ಚಿರು ಸರ್ಜಾ ಅವಾರ್ಡ್ ನೋಡಿ ನಂದು ನಂದು ಎಂದ ರಾಯನ್ ರಾಜ್. ಸುಂದರ ಕ್ಷಣಗಳ ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದ ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ ಚಿತ್ರರಂಗದ ಸಿನಿಮಾ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಎರಡು ಪ್ರತಿಷ್ಠಿತ ಅವಾರ್ಡ್ ಕಾರ್ಯಕ್ರಮಗಳು ನಡೆದಿದೆ. ಇದಕ್ಕೂ ಮುನ್ನ ಇತ್ತೀಚಿಗಷ್ಟೇ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ನಮ್ಮ ಬೆಂಗಳೂರಿನಲ್ಲಿ ನಡೆದಿತ್ತು. ಇದು ನಡೆದಿರುವ ಕೆಲವೇ ಸಮಯಗಳ ಅಂತರದಲ್ಲಿ ಅಂದರೆ ಅಕ್ಟೋಬರ್ 9 ರಂದು ನಮ್ಮ ಬೆಂಗಳೂರಿನಲ್ಲಿ ಈಗ ಪ್ರತಿಷ್ಠಿತ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮವು ಕೂಡ ಸಂಪನ್ನಗೊಂಡಿದೆ.

ಹೌದು ಗೆಳೆಯರೇ, ನಮ್ಮ ಹೆಮ್ಮೆಯ ಬೆಂಗಳೂರಿನಲ್ಲಿ ಪ್ರತಿಷ್ಠಿತ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮವು ಕೂಡ ಸಂಪನ್ನಗೊಂಡಿದೆ. ಇನ್ನು ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಸೇರಿದಂತೆ ಉತ್ತರ ಭಾರತದ ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮರಣೋತ್ತರವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಿರು ಸರ್ಜಾ ಅವರಿಗೆ ಅವಾರ್ಡ್ ಅನ್ನು ನೀಡಿ ಗೌರವಿಸಿ ಅವರನ್ನು ಸ್ಮರಿಸಲಾಯಿತು. ಇನ್ನು ಚಿರು ಸರ್ಜಾ ಅವರಿಗೆ ಫಿಲಂ ಫೇರ್ ಅವಾರ್ಡ್ ನೀಡಿದ್ದನ್ನು ಅವರ ಪತ್ನಿಯಾಗಿರುವ ಮೇಘನಾ ರಾಜ್ ಅವರು ಪಡೆದುಕೊಂಡಿದ್ದಾರೆ. ಇನ್ನು ಅವಾರ್ಡ್ ಅನ್ನು ಚಿರು ಸರ್ಜಾ ಅವರ ಫೋಟೋ ಪಕ್ಕದಲ್ಲಿ ತಮ್ಮ ಮಗನನ್ನು ಹಿಡಿದುಕೊಂಡು ತೆಗೆಸಿಕೊಂಡಿರುವ ಫೋಟೋವನ್ನು ಮೇಘನಾ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಚಿರು ಸರ್ಜಾ ಅವರನ್ನು ನೆನಪಿಸಿಕೊಂಡಿದ್ದಾರೆ.

meghana filmfare | ಚಿರು ಸರ್ಜಾ ಅವಾರ್ಡ್ ನೋಡಿ ನಂದು ನಂದು ಎಂದ ರಾಯನ್ ರಾಜ್. ಸುಂದರ ಕ್ಷಣಗಳ ವಿಡಿಯೋ ನೋಡಿ.
ಚಿರು ಸರ್ಜಾ ಅವಾರ್ಡ್ ನೋಡಿ ನಂದು ನಂದು ಎಂದ ರಾಯನ್ ರಾಜ್. ಸುಂದರ ಕ್ಷಣಗಳ ವಿಡಿಯೋ ನೋಡಿ. 2

ಇನ್ನು ಈ ಸಂದರ್ಭದಲ್ಲಿ ಜೂನಿಯರ್ ಚಿರು ಸರ್ಜಾ ರಾಯನ ರಾಜ್ ಸರ್ಜಾ ಆ ಅವಾರ್ಡ್ ನಂದು ಎನ್ನುವುದಾಗಿ ಅವಾರ್ಡ್ ಅನ್ನು ತಾಯಿಯಿಂದ ಮುದ್ದಾಗಿ ಕಸಿದುಕೊಳ್ಳಲು ಯತ್ನಿಸುತ್ತಿರುವ ಕ್ಷಣವು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೀವು ಕೂಡ ನೋಡಬಹುದಾಗಿದೆ. ಖಂಡಿತವಾಗಿ ಈ ಅವಾರ್ಡ್ ಕಾರ್ಯಕ್ರಮದಲ್ಲಿ ಚಿರು ಸರ್ಜಾ ಅವರನ್ನು ಎಲ್ಲರೂ ಮಿಸ್ ಮಾಡಿಕೊಂಡಿದ್ದರು ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.