ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ರವರ ಸೀಮಂತ ಕಾರ್ಯಕ್ರಮಕ್ಕೆ ಮೇಘನ್ ರಾಜ್ ರವರು ಕೊಟ್ಟ ಉಡುಗೊರೆ ಏನು ಗೊತ್ತೆ??

ನಮಸ್ಕಾರ ಸ್ನೇಹಿತರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಶಂಕರ್ ಅವರು ಈಗಾಗಲೇ ಗರ್ಭಿಣಿಯಾಗಿದ್ದು ಇದೇ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿರುವ ವಿಚಾರವು ಕೂಡ ನಿಮಗೆ ಈಗಾಗಲೇ ತಿಳಿದಿದೆ. ಈಗಾಗಲೇ ತಮ್ಮ ಪತ್ನಿಯ ಆಸೆಯನ್ನು ನೆರವೇರಿಸುವ ಸಲುವಾಗಿ ಧ್ರುವ ಸರ್ಜಾ ಕೂಡ ಶಾಸ್ತ್ರೋಕ್ತವಾಗಿ ಹಾಗೂ ಅದ್ಧೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ.

ಕಳೆದ ಬಾರಿ ನಿಮಗೆ ನೆನಪಿರಬಹುದು ತಮ್ಮ ಅಣ್ಣನ ಪತ್ನಿ ಎಂದರೆ ಅತ್ತಿಗೆ ಆಗಿರುವ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರವನ್ನು ಕೂಡ ಸ್ವತಹ ಧ್ರುವ ಸರ್ಜಾ ಅವರೇ ಮುಂದೆ ನಿಂತು ಅದ್ದೂರಿಯಾಗಿ ಮಾಡಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈಗಾಗಲೇ ಪ್ರೇರಣಶಂಕರ್ ಅವರ ಸೀಮಂತ ಶಾಸ್ತ್ರದ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ನೋಡಿ ಶುಭ ಹಾರೈಸಿದ್ದಾರೆ. ಇನ್ನು ಮೇಘನಾ ರಾಜ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿದ್ದು ತಮ್ಮ ನಾದಿನಿಗೆ ಒಂದು ವಿಶೇಷವಾದ ಉಡುಗೊರೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಆ ವಿಶೇಷವಾದ ಗಿಫ್ಟ್ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

prerana baby shower | ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ರವರ ಸೀಮಂತ ಕಾರ್ಯಕ್ರಮಕ್ಕೆ ಮೇಘನ್ ರಾಜ್ ರವರು ಕೊಟ್ಟ ಉಡುಗೊರೆ ಏನು ಗೊತ್ತೆ??
ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ರವರ ಸೀಮಂತ ಕಾರ್ಯಕ್ರಮಕ್ಕೆ ಮೇಘನ್ ರಾಜ್ ರವರು ಕೊಟ್ಟ ಉಡುಗೊರೆ ಏನು ಗೊತ್ತೆ?? 2

ಹೌದು ತಮ್ಮ ಪ್ರೀತಿಯ ಪ್ರೇರಣಶಂಕರ್ ಅವರಿಗೆ ಮೇಘನಾ ರಾಜ್ ಅರವತ್ತು ಸೀಮಂತ ಶಾಸ್ತ್ರದ ಕಾರ್ಯಕ್ರಮದ ಸಂದರ್ಭದಲ್ಲಿ ಚಿನ್ನದ ಬಳೆಗಳನ್ನು ಉಡುಗೊರೆಯಾಗಿ ನೀಡಿರುವುದು ಕಂಡುಬಂದಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಕೂಡ ಸಂತೋಷದಿಂದ ಪಾಲ್ಗೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.