ಪಂದ್ಯ ಗೆಲ್ಲಿಸಿಕೊಡುತ್ತಿರುವ ಮ್ಯಾಚ್ ವಿನ್ನರ್ ಔಟ್. ಸೌತ್ ಆಫ್ರಿಕಾ ವಿರುದ್ದದ ಮುಂದಿನ ಪಂದ್ಯ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಮೂರು ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿ ಗೆದ್ದುಕೊಂಡಿದೆ. ಇನ್ನು ಮೂರನೇ ಪಂದ್ಯ ಇಂದೋರ್ ನಲ್ಲಿ ನಡೆಯಲಿದ್ದು ಈ ಪಂದ್ಯಕೂ ಮುನ್ನವೇ ಸ್ಟಾರ್ ಆಟಗಾರ ತಂಡದಿಂದ ಹೊರಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಹೌದು ಗೆಳೆಯರೇ ಆಟಗಾರ ಬೇರೆ ಯಾರು ಅಲ್ಲ ರನ್ ಮಶೀನ್ ಕಿಂಗ್ ಕೊಹ್ಲಿ. ಏಷ್ಯಾಕಪ್ ನಿಂದ ಪ್ರಾರಂಭಿಸಿ ವಿರಾಟ್ ಕೊಹ್ಲಿ ಅವರು ತಮ್ಮ ಜೀವಮಾನದ ಅತ್ಯದ್ಭುತ ಫಾರ್ಮ್ ನಲ್ಲಿದ್ದಾರೆಂದರೆ ತಪ್ಪಾಗಲಾರದು. ಇವರ ಜೊತೆಗೆ ಕೆ ಎಲ್ ರಾಹುಲ್ ರವರು ಕೂಡ ಮೂರನೇ ಟಿ20 ಪಂದ್ಯದಿಂದ ತಂಡದಿಂದ ಹೊರ ಬಂದಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಇದೆ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾ ನೆಲಕ್ಕೆ ಪ್ರಯಾಣ ಬೆಳೆಸಲಿದೆ. ವಿಶ್ವಕಪ್ ಅನ್ನು ಮುಗಿಸಿದ ನಂತರ ನೇರವಾಗಿ ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ತಂಡ ನೇರವಾಗಿ ಪ್ರಯಾಣ ಬೆಳೆಸಲಿದೆ. ಇದಕ್ಕೂ ಮುನ್ನ ಈಗ ವಿರಾಟ್ ಕೊಹ್ಲಿ ಅವರು ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆದು ಹೋಗಲು ವಿಶ್ರಾಂತಿ ಪಡೆದಿದ್ದು ಸುದೀರ್ಘಕಾಲ ಕ್ರಿಕೆಟ್ ಗೂ ಮುನ್ನ ಕುಟುಂಬದೊಂದಿಗೆ ಕೊಂಚಮಟ್ಟಿಗೆ ಸಂತೋಷದ ಕ್ಷಣಗಳನ್ನು ಕಳೆಯಲು ನಿರ್ಧರಿಸಿದ್ದಾರೆ ಎಂದು ಹೇಳಬಹುದಾಗಿದೆ. ಕೆ ಎಲ್ ರಾಹುಲ್ ಅವರು ಕೂಡ ಇದೇ ಮನಸ್ಥಿತಿಯಲ್ಲಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

kohli rahul | ಪಂದ್ಯ ಗೆಲ್ಲಿಸಿಕೊಡುತ್ತಿರುವ ಮ್ಯಾಚ್ ವಿನ್ನರ್ ಔಟ್. ಸೌತ್ ಆಫ್ರಿಕಾ ವಿರುದ್ದದ ಮುಂದಿನ ಪಂದ್ಯ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??
ಪಂದ್ಯ ಗೆಲ್ಲಿಸಿಕೊಡುತ್ತಿರುವ ಮ್ಯಾಚ್ ವಿನ್ನರ್ ಔಟ್. ಸೌತ್ ಆಫ್ರಿಕಾ ವಿರುದ್ದದ ಮುಂದಿನ ಪಂದ್ಯ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ?? 2

ವಿರಾಟ್ ಕೊಹ್ಲಿ ಅವರ ಅನುಭವ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಯಾವುದೇ ಅನುಮಾನವಿಲ್ಲದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಕೇವಲ ಅಷ್ಟು ಮಾತ್ರವಲ್ಲದೆ ಹಲವಾರು ಸಮಯಗಳಿಂದ ಕಳಪೆ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಅವರು ಟಿ 20 ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ತಮ್ಮ ಅಸಲಿ ಫಾರ್ಮ್ ಗೆ ಮರಳಿ ಬಂದಿರುವುದು ತಂಡಕ್ಕೆ ಇನ್ನಷ್ಟು ಬೋನಸ್ ಆಗಿದೆ ಎಂದರೆ ತಪ್ಪಾಗಲಾರದು. ಇದೇ ಅಕ್ಟೋಬರ್ 6ಕ್ಕೆ 15 ಸದಸ್ಯರನ್ನು ಹೊಂದಿರುವ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಗೆ ರವಾನೆ ಆಗಲಿದೆ. ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದ್ದು ತಂಡ ನಿರೀಕ್ಷೆಗಳನ್ನು ಪೂರೈಸುವ ಭರವಸೆ ಇದೆ. ಟೀಮ್ ಇಂಡಿಯಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Comments are closed.