ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದು ಕಷ್ಟದಲ್ಲಿ ಇರುವಾಗಲೇ ಜೀವನ ಮುಗಿಸಿದ ಮೋಹನ್ ರವರ ಪತ್ನಿ ಈಗಲೂ ಏನು ಮಾಡುತ್ತಿದ್ದಾರೆ ಗೊತ್ತೇ?? ಜೀವನ ಅಂದ್ರೆ ಇಷ್ಟೇನಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೆ ನಮ್ಮ ಕನ್ನಡ ಚಿತ್ರರಂಗ ಹಿರಿಯ ಹಾಸ್ಯ ಕಲಾವಿದರಾಗಿರುವ ಮೋಹನ್ ಜುನೇಜ ಅವರನ್ನು ಹೃದಯದ ಸಮಸ್ಯೆಯಿಂದಾಗಿ ಕಳೆದುಕೊಂಡಿತ್ತು. ನಿಜಕ್ಕೂ ಕೂಡ ಮೋಹನ್ ಜುನೇಜ ರವರ ಮರಣ ಎನ್ನುವುದು ಕನ್ನಡ ಚಿತ್ರರಂಗಕ್ಕೆ ಅನಿರೀಕ್ಷಿತ ಆ’ಘಾತವನ್ನು ತಂದಿಟ್ಟಿತ್ತು. ಆದರೆ ಇವರ ಕೊನೆಯ ದರ್ಶನಕ್ಕಾಗಿ ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳು ಬರದೇ ಇರುವುದು ನಿಜಕ್ಕೂ ಕೂಡ ಎಲ್ಲರ ಮನಸ್ಸಿನಲ್ಲಿ ದುಃಖವನ್ನುಂಟು ಮಾಡಿತ್ತು. ಇಂದಿನ ಆರ್ಟಿಕಲ್ ನಲ್ಲಿ ಇವರ ಕುಟುಂಬದ ಕುರಿತಂತೆ ಕೆಲವೊಂದು ಗೊತ್ತಿಲ್ಲದೇ ಇರುವ ವಿಚಾರಗಳನ್ನು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿಗಷ್ಟೇ ನಮ್ಮನ್ನೆಲ್ಲ ಅಗಲಿರುವ ಮೋಹನ್ ಜುನೇಜ ರವರು ಇಂಡಸ್ಟ್ರಿಗೆ ಕಾಲಿಟ್ಟಿದ್ದು ಬರಹಗಾರರಾಗಿ. ಹೌದು ಗೆಳೆಯರೆ ಮೋಹನ್ ಜುನೇಜ ರವರು ಸಿನಿಮಾಗಳಿಗೆ ಸಂಭಾಷಣೆ ಹಾಗೂ ಧಾರವಾಹಿಗಳಿಗೆ ಕತೆ ಬರೆಯುವ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಇಷ್ಟೆಲ್ಲಾ ಕೊಡುಗೆ ನೀಡಿರುವ ಕಲಾವಿದನ ಅಂತಿಮದರ್ಶನಕ್ಕೆ ಕೂಡ ಯಾವುದೇ ಸೆಲೆಬ್ರಿಟಿಗಳು ಬರದೆ ಇರುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರವಾಗಿದೆ.

mohan juneja 6 | ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದು ಕಷ್ಟದಲ್ಲಿ ಇರುವಾಗಲೇ ಜೀವನ ಮುಗಿಸಿದ ಮೋಹನ್ ರವರ ಪತ್ನಿ ಈಗಲೂ ಏನು ಮಾಡುತ್ತಿದ್ದಾರೆ ಗೊತ್ತೇ?? ಜೀವನ ಅಂದ್ರೆ ಇಷ್ಟೇನಾ??
ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದು ಕಷ್ಟದಲ್ಲಿ ಇರುವಾಗಲೇ ಜೀವನ ಮುಗಿಸಿದ ಮೋಹನ್ ರವರ ಪತ್ನಿ ಈಗಲೂ ಏನು ಮಾಡುತ್ತಿದ್ದಾರೆ ಗೊತ್ತೇ?? ಜೀವನ ಅಂದ್ರೆ ಇಷ್ಟೇನಾ?? 3

ಅವರ ಜಾಗದಲ್ಲಿ ಬೇರೆ ಯಾವ ದೊಡ್ಡ ಸೆಲೆಬ್ರಿಟಿಗಳು ಮರಣವನ್ನು ಹೊಂದಿದ್ದರೂ ಕೂಡ ಸೆಲೆಬ್ರಿಟಿಗಳ ದಂಡೇ ಹರಿದು ಬರುತ್ತಿತ್ತು. ಆದರೆ ಮೋಹನ್ ಜುನೇಜ ಅವರ ಅಂತಿಮದರ್ಶನಕ್ಕೆ ಬಂದಿದ್ದು ಅವರ ಜೊತೆಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಕೆಲವು ಕಲಾವಿದರು ಮಾತ್ರ. ಇಷ್ಟೊಂದು ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಮೋಹನ್ ಜುನೇಜ ರವರಿಗೆ ಸಿಕ್ಕಂತಹ ಕೊನೆಯ ಗೌರವ ಇದೇನಾ ಎನ್ನುವುದಾಗಿ ಬೇಸರ ಕೂಡ ಮೂಡುತ್ತದೆ.

ಮೋಹನ್ ಜುನೇಜ ರವರು ಇತ್ತೀಚಿಗಿನ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಹಿಡಿದು ಬಹುತೇಕ ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಕೆಲವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ದಾಂಜಲಿ ಸಲ್ಲಿಸಿ ಸುಮ್ಮನಾದರೆ ಇನ್ನು ಕೆಲವರು ಹಾಗೇ ಸುಮ್ಮನಿದ್ದಾರೆ. ಕೇವಲ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಮರಣಹೊಂದಿದಾಗ ಮಾತ್ರ ಅವರಿಗೆ ಸಲ್ಲಬೇಕಾದಂತಹ ಗೌರವಗಳು ಸಿಗುತ್ತವೆ ಇಲ್ಲದಿದ್ದರೆ ಯಾರು ಕೂಡ ಕನ್ನಡದ ಉಳಿದ ಕಲಾವಿದರಿಗೆ ಗೌರವವನ್ನು ಸಲ್ಲಿಸುವುದಿಲ್ಲ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ.

ಕೇವಲ ಬಾಯಿ ಮಾತಿಗೆ ಮಾತ್ರ ಕನ್ನಡ ಚಿತ್ರರಂಗ ಒಂದು ಕುಟುಂಬ ಎಂದು ಹೇಳುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಕನ್ನಡದ ಕಲಾವಿದರ ಮರಣಹೊಂದಿದಾಗ ಅವರ ಕುಟುಂಬವು ಸಾಕಷ್ಟು ಕುಗ್ಗಿ ಹೋಗಿರುತ್ತದೆ ಈ ಸಂದರ್ಭದಲ್ಲಿ ಕುಟುಂಬವಾಗಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮರಣಹೊಂದಿದ ಸೆಲೆಬ್ರಿಟಿಯ ಮನೆಯವರಿಗೆ ಸಾಥ್ ನೀಡುವುದು ಅತ್ಯಗತ್ಯವಾಗಿರುತ್ತದೆ. ಒಂದುವೇಳೆ ಪುನೀತ್ ರಾಜಕುಮಾರ್ ಅವರು ಇದ್ದಿದ್ದರೆ ಖಂಡಿತವಾಗಿ ಮೋಹನ್ ಜುನೇಜ ರವರ ಅಂತಿಮ ದರ್ಶನವನ್ನು ಪಡೆಯುತ್ತಿದ್ದರು ಎಂಬುದನ್ನು ಹೇಳಬಹುದಾಗಿದೆ.

mohan juneja 3 | ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದು ಕಷ್ಟದಲ್ಲಿ ಇರುವಾಗಲೇ ಜೀವನ ಮುಗಿಸಿದ ಮೋಹನ್ ರವರ ಪತ್ನಿ ಈಗಲೂ ಏನು ಮಾಡುತ್ತಿದ್ದಾರೆ ಗೊತ್ತೇ?? ಜೀವನ ಅಂದ್ರೆ ಇಷ್ಟೇನಾ??
ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದು ಕಷ್ಟದಲ್ಲಿ ಇರುವಾಗಲೇ ಜೀವನ ಮುಗಿಸಿದ ಮೋಹನ್ ರವರ ಪತ್ನಿ ಈಗಲೂ ಏನು ಮಾಡುತ್ತಿದ್ದಾರೆ ಗೊತ್ತೇ?? ಜೀವನ ಅಂದ್ರೆ ಇಷ್ಟೇನಾ?? 4

ಪ್ರಾರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಚಿತ್ರಗಳ ಸಂಭಾಷಣೆ ಹಾಗೂ ಕಥೆಯನ್ನು ಬರೆಯುತ್ತಾ ತಮ್ಮ ಕರಿಯರ್ ನ್ನು ಪ್ರಾರಂಭಿಸಿದ್ದ ಮೋಹನ್ ಜುನೇಜ ರವರಿಗೆ ಮೊದಲಿಗೆ ಟೈಗರ್ ಪ್ರಭಾಕರ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಚೆಲ್ಲಾಟ ಸಿನಿಮಾದಲ್ಲಿ ನಟಿಸಲು ಆರಂಭಿಸಿದಾಗ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ. ಇದುವರೆಗೂ ಮೋಹನ್ ಜುನೇಜ ರವರು ಕನ್ನಡ ಚಿತ್ರರಂಗದ ಹಲವಾರು ಸ್ಟಾರ್ ನಟರೊಂದಿಗೆ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಜುನೇಜ ರವರು ತಮ್ಮ ದುಡಿಮೆಯಿಂದ ಕಷ್ಟಪಟ್ಟು ಒಂದು ಮನೆಯನ್ನು ಖರೀದಿಸಿ ಅದನ್ನು ತಮ್ಮ ಆಸ್ತಿಯೆಂದು ಕರೆದಿದ್ದರು.

ಇನ್ನು ಇಂದಿಗೂ ಕೂಡ ಮೋಹನ್ ಜುನೇಜ ರವರ ಪತ್ನಿ ರೇಷ್ಮೆ ಕುಚ್ಚು ಹಾಕುವುದು ಮತ್ತು ಪುಳಿಯೋಗರೆ ಗೊಜ್ಜು ಮಾಡಿ ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಮೋಹನ್ ಜುನೇಜ ರವರಿಗೆ ಇಬ್ಬರು ಮಕ್ಕಳು ಮೊದಲನೇ ಮಗ ಮೊದಲು ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದ ನಂತರ ಈಗ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡನೆಯ ಮಗ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದು ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಇಚ್ಚೆಯನ್ನು ಹೊಂದಿದ್ದರು ಆದರೆ ಕುಟುಂಬದ ನಿರ್ವಹಣೆ ಕೂಡ ಇಲ್ಲಿ ಪ್ರಮುಖವಾಗಿರುವ ಜವಾಬ್ದಾರಿಯಾಗಿದೆ. ಇನ್ನು ಬರವಣಿಗೆಯಲ್ಲಿ ತಮ್ಮನ್ನು ತಾವು ಸಾಕಷ್ಟು ತೊಡಗಿಸಿಕೊಳ್ಳುತ್ತಿದ್ದ ಮೋಹನ್ ಜುನೇಜ ರವರು ಮದ್ಯ ಸೇವನೆಯನ್ನು ಹೆಚ್ಚಾಗಿ ಮಾಡುತ್ತಿದ್ದರು.

ಅತಿಯಾದ ಮಧ್ಯಪಾನದಿಂದ ಆಗಿರದೇ ಹಾಗೂ ಲಿವರ್ ಸಂಪೂರ್ಣವಾಗಿ ಹಾನಿಗೆ ಒಳಗಾಗಿದ್ದು ಇದೇ ಕಾರಣದಿಂದಾಗಿ ಇತ್ತೀಚೆಗಷ್ಟೇ ಅವರು ಮದ್ಯವನ್ನು ಬಿಟ್ಟಿದ್ದರು. ಆದರೆ ಇದು ತುಂಬಾನೇ ತಡವಾಗಿತ್ತು ಎಂದರೆ ತಪ್ಪಾಗಲಾರದು ಹೀಗಾಗಿ ಮೋಹನ್ ಜುನೇಜ ರವರು ತಮ್ಮ ಮರಣಕ್ಕೆ ಒಂದು ಲೆಕ್ಕದಲ್ಲಿ ತಾವೇ ಕಾರಣರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ನಿಮ್ಮೆಲ್ಲರ ಜೀವನವನ್ನು ಕಾಪಾಡಿಕೊಳ್ಳಲು ನೀವು ಇಂತಹ ಮದ್ಯವ್ಯಸನಿ ಆಗದೆ ನಿಮ್ಮ ಜೀವನವನ್ನು ಶಿಸ್ತುಬದ್ಧವಾಗಿ ಇರಿಸಿಕೊಳ್ಳಿ ಎಂಬುದಾಗಿ ಹೇಳಿಕೊಳ್ಳುತ್ತದೆ. ಮೋಹನ್ ಜುನೇಜ ರವರು ನೋಡಲು ಹೊರಟಂತೆ ಕಂಡರು ಸಂಪೂರ್ಣವಾಗಿ ಸಹೃದಯ ರಾಗಿದ್ದರು. ಒಬ್ಬ ಅತ್ಯುತ್ತಮ ವ್ಯಕ್ತಿತ್ವವುಳ್ಳ ಮನುಷ್ಯ ಆಗಿದ್ದರು. ಮೋಹನ್ ಜುನೇಜ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.