ಮನೆಯಲ್ಲಿ ಹೊಸ ಬಿರುಗಾಳಿ: ನೀವು ನನ್ನವು ಆ ದೃಷ್ಟಿಕೋನದಲ್ಲಿ ನೋಡಬೇಡಿ ಎಂದು ಪ್ರಶಾಂತ್ ಗೆ ಗಂಭೀರ ಮನವಿ ಮಾಡಿದ ಸಾನ್ಯಾ

ನಮಸ್ಕಾರ ಸ್ನೇಹಿತರೆ, ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗಳು ಕೆಲವರ ಮಧ್ಯೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅದರಲ್ಲೂ ಈಗ ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಅಯ್ಯರ್ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ಮಾತಿನ ಚಕಮಕಿ ಎನ್ನುವುದು ಒಂದು ಕಾರಣಕ್ಕಾಗಿ ಸಾಕಷ್ಟು ಬಾರಿ ನಡೆದಿದೆ ಇದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಎದುರು ಕೂಡ ಚರ್ಚಿತವಾಗಿರುವ ವಿಷಯವಾಗಿದೆ. ಬಿಗ್ ಬಾಸ್ ಮನೆಯ ಒಳಗೆ ಹೋಗುವಾಗ ಎಲ್ಲರ ಕೈಗೂ ಕೂಡ ಒಂದು ಬ್ಯಾಂಡ್ ನೀಡಿದ್ದರು. ಈ ಸಂದರ್ಭದಲ್ಲಿ ಸಾನಿಯಾ ಅಯ್ಯರ್ ಅವರ ಕೈಗೆ ಕಲಾವಿದ ಎನ್ನುವ ಬ್ಯಾಂಡ್ ಅನ್ನು ನೀಡಲಾಗಿತ್ತು.

ಅದನ್ನು ಯಾರಿಗೆ ನೀಡಲು ಇಷ್ಟಪಡುತ್ತೀರಾ ಎಂಬುದಾಗಿ ಕೇಳಿದಾಗ ಪ್ರಶಾಂತ್ ಸಂಬರ್ಗಿ ಅವರಿಗೆ ನೀಡಲು ಇಷ್ಟಪಡುತ್ತೇನೆ ಯಾಕೆಂದರೆ ಅವರು ಕುತಂತ್ರಿ ಬುದ್ಧಿ ಅವರು ಎಂಬುದಾಗಿ ನೇರ ನೇರವಾಗಿ ಸಾನಿಯಾ ಅಯ್ಯರ್ ಹೇಳಿದ್ದರು. ಇದಕ್ಕೆ ಸಾನಿಯಾ ಅಯ್ಯರ್ ಅವರನ್ನು ಕಿಚ್ಚ ಸುದೀಪ್ ರವರು ಕೂಡ ತರಾಟೆಗೆ ತೆಗೆದುಕೊಂಡು ಈ ರೀತಿಯ ಪದವನ್ನು ನೀವು ಉಪಯೋಗಿಸಬಾರದಾಗಿತ್ತು ಎಂಬುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಸಾನಿಯಾ ಅಯ್ಯರ್ ಅವರ ಬಳಿ ಪ್ರಶಾಂತ್ ಸಂಬರ್ಗಿ ಬಂದು ನೀವು ನನ್ನನ್ನು ಕುತಂತ್ರಿ ಎಂಬುದಾಗಿ ಕರೆದಿದ್ದೀರಾ ಎಂಬುದಾಗಿ ಕೇಳುತ್ತಾರೆ. ಇದಕ್ಕೆ ಉತ್ತರ ನೀಡುತ್ತಾ ಸಾನಿಯಾ ಅಯ್ಯರ್ ಇದರಿಂದಾಗಿ ನಿಮ್ಮ ಮನಸ್ಸಿಗೆ ಬೇಸರವಾಗಿದ್ದರೆ ಕ್ಷಮಿಸಿ ಆದರೆ ನನ್ನ ಮಾತನ್ನು ನಾನು ಖಂಡಿತ ಹಿಂಪಡೆಯುವುದಿಲ್ಲ ಎಂಬುದಾಗಿ ಹೇಳುತ್ತಾರೆ.

prashanth saanya | ಮನೆಯಲ್ಲಿ ಹೊಸ ಬಿರುಗಾಳಿ: ನೀವು ನನ್ನವು ಆ ದೃಷ್ಟಿಕೋನದಲ್ಲಿ ನೋಡಬೇಡಿ ಎಂದು ಪ್ರಶಾಂತ್ ಗೆ ಗಂಭೀರ ಮನವಿ ಮಾಡಿದ ಸಾನ್ಯಾ
ಮನೆಯಲ್ಲಿ ಹೊಸ ಬಿರುಗಾಳಿ: ನೀವು ನನ್ನವು ಆ ದೃಷ್ಟಿಕೋನದಲ್ಲಿ ನೋಡಬೇಡಿ ಎಂದು ಪ್ರಶಾಂತ್ ಗೆ ಗಂಭೀರ ಮನವಿ ಮಾಡಿದ ಸಾನ್ಯಾ 2

ಇದಕ್ಕೆ ಪ್ರತಿಕ್ರಿಸುತ್ತಾ ಪ್ರಶಾಂತ್ ಸಂಬರ್ಗಿ ಗಾಜು ಒಡೆದು ಹೋಗಿದೆ ಹಾಲು ಒಡೆದು ಹೋಗಿದೆ ಇನ್ನೂ ಅದನ್ನು ಸರಿ ಮಾಡುವುದಕ್ಕೆ ಸಾಧ್ಯ ಇಲ್ಲ ಎಂಬುದಾಗಿ ಹೇಳುತ್ತಾರೆ. ಇದಕ್ಕೆ ಅಸಹಣೆಯಿಂದ ಉತ್ತರ ನೀಡುತ್ತ ಸಾನಿಯಾ, ನಮ್ಮಿಬ್ಬರ ನಡುವೆ ಇದರ ಬಗ್ಗೆ ಇನ್ನು ಮುಂದೆ ಚರ್ಚೆ ಬೇಡ. ನನ್ನನ್ನು ಚಿಕ್ಕವಳು ಎನ್ನುವ ದೃಷ್ಟಿಕೋನದಲ್ಲಿ ನನ್ನನ್ನು ನೋಡಬೇಡಿ. ನಿಮ್ಮನ್ನು ಆ ದೃಷ್ಟಿ ಕೋನದಲ್ಲಿ ಕೂಡ ನಾನು ನೋಡುವುದಿಲ್ಲ ಎಂಬುದಾಗಿ ಸಾನಿಯಾ ಅವರು ಈ ಸಂವಹನವನ್ನು ಇಲ್ಲೇ ಮುಗಿಸುವ ಪ್ರಯತ್ನಕ್ಕೆ ಫುಲ್ ಸ್ಟಾಪ್ ಹಾಕುತ್ತಾರೆ. ಇವರಿಬ್ಬರ ನಡುವೆ ನಡೆದಿರುವ ಈ ವಿಚಾರದಲ್ಲಿ ಯಾರು ತಪ್ಪು ಮಾಡಿದ್ದಾರೆ ಯಾರದ್ದು ಸರಿ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.