿಂದಾಗಿ ಕೋಟ್ಯಾಂತರ ಗ್ರಾಹಕರು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಕೇವಲ ಬ್ಯಾಂಕು ಮಾತ್ರವಲ್ಲದೆ NBFC ಸಂಸ್ಥೆಯ ಗ್ರಾಹಕರು ಕೂಡ ಇದರಿಂದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು- ಪಡೆಯಬಹುದು ಮೂರು ಲಕ್ಷಕ್ಕೂ ಹೆಚ್ಚು ಸಾಲ. ಅರ್ಜಿ ಹಾಕಿ, ಹಣ ಬ್ಯಾಂಕ್ ಖಾತೆಗೆ. Personal Loan
Loan EMI ಮಿಸ್ ಮಾಡಿದ್ರೆ ಭಯಪಡೋದು ಬೇಡ.
ಸಾಮಾನ್ಯವಾಗಿ ಇದುವರೆಗೂ ಕೂಡ ನಿಗದಿತ ದಿನಾಂಕದ ನಂತರ ಕಂತಿನ ಹಣವನ್ನು ಕಟ್ಟಿದರೆ ಪೆನಾಲ್ಟಿಯನ್ನು ವಿಧಿಸಲಾಗುತ್ತಿತ್ತು. ಇನ್ನು ಗ್ರೇಸ್ ಅವಧಿಯನ್ನು ಇಎಂಐ ಕಟ್ಟೋದಕ್ಕೆ ನೀಡುತ್ತಿರಲಿಲ್ಲ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಜನವರಿ ಒಂದರಿಂದ ಈ ನಿಯಮಗಳು ಬದಲಾಗಲಿದ್ದು ಹೊಸ ನಿಯಮಗಳು ಜಾರಿಗೆ ಬರುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.
RBI ಜಾರಿಗೆ ತರಲಿರುವಂತಹ ನಿಯಮಗಳ ಪ್ರಕಾರ ಒಂದು ವೇಳೆ ನಿಮ್ಮ ಇಎಂಐ ಬೌನ್ಸ್ ಆಗಿದ್ದರೆ ಆ ಸಂದರ್ಭದಲ್ಲಿ ಒಂದು ವಾರಗಳ ಕಾಲಾವಕಾಶವನ್ನು ಕೂಡ ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಕಂತಿನ ಹಣವನ್ನು ಪಾವತಿ ಮಾಡುವುದಕ್ಕೆ ಒಂದು ವಾರಗಳ ಸಮಯಾವಕಾಶವನ್ನು ನೀಡಲಾಗುತ್ತದೆ. ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಬ್ಯಾಂಕುಗಳು ವರ್ತಿಸಬೇಕು ಎನ್ನುವುದೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿಯಮಗಳ ಮೂಲಕ ತೆಗೆದುಕೊಂಡ ನಿರ್ಧಾರದ ಹಿಂದಿನ ಮೋಟಿವೇಶನ್ ಆಗಿದೆ.
ಇದನ್ನು ಕೂಡ ಓದಿ: ಬೈಕ್ ಗೆ ಭರ್ಜರಿ ಆಫರ್ ಕೊಟ್ಟ TVS – ವಿಶೇಷತೆ ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Buy TVS IQUBE
RBI ಭಾರತದಲ್ಲಿರುವ ಬ್ಯಾಂಕುಗಳ ಮೇಲೆ ತನ್ನ ದೃಷ್ಟಿಕೋನವನ್ನು ನೆಟ್ಟಿದ್ದು ಪ್ರತಿಯೊಂದು ಬ್ಯಾಂಕುಗಳು ಕೂಡ ಈ ನಿಯಮವನ್ನು ಪಾಲಿಸುತ್ತವೆ ಎಂಬುದನ್ನು ಕೂಡ ಪರೀಕ್ಷಿಸಿದೆ. ಕೇವಲ ಇಷ್ಟು ಮಾತ್ರವಲ್ಲದೆ ಆರ್‌ಬಿಐ ಕ್ರೆಡಿಟ್ ಸ್ಕೋರ್, CIBIL ಹಾಗೂ ಎಕ್ಸ್ಪೀರಿಯನ್ ಸಂಬಂಧಿತ ಕಂಪನಿಗಳ ಬಗ್ಗೆ ಕೂಡ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದು ಇವುಗಳನ್ನು ಸರಿಯಾದ ರೀತಿಯಲ್ಲಿ ಮಾನಿಟರ್ ಮಾಡಬೇಕು ಎನ್ನುವಂತಹ ನಿಯಮಗಳನ್ನು ಕೂಡ ಜಾರಿಗೆ ತರುತ್ತಿದ್ದು ಗ್ರಾಹಕರ ಕ್ರೆಡಿಟ್ ಸ್ಕೋರ್(credit score) ಪ್ರಶ್ನಿಸುವ ಸಂದರ್ಭದಲ್ಲಿ ಅಲರ್ಟ್ ಅನ್ನು ಕಳಿಸುವುದು ಕೂಡ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಿದೆ.
ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವ ಪ್ರಕಾರ ವರ್ಷದಲ್ಲಿ ಒಮ್ಮೆಯಾದರೂ ಗ್ರಾಹಕರಿಗೆ ತಮ್ಮ ವೆಬ್ಸೈಟ್ನಲ್ಲಿ ಬ್ಯಾಂಕುಗಳು ಉಚಿತ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವಂತಹ ಸೌಲಭ್ಯವನ್ನು ಒದಗಿಸಬೇಕು ಎಂಬುದಾಗಿ ಹೇಳಿದೆ. ಎಲ್ಲಾ ಮೇಲಿನ ನಿಯಮಗಳನ್ನು ಕೂಡ ಮುಂದಿನ ಆರು ತಿಂಗಳ ಒಳಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತರಲಿದೆ ಎಂಬುದಾಗಿ ಅಧಿಕೃತವಾದ ಸುದ್ದಿ ಸಿಕ್ಕಿದೆ.
Comments are closed.