ಕೊನೆ ಕ್ಷಣದಲ್ಲಿ ಮಮತಾಗೆ ಬಿಗ್ ಶಾಕ್ ನೀಡಿದ ಒವೈಸಿ! ಬಿಜೆಪಿ ಬಹುಮತವಲ್ಲ, ಐತಿಹಾಸಿಕ ಗೆಲುವು ಸಾಧಿಸುವುದು ಖಚಿತ. ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಮತಾ ಬ್ಯಾನರ್ಜಿ ಭದ್ರಕೋಟೆ ಎನಿಸಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಕೇಸರಿ ಕಲರವ ಆರಂಭವಾಗಿದೆ. ಹಿಂದೆಂದೂ ಕಾಣದಂತಹ ಮೋದಿ ಪರವಾದ ಅಲೆ ಹಾಗೂ ಬಿಜೆಪಿ ಪಕ್ಷದ ಪರವಾದ ಒಲವು ಜನರಲ್ಲಿ ಕಾಣಿಸುತ್ತಿದೆ. ಅದೇ ಕಾರಣಕ್ಕಾಗಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಜನತೆ ನರೇಂದ್ರ ಮೋದಿ ರವರಿಗೆ 16 ಲೋಕಸಭಾ ಕ್ಷೇತ್ರಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಐತಿಹಾಸಿಕ ಜಯ ದಾಖಲಿಸುವಂತೆ ಮಾಡಿದ್ದರು.

ಇನ್ನು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ವಿಧಾನಸಭಾ ಚುನಾವಣೆ ಕೂಡ ನಡೆಯಲಿದೆ ಬಿಜೆಪಿ ಪಕ್ಷವು ಗೆಲ್ಲುವ ಫೆವರೇಟ್ ಎನಿಸಿದೆ. ಮಮತಾ ಬ್ಯಾನರ್ಜಿ ರವರ ಸರ್ವಾಧಿಕಾರಕ್ಕೆ ಪಶ್ಚಿಮ ಬಂಗಾಳದ ಜನತೆ ಬೇಸತ್ತಿದ್ದಾರೆ ಎಂಬ ಬಲವಾದ ಮಾತುಗಳು ಕೇಳಿ ಬರುತ್ತದೆ. ಆದರೆ ಮತ್ತೊಂದೆಡೆ ಬಿಜೆಪಿ ಪಕ್ಷ ಬಹುಮತ ಸಾಧಿಸುವ ಕನಸು ಬಿಡಲಿ, ಎರಡಂಕಿಯನ್ನು ಕೂಡ ಬಿಜೆಪಿ ಪಕ್ಷ ದಾಟುವುದಿಲ್ಲ ಎಂದು ಭಾಷಣಗಳನ್ನು ಮಾಡುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರ ಪರ ರಾಜಕೀಯ ತಂತ್ರವನ್ನು ಹೆಣೆಯುತ್ತಿರುವ ಪ್ರಶಾಂತ್ ಕಿಶೋರ್ ಅವರು ಕೂಡ ಬಿಜೆಪಿ ಪಕ್ಷಕ್ಕೆ ಪಕ್ಷಿಮ ಬಂಗಾಳದಲ್ಲಿ ನೆಲೆ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.

ಆದರೆ ಮತ್ತೊಂದೆಡೆ ಬಿಜೆಪಿ ಪಕ್ಷವು ಹಾಗೂ ಜನರ ಪರವಾದ ಓಲವನ್ನು ನೋಡಿದರೆ ಬಿಜೆಪಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ಬಹುಮತ ಸಾಧಿಸುವುದು ಬಹುತೇಕ ಖಚಿತ ವೆನಿಸಿದೆ. ಆದರೆ ಇದೀಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೇ ಬಿಜೆಪಿ ಪಕ್ಷ ಕೇವಲ ಬಹುಮತ ಅಷ್ಟೇ ಅಲ್ಲ ಐತಿಹಾಸಿಕ ಸಂಖ್ಯೆಗಳಲ್ಲಿ ಗೆಲುವನ್ನು ದಾಖಲಿಸಿ ಮಮತಾ ರವರ ಭದ್ರಕೋಟೆ ಎನಿಸಿಕೊಂಡಿರುವ ಪಶ್ಚಿಮ ಬಂಗಾಳದ ಒಮ್ಮೆಲೆ ಛಿದ್ರ ಮಾಡಲಿದೆ ಎಂಬಂತೆ ಭಾಸವಾಗುತ್ತಿದೆ ಇದಕ್ಕೆಲ್ಲಾ ಕಾರಣವೇನೆಂದರೆ ಓವೈಸಿ ರವರ ನಡೆ, ಹೌದು ಓವೈಸಿ ರವರು ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ತೊಡೆತಟ್ಟಿತ್ತಿರುವ ಸಂದರ್ಭದಲ್ಲಿ ಅದೇಗೆ ಅವರ ನಡೆ ಬಿಜೆಪಿ ಪಕ್ಷಕ್ಕೆ ವರದಾನವಾಗಲಿದೆ ಎಂಬುದನ್ನು ಆಲೋಚನೆ ಮಾಡುತ್ತಿದ್ದೀರಾ ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದಲ್ಲಿ ಹಲವಾರು ವರ್ಷಗಳಿಂದ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿರುವ ಮಮತಾ ಬ್ಯಾನರ್ಜಿ ಅವರು ತಮ್ಮ ಮತಬ್ಯಾಂಕ್ ಆದ ಮುಸ್ಲಿಂ ಸಮುದಾಯ ಹಾಗೂ ರೋಹಿಂಗ್ಯಾ ಜನಾಂಗದವರನ್ನು ಹೆಚ್ಚು ನಂಬಿಕೊಂಡಿದ್ದಾರೆ. ಖಂಡಿತ ಈ ಜನರು ಮಮತಾ ಬ್ಯಾನರ್ಜಿ ಅವರ ಕೈ ಹಿಡಿದ್ದಲ್ಲಿ ಈ ಜನರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಸಾಧ್ಯವೇ ಇಲ್ಲ, ಇನ್ನುಳಿದಂತೆ ನಗರಪ್ರದೇಶಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಬಹುದು ಆದರೆ ಮುಸ್ಲಿಂ ಸಮುದಾಯ ಹಾಗೂ ರೋಹಿಂಗ್ಯಾ ಜನರು ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಅಸಾಧ್ಯವೇ ಸರಿ.

ಹೀಗಿರುವಾಗ ಮಮತಾ ಬ್ಯಾನರ್ಜಿಯವರು ರೋಹಿಂಗ್ಯಾ ಜನಾಂಗದವರನ್ನು ಹಾಗೂ ಮುಸ್ಲಿಂ ಸಮುದಾಯವನ್ನು ಬಲವಾಗಿ ನಂಬಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಅಲೆ ಪಶ್ಚಿಮ ಬಂಗಾಳದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಕಾರಣ ಪ್ರತಿಯೊಂದು ಮತಗಳು ಮುಖ್ಯವಾಗುತ್ತದೆ ಎಂಬುದು ಮಮತಾ ಬ್ಯಾನರ್ಜಿ ಅವರಿಗೆ ಚೆನ್ನಾಗಿ ತಿಳಿದಿದೆ. ಹೀಗೆ ಈ ಎರಡು ಸಮುದಾಯದ ಮತಗಳನ್ನು ನಂಬಿಕೊಂಡಿರುವ ಮಮತಾ ಬ್ಯಾನರ್ಜಿ ಅವರು ಬಹಳ ಆತ್ಮವಿಶ್ವಾಸದಿಂದ ತನಗೆ ಮತ ಬೀಳುತ್ತದೆ ಎಂಬ ಭರವಸೆಯಲ್ಲಿದ್ದಾರೆ.

ಆದರೆ ಇಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವನ್ನು ಹಾಗೂ ರೋಹಿಂಗ್ಯಾ ಸಮುದಾಯದ ಮತಗಳನ್ನು ಬಹಳ ಸುಲಭವಾಗಿ ವಿಭಜನೆ ಮಾಡುವಂತಹ ಕೆಲಸವನ್ನು ಓವೈಸಿ ಮಾಡಲಿದ್ದಾರೆ. ಹೌದು ಸ್ನೇಹಿತರೆ ಇದೀಗ ಮುಸ್ಲಿಂ ಹಾಗೂ ರೋಹಿಂಗ್ಯಾ ಜನರ ಪ್ರಾಬಲ್ಯವಿರುವ ಎಲ್ಲಾ ಕ್ಷೇತ್ರಗಳಲ್ಲಿ ಓವೈಸಿ ರವರು ಇತರ ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೆ ತಮ್ಮ ಸ್ಪರ್ಧಿಗಳು ಚುನಾವಣಾ ಕಣದಲ್ಲಿ ಇರಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಪಕ್ಷದ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಒಟ್ಟಾಗಬೇಕು ಎಂದು ಕರೆ ನಡೆದ ಮಮತಾ ಬ್ಯಾನರ್ಜಿ ರವರ ಮನವಿಗೆ ಓವೈಸಿ ರವರು ಸ್ಪಂದಿಸದೆ ತಾವು ಪ್ರತ್ಯೇಕ ಸ್ಪರ್ಧೆ ಮಾಡುವುದಾಗಿ ಖಚಿತಪಡಿಸಿದ್ದಾರೆ. ಖಂಡಿತವಾಗಲೂ ಇದು ಬಿಜೆಪಿ ಪಕ್ಷಕ್ಕೆ ಒಂದು ವರದಾನವಾಗಲಿದೆ, ಮತಗಳು ವಿಭಜನೆಯ ದಲ್ಲಿ ಬಿಜೆಪಿ ಪಕ್ಷ ಬಹಳ ಬಹಳ ಸುಲಭವಾಗಿ ಬಹುಮತ ಸಾಧಿಸುವುದು ಅಲ್ಲ ಬದಲಾಗಿ ಐತಿಹಾಸಿಕ ಸಂಖ್ಯೆಗಳಲ್ಲಿ ಗೆಲುವು ದಾಖಲಿಸುವುದು ಬಹುತೇಕ ಖಚಿತವಾಗಿದೆ.

Comments are closed.