ಮೀನಾ ರವರು ಮೊದಲು ವಿದ್ಯಾ ಸಾಗರ್ ರವರ ಜೊತೆ ಮದುವೆಗೆ ನಿರಾಕರಣೆ ಮಾಡಿದ್ದರು,ಆ ಮೇಲೆ ಅವರನ್ನೇ ಮದುವೆಯಾಗಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಮಿಂಚಿ ಮೆರೆದಿದ್ದ ಬಹುಭಾಷಾ ತಾರೆ ಆಗಿರುವ ಮೀನಾರ ಅವರ ಪತಿ ವಿದ್ಯಾಸಾಗರ್ ರವರು ಇತ್ತೀಚೆಗೆ ಅಂದರೆ ಜೂನ್ 28ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿರುವುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ.ಹೌದು ಗೆಳೆಯರೇ ವಿದ್ಯಾಸಾಗರ್ ರವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಹಾಗೂ ಮಹಾಮಾರಿಯು ಕೂಡ ಈ ಸಂದರ್ಭದಲ್ಲಿ ಅವರಿಗೆ ಮಾರಕವಾಗಿ ಪರಿಣಮಿಸಿರುವ ಫಲವಾಗಿ ಜೂನ್ 28ರಂದು ಕೊನೆಯುಸಿರೆಳೆದಿದ್ದಾರೆ. ಇನ್ನು ಜೂನ್ 29ರಂದು ಅವರ ಕೊನೆಯ ವಿಧಿವಿಧಾನ ಕಾರ್ಯಗಳು ಮುಗಿದಿದೆ.

ನಟಿ ಮೀನಾ ರವರು ಮೊದಲಿನಿಂದಲೂ ಕೂಡ ತಮ್ಮ ಗಂಡ ನೀಡಿರುವ ಬೆಂಬಲ ಹಾಗೂ ಸಪೋರ್ಟ್ ಕುರಿತಂತೆ ಆಗಾಗ ಟಿವಿ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುತ್ತಲೇ ಇರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಮದುವೆ ಆದ ಮೇಲೆ ಕೂಡ ನಟನೆಗೆ ಯಾವುದೇ ರೀತಿಯ ಅಡ್ಡಿಯನ್ನು ಮಾಡುವ ಕೆಲಸವನ್ನು ವಿದ್ಯಾಸಾಗರ್ ಮಾಡಿಲ್ಲ ಎನ್ನುವುದು ಕೂಡ ಇಲ್ಲಿ ತಿಳಿದುಬಂದಿದೆ. ಇನ್ನು ಮೀನಾ ಹಾಗೂ ವಿದ್ಯಾಸಾಗರ್ ರವರ ಮಗಳಾಗಿರುವ ನೈನಿಕಾ ಕೂಡ ಬಾಲನಟಿಯಾಗಿ ಈಗಾಗಲೇ ತಲಪತಿ ವಿಜಯ್ ನಟನೆಯ ಥೆರಿ ಸಿನಿಮಾದಲ್ಲಿ ನಟಿಸಿರುವುದು ನಾವು ಈಗಾಗಲೇ ನೋಡಿದ್ದೇವೆ.

meena 2 | ಮೀನಾ ರವರು ಮೊದಲು ವಿದ್ಯಾ ಸಾಗರ್ ರವರ ಜೊತೆ ಮದುವೆಗೆ ನಿರಾಕರಣೆ ಮಾಡಿದ್ದರು,ಆ ಮೇಲೆ ಅವರನ್ನೇ ಮದುವೆಯಾಗಿದ್ದು ಯಾಕೆ ಗೊತ್ತೇ?
ಮೀನಾ ರವರು ಮೊದಲು ವಿದ್ಯಾ ಸಾಗರ್ ರವರ ಜೊತೆ ಮದುವೆಗೆ ನಿರಾಕರಣೆ ಮಾಡಿದ್ದರು,ಆ ಮೇಲೆ ಅವರನ್ನೇ ಮದುವೆಯಾಗಿದ್ದು ಯಾಕೆ ಗೊತ್ತೇ? 2

ಇನ್ನೊಂದು ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾಸಾಗರ್ ಅವರ ಜೊತೆಗೆ ಮದುವೆ ಆಗುವುದನ್ನು ನಾನು ನಿರಾಕರಿಸಿದ್ದೆ ಎಂಬುದನ್ನು ಕೂಡ ಬಿಚ್ಚಿಟ್ಟಿದ್ದಾರೆ. ಮೊದಲಿಗೆ ಇವರಿಬ್ಬರ ಜಾತಕ ಮ್ಯಾಚ್ ಆದಾಗ ಇಬ್ಬರ ಪ್ರೊಫೆಷನ್ ಬೇರೆ ಇದ್ದ ಕಾರಣದಿಂದಾಗಿ ಮದುವೆಯನ್ನು ನಿರಾಕರಿಸಿದ್ದರಂತೆ. ಆ ಸಂದರ್ಭದಲ್ಲಿ ವಿದ್ಯಾಸಾಗರ್ ಅವರು ಪರವಾಗಿಲ್ಲ ಎಂಬುದಾಗಿ ಹೇಳಿ ಶುಭಕೋರಿದ್ದರಂತೆ. ಅವರು ಒಳ್ಳೆಯ ಗುಣವನ್ನು ನೋಡಿ ಮತ್ತೆ ನೀನು ಅವರವರು ಮದುವೆಗೆ ಒಪ್ಪಿಕೊಂಡಿದ್ದರಂತೆ ಎಂಬುದನ್ನು ಕೂಡ ಅವರೇ ಹಿಂದಿನ ರಿಯಾಲಿಟಿಶೋ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

Comments are closed.