ಸಾವಿರ ಕೋಟಿ ಕಲೆಕ್ಷನ್ ಬಗ್ಗೆ ಎಲ್ಲರೂ ಮಾತನಾಡ್ತಾರೆ, ಅಸಲಿ ವಿಚಾರ ಯಾರಿಗೂ ಬೇಡ, KGF ಹಾಗೂ RRR ಗೆಲುವಿಗೆ ಮನೋಜ್ ಬಾಜಪೇಯಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಳಿಸುತ್ತಿವೆ ಆದರೆ ಬಾಲಿವುಡ್ ಚಿತ್ರಗಳು ದಕ್ಷಿಣ ಭಾರತದ ಚಿತ್ರದ ಎದುರುಗಡೆ ಮಂಕಾಗಿ ಕುಳಿತಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿಗೆ ತೆಲುಗು ಚಿತ್ರರಂಗದ ಪುಷ್ಪ ಹಾಗೂ ಆರ್ ಆರ್ ಆರ್ ಹಾಗೂ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಭಾರತೀಯ ಚಿತ್ರರಂಗದ ಮಾರುಕಟ್ಟೆಯಲ್ಲಿ ಸತತವಾಗಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿವೆ ಎಂದರೆ ತಪ್ಪಾಗಲಾರದು.

ಅದರಲ್ಲೂ ರಾಜಮೌಳಿ ನಿರ್ದೇಶನದ ಹಾಗೂ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಆರ್ ಆರ್ ಆರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಸಾವಿರ ಕೋಟಿ ರೂಪಾಯಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಮಂದಿಯ ಮುಖಭಂಗ ಆಗುವಂತೆ ಮಾಡಿದ್ದಾರೆ.

manoj vajpayee about kgf rrr | ಸಾವಿರ ಕೋಟಿ ಕಲೆಕ್ಷನ್ ಬಗ್ಗೆ ಎಲ್ಲರೂ ಮಾತನಾಡ್ತಾರೆ, ಅಸಲಿ ವಿಚಾರ ಯಾರಿಗೂ ಬೇಡ, KGF ಹಾಗೂ RRR ಗೆಲುವಿಗೆ ಮನೋಜ್ ಬಾಜಪೇಯಿ ಹೇಳಿದ್ದೇನು ಗೊತ್ತಾ??
ಸಾವಿರ ಕೋಟಿ ಕಲೆಕ್ಷನ್ ಬಗ್ಗೆ ಎಲ್ಲರೂ ಮಾತನಾಡ್ತಾರೆ, ಅಸಲಿ ವಿಚಾರ ಯಾರಿಗೂ ಬೇಡ, KGF ಹಾಗೂ RRR ಗೆಲುವಿಗೆ ಮನೋಜ್ ಬಾಜಪೇಯಿ ಹೇಳಿದ್ದೇನು ಗೊತ್ತಾ?? 2

ಇನ್ನು ಈ ಕುರಿತಂತೆ ಇತ್ತೀಚಿಗಷ್ಟೇ ಬಾಲಿವುಡ್ ಚಿತ್ರರಂಗದ ಶ್ರೇಷ್ಠ ಕಲಾವಿದರಲ್ಲೊಬ್ಬರಾಗಿರುವ ಮನೋಜ್ ಭಾಜಪೇಯಿ ರವರು ದಕ್ಷಿಣ ಭಾರತದ ಫಿಲಂ ಮೇಕರ್ಸ್ ಗಳು ಪ್ರತಿಯೊಂದು ದೃಶ್ಯವನ್ನು ಹಾಗೂ ಸಿನಿಮಾವನ್ನು ಮಾಡುವಾಗ ಸಂಪೂರ್ಣ ಡೆಡಿಕೇಶನ್ ನಲ್ಲಿ ಹಾಗೂ ಸಿನಿಮಾವನ್ನು ಜಗತ್ತಿನಲ್ಲಿ ಅತ್ಯಂತ ಬೆಸ್ಟ್ ಸಿನಿಮಾ ಆಗಿ ಮಾಡಬೇಕು ಎನ್ನುವ ನಿಷ್ಠೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಆದರೆ ನಮ್ಮ ಬಾಲಿವುಡ್ ಮಂದಿ ಕೇವಲ ಹಣದ ದೃಷ್ಟಿಕೋನದಲ್ಲಿ ಸಿನಿಮಾವನ್ನು ಮಾಡುತ್ತಾರೆ ಹೀಗಾಗಿಯೇ ದಕ್ಷಿಣ ಭಾರತದ ಚಿತ್ರಗಳು ಹೆಚ್ಚಾಗಿ ಪ್ರೇಕ್ಷಕರ ಗಮನವನ್ನು ಸೆಳೆಯುತ್ತವೆ ಎಂಬುದಾಗಿ ಹೇಳಿದ್ದಾರೆ.

ಇನ್ನು ಇಷ್ಟು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದ್ದೇವೆ ಎಂಬುದಾಗಿ ಸಿನಿಮಾಗಳ ಕುರಿತಂತೆ ಮಾತ್ರ ಮಾತನಾಡುತ್ತಿದ್ದೇವೆ ಆದರೆ, ಕಲಾವಿದರ ನಟನೆ ಹೇಗಿದೆ ಹಾಗೂ ತಂತ್ರಜ್ಞಾನ ಕಾರ್ಯ ಹೇಗಿದೆ ಎನ್ನುವ ಕುರಿತಂತ ಯಾರು ಕೂಡ ಗುರುತಿಸಿ ಮಾತನಾಡುತ್ತಿಲ್ಲ ನಾವು ಕೇವಲ ಕಲೆಕ್ಷನ್ ವಿಚಾರದಲ್ಲಿ ಸಿಕ್ಕಿದ್ದೇ ಎಂಬುದಾಗಿ ಮನೋಜ್ ಬಾಜಪೇಯಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದು ಕೂಡ ಒಂದು ಲೆಕ್ಕದಲ್ಲಿ ನಿಜ ಎಂದು ಹೇಳಬಹುದಾಗಿದೆ ಕೇವಲ ಜನರು ಚಿತ್ರದ ಕಲೆಕ್ಷನ್ ವಿಚಾರವಾಗಿ ಚಿತ್ರವನ್ನು ಹೊಗಳುತ್ತಾರೆ ವಿನಹ ಈ ಚಿತ್ರದಲ್ಲಿ ನಟಿಸಿರುವ ಪೋಷಕ ಕಲಾವಿದರು ಹಾಗೂ ತಂತ್ರಜ್ಞರ ಕಾರ್ಯವನ್ನು ಶ್ಲಾಘಿಸುವ ಕೆಲಸವನ್ನು ಕಡಿಮೆ ಮಾಡುತ್ತಿದ್ದಾರೆ. ಮನೋಜ್ ವಾಜಪೇಯಿರವರ ಈ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.