ರಾಹುಲ್ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ, ಕಮರುತ್ತಿದೆ ರಾಹುಲ್ ಭವಿಷ್ಯ. ಮತ್ತೊಂದು ಷಾಕಿಂಗ್ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಎಲ್ ರಾಹುಲ್ ಅವರ ಕ್ರಿಕೆಟ್ ಜೀವನಲ್ಲಿ ಕಂಡುಬರುತ್ತಿರುವ ಹಲವಾರು ಪರಿಣಾಮಗಳ ಸಂಕ್ಷಿಪ್ತ ಫಲಿತಾಂಶವನ್ನು ನೋಡಿದರೆ ಕಂಡಿತವಾಗಿ ಇದು ಅವರ ಕರಿಯರ್ ಗೆ ಸಾಕಷ್ಟು ಮುಳುವಾಗಬಹುದು ಎಂಬುದಾಗಿ ಹೇಳಬಹುದಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತದಲ್ಲಿ ನಡೆದಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿಯನ್ನು ನೀಡಿ ಕೆ ಎಲ್ ರಾಹುಲ್ ರವರನ್ನು ನಾಯಕನ ಸ್ಥಾನದಲ್ಲಿ ನೇಮಿಸಲಾಗಿತ್ತು. ಆದರೆ ತೊಡೆಸಂದಿಯ ಇಂಜುರಿಯ ಕಾರಣದಿಂದಾಗಿ ರಾಹುಲ್ ರವರು ತಂಡದಿಂದ ಹಿಂದೆ ಸರಿಯಬೇಕಾಯಿತು. ಈ ಹಿಂದೆ ಕೂಡ ಹಲವಾರು ಬಾರಿ ಸತತವಾಗಿ ಇಂಜುರಿ ಗಳಿಂದ ಕೆ ಎಲ್ ರಾಹುಲ್ ರವರ ಬಳಲಿರುವುದನ್ನು ನಾವು ನೋಡಿರಬಹುದಾಗಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಈಗಾಗಲೇ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಹುಲ್ ರವರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಮುಗಿದಿದ್ದರೂ ಕೂಡ ಕೆ ಎಲ್ ರಾಹುಲ್ ರವರಿಗೆ ಅದರಿಂದ ಸಂಪೂರ್ಣವಾಗಿ ಗುಣಮುಖರಾಗಲು ಹತ್ತರಿಂದ ಹನ್ನೆರಡು ವಾರಗಳು ಬೇಕಾಗಬಹುದು. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡಿನ ಸಂಪೂರ್ಣ ಸರಣಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಹಾಗೂ ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಅನ್ನು ಕೂಡ ಮಿಸ್ ಮಾಡಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

Kl Rahul 1 | ರಾಹುಲ್ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ, ಕಮರುತ್ತಿದೆ ರಾಹುಲ್ ಭವಿಷ್ಯ. ಮತ್ತೊಂದು ಷಾಕಿಂಗ್ ಸುದ್ದಿ. ಏನು ಗೊತ್ತೇ??
ರಾಹುಲ್ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ, ಕಮರುತ್ತಿದೆ ರಾಹುಲ್ ಭವಿಷ್ಯ. ಮತ್ತೊಂದು ಷಾಕಿಂಗ್ ಸುದ್ದಿ. ಏನು ಗೊತ್ತೇ?? 2

ಭವಿಷ್ಯದ ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂದೇ ಬಿಂಬಿತವಾಗಿರುವ ಕೆಎಲ್ ರಾಹುಲ್ ರವರು ಹಲವಾರು ಸ್ಪರ್ಧೆಯ ನಡುವೆ ಹೀಗೆ ಸತತವಾಗಿ ಇಂಜುರಿ ಯಿಂದ ತಂಡದಿಂದ ದೂರವಾಗುತ್ತಿರುವುದು ಅವರ ಭವಿಷ್ಯಕ್ಕೆ ಕಠಿಣವಾಗಿ ಪರಿಣಮಿಸಬಹುದು ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಕುರಿತಂತೆ ಅವರು ಸಾಕಷ್ಟು ನಿಗಾ ವಹಿಸಬೇಕಾಗಿರುವುದು ಪ್ರಮುಖವಾಗಿದೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ತಂಡವನ್ನು ಗೆಲ್ಲಿಸಬಲ್ಲ ಹಾಗೂ ಮುನ್ನಡೆಸಬಲ್ಲ ಕ್ಷಮತೆಯನ್ನು ಹೊಂದಿರುವ ಕೆಎಲ್ ರಾಹುಲ್ ರವರು ಮತ್ತೆ ಸ್ಟ್ರಾಂಗ್ ಕಂಬ್ಯಾಕ್ ಮಾಡುವುದು ಅಗತ್ಯವಾಗಿದ್ದು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಕೆ ಎಲ್ ರಾಹುಲ್ ರವರಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಲಿದೆ.

Comments are closed.