ಬಿಗ್ ನ್ಯೂಸ್: ಮುನಿರತ್ನ ರವರಿಗೆ ಸಚಿವ ಸ್ಥಾನ ಯಾಕೆ ಸಿಕ್ಕಿಲ್ಲ ಗೊತ್ತಾ ? ಕೊನೆಗೂ ಕಾರಣ ಬಹಿರಂಗ.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಬಿಜೆಪಿ ಪಕ್ಷದಲ್ಲಿ ಹಲವಾರು ನಾಯಕರಿಂದ ಭಿನ್ನಮತೀಯ ಮಾತುಗಳು ಕೇಳಿಬರುತ್ತಿವೆ. ಮೊದಲಿನಿಂದಲೂ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಲವಾರು ನಾಯಕರು ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವ ಇದೀಗ ಬಹಿರಂಗವಾಗಿದೆ.

ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದಿರುವ ಬಹುತೇಕ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿದ್ದು ಮುನಿರತ್ನ ಹಾಗೂ ವಿಶ್ವನಾಥ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ನಾಯಕರು ಸಚಿವ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಕಡೆ ವಿಶ್ವನಾಥ್ ರವರು ಬಿಜೆಪಿ ಸಿದ್ಧಾಂತಗಳಿಗೆ ಮೊದಲಿನಿಂದಲೂ ವಿರುದ್ಧವಾಗಿ ನಡೆದುಕೊಂಡು ಬಂದಿರುವುದು ಹಾಗೂ ಚುನಾವಣೆಯಲ್ಲಿ ಸೋಲನ್ನು ಕಂಡಿರುವ ಕಾರಣ ಇವರಿಗೆ ಸಚಿವ ಸ್ಥಾನ ನೀಡುವ ಕೆಲಸವನ್ನು ತಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬಂದು ಬಿಜೆಪಿ ಪಕ್ಷದ ಸಿದ್ಧಾಂತಗಳ ಹಾದಿಯಲ್ಲಿ ನಡೆಯುತ್ತಿರುವ ಮುನಿರತ್ನ ರವರಿಗೆ ಯಾಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಪ್ರಶ್ನೆ ಕೇಳಿ ಬಂದಿತ್ತು.

ಚುನಾವಣೆ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪನವರು ಬಹಿರಂಗವಾಗಿ ಪ್ರಚಾರ ಮಾಡುವಾಗ ಮುನಿರತ್ನ ಅವರಿಗೆ ಸಚಿವ ಸ್ಥಾನಕ್ಕಾಗಿ ಎಂದು ಹೇಳಿದ್ದರು, ಇಷ್ಟೆಲ್ಲ ನಡೆದರೂ ಕೂಡ ಯಾಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಪ್ರಶ್ನೆಗಳು ಮಾಡುತ್ತಿರುವ ಸಂದರ್ಭದಲ್ಲಿ ಇದೀಗ ಬಿಜೆಪಿ ಪಕ್ಷದ ಹಿರಿಯ ನಾಯಕ ಉಮೇಶ್ ಕ’ತ್ತಿ ಅವರು ಮಾತನಾಡಿ ಎಲ್ಲರೂ ಸಚಿವರ ಸಚಿವರಾಗಲು ಸಾಧ್ಯವಿಲ್ಲ ನಾನು ಕೂಡ ಒಂದುವರೆ ವರ್ಷದಿಂದ ಸಚಿವ ಸ್ಥಾನಕ್ಕಾಗಿ ಕಾದಿದ್ದೇನೆ. ಇನ್ನು ಮುನಿರತ್ನ ರವರ ಕುರಿತು ಮಾತನಾಡುವುದಾದರೆ ಮುನಿರತ್ನ ರವರ ವಿರುದ್ಧ ನ್ಯಾ’ಯಾಲಯದಲ್ಲಿ ಕೆಲವೊಂದು ಪ್ರಕರಣಗಳು ಇವೆ, ಈ ಪ್ರಕರಣಗಳಲ್ಲಿ ಮುನಿರತ್ನ ರವರ ಪರ ತೀರ್ಪು ಬಂದಲ್ಲಿ ಖಂಡಿತ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗಲಿದೆ, ನ್ಯಾಯಾಲಯದಲ್ಲಿರುವ ಪ್ರಕರಣಗಳು ಮುನಿರತ್ನ ರವರ ಸಚಿವ ಸ್ಥಾನದ ಕುರ್ಚಿಗೆ ಬ್ರೇಕ್ ಹಾಕಿವೆ ಆದರೆ ಕಂಡಿತ ಅವರು ಮುಂದೊಂದು ದಿನ ಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ

Comments are closed.