ವಿಶ್ವಕಪ್ ಗೆಲ್ಲಬಲ್ಲ ಟಾಪ್ ಎರಡು ತಂಡಗಳನ್ನು ಆಯ್ಕೆ ಮಾಡಿದ ಇಂಗ್ಲೆಂಡ್ ಮೊಯಿನ್ ಅಲಿ. ಭಾರತಕ್ಕೆ ಚಾನ್ಸ್ ಇದೆಯಾ?? ನೀಡಿದ ಉತ್ತರವೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಭಾರತ ಇಂದು ಸೌತ್ ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಳಿದ್ದು ಇದಾದ ನಂತರ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿರುವ ಟಿ20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾ ಗೆ ಪ್ರಯಾಣ ಬೆಳೆಸಲಿದೆ. ಇದೇ ಸಮಯದಲ್ಲಿ ಮೋಹಿನ್ ಆಲಿ ನೇತೃತ್ವದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಕೂಡ ಪಾಕಿಸ್ತಾನದ ನೆಲದಲ್ಲಿ ಅತ್ಯದ್ಭುತ ಟಿ ಟ್ವೆಂಟಿ ಸರಣಿಯನ್ನು ಮುಗಿಸಿಕೊಂಡು ಬಂದಿದೆ. ಹೌದು ಮಿತ್ರರೇ ಪಾಕಿಸ್ತಾನ ತಂಡದ ವಿರುದ್ಧ ಏಳು ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಸರಣಿಯನ್ನು ಪಾಕಿಸ್ತಾನದ ತವರು ನೆಲದಲ್ಲಿ ಅಧಿಕಾರಿಯುತವಾಗಿ ಗೆದ್ದಿದೆ.
ಈ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಭೂ ಮುನ್ನವೇ ಇಂಗ್ಲೆಂಡ್ ತಂಡ ಒಂದೊಳ್ಳೆ ಆತ್ಮವಿಶ್ವಾಸದಿಂದ ಟೂರ್ನಮೆಂಟನ್ನು ಎದುರಿಸಲಿದೆ ಎಂಬುದಾಗಿ ಹೇಳಬಹುದಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡಗಳು ಯಾವುವು ಎಂದು ಕೇಳಿದಾಗ ಮೊಯಿನ್ ಅಲಿ ನೀಡಿರುವ ಉತ್ತರ ನಿಜಕ್ಕೂ ಕೂಡ ಎಲ್ಲರನ್ನು ಆಶ್ಚರ್ಯಕ್ಕೆ ಒಳಪಡಿಸಿತ್ತು. ಈ ಪ್ರಶ್ನೆಗೆ ಮೋಯಿನ್ ಅಲಿ ಉತ್ತರ ನೀಡುವ ಮುನ್ನ ನಮ್ಮ ತಂಡ ಈ ಬಾರಿಯ t20 ವಿಶ್ವಕಪ್ ನಲ್ಲಿ ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆ ಆದರೆ ನಾವು ಗೆಲ್ಲುವ ಫೇವರಿಟ್ ತಂಡ ಎಂದು ನನಗೆ ಅನಿಸುತ್ತಿಲ್ಲ ಆ ಭಾವನೆ ನನಗೆ ಬಂದಿಲ್ಲ ಎಂಬುದಾಗಿ ನೇರವಾಗಿ ಮೊಯಿನ್ ಅಲಿ ಹೇಳಿದ್ದಾರೆ.
ಇನ್ನು ಮುಂದುವರೆದು ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ಅನ್ನು ಗೆಲ್ಲುವ ಫೇವರೆಟ್ ತಂಡಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಂಚೂಣಿಯಲ್ಲಿವೆ ಎಂಬುದಾಗಿ ಇಂಗ್ಲೆಂಡ್ ತಂಡದ ಟಿ 20 ನಾಯಕ ಆಗಿರುವ ಮೊಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಖ್ಯಾತನಾಮ ತಂಡಗಳ ನಡುವೆ ಏರ್ಪಡುವುದರಲ್ಲಿ ಅನುಮಾನವೇ ಇಲ್ಲ. ಈ ಬಾರಿಯ t-20 ವಿಶ್ವಕಪ್ ನಗದು ಬಹುಮಾನ ಕೂಡ ಹೆಚ್ಚಾಗಿದ್ದು, ನಿಮ್ಮ ಪ್ರಕಾರ ಯಾವ ದೇಶ ಈ ಬಾರಿ ಟಿ-20 ವಿಶ್ವಕಪ್ ಗೆಲ್ಲಲಿದೆ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.
Comments are closed.