ಒಂದೇ ವಾರಕ್ಕೆ ಹೊರ ಹೋಗಿದ್ದರೂ, ಐಶ್ವರ್ಯ ರವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಮೊದಲನೆಯ ವಾರವನ್ನು ಪೂರೈಸಿ ಎರಡನೇ ವಾರದತ್ತ ದಾಪುಗಾಲಿಟ್ಟಿದೆ. ಎರಡನೇ ವಾರಕ್ಕೆ ಬಿಗ್ ಬಾಸ್ ಮನೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳ ನಡುವೆ ಇನ್ನಷ್ಟು ಸ್ಪರ್ಧೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಮೊದಲನೇ ವಾರದಲ್ಲಿಯೇ ಐಶ್ವರ್ಯ ಪಿಸ್ಸೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಒಟ್ಟಾರೆಯಾಗಿ ಮೊದಲ ವಾರ ಮನೆಯಿಂದ ಹೊರ ಹೋಗುವುದಕ್ಕೆ 12 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಆದರೆ ಅದರಲ್ಲಿ ಮನೆಯಿಂದ ಹೊರ ಬಂದಿದ್ದು ಈಗ ಬೈಕ್ ರೇಸರ್ ಆಗಿರುವ ಐಶ್ವರ್ಯ ಪಿಸ್ಸೆ.

ಮನೆಯಲ್ಲಿರುವ ಬಹುತೇಕ ಎಲ್ಲರೂ ಕೂಡ ಮನೋರಂಜನೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಅಥವಾ ಈಗಾಗಲೇ ಕನ್ನಡ ಪ್ರೇಕ್ಷಕರಿಗೆ ತಿಳಿದಿರುವ ವ್ಯಕ್ತಿಗಳಾಗಿದ್ದಾರೆ. ಆದರೆ ಐಶ್ವರ್ಯ ಪಿಸ್ಸೆ ಅವರು ಬೈಕ್ ರೇಸರ್ ಆಗಿದ್ದ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅಷ್ಟೊಂದು ಹತ್ತಿರ ಆಗಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದಾಗಿದೆ. ಹೀಗಾಗಿ ಮೊದಲ ವಾರದಲ್ಲಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ವಾರಾಂತ್ಯದ ಸಂಚಿಕೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಐಶ್ವರ್ಯ ಪಿಸ್ಸೆ ಅವರಿಗೆ ಯಾಕೋ ನಿಮ್ಮ ಬೈಕ್ ನ್ಯೂಟ್ರಲ್ ನಲ್ಲಿ ಇದೆಯಲ್ಲ ಎಂಬುದಾಗಿ ಕೂಡ ಹೇಳಿದ್ದರು. ಆದರೆ ಈಗ ಐಶ್ವರ್ಯ ಪಿಸ್ಸೆ ಅವರ ಬೈಕ್ ಬಿಗ್ ಬಾಸ್ ಮನೆಯಿಂದ ಯು ಟರ್ನ್ ತೆಗೆದುಕೊಂಡಿದೆ.

aish pissay | ಒಂದೇ ವಾರಕ್ಕೆ ಹೊರ ಹೋಗಿದ್ದರೂ, ಐಶ್ವರ್ಯ ರವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ಒಂದೇ ವಾರಕ್ಕೆ ಹೊರ ಹೋಗಿದ್ದರೂ, ಐಶ್ವರ್ಯ ರವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?? 2

ಇನ್ನು ಮೊದಲ ವಾರದಲ್ಲಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಐಶ್ವರ್ಯ ಪಿಸ್ಸೆ, ಪಡೆದಿರುವ ಒಟ್ಟಾರೆ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ. ಮೊದಲ ವಾರದಲ್ಲಿ ಹೊರ ಬಂದಿದ್ದರು ಕೂಡ ಐಶ್ವರ್ಯ ಪಿಸ್ಸೆ ಬರೋಬ್ಬರಿ 1.30 ಲಕ್ಷ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯ ಪಿಸ್ಸೆ ಇದ್ದ ರೀತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಹಂಚಿಕೊಳ್ಳಿ ಹಾಗೂ ಸದ್ಯಕ್ಕೆ ಬಿಗ್ ಬಾಸ್ ನಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.