ಅದ್ದೂರಿಯಾಗಿ ನಡೆಯಿತು ಕಿರುತೆರೆಯ ಕಲಾವಿದರಾದ ಅಮೃತ ಹಾಗೂ ರಾಘವೇಂದ್ರರವರ ಮಗಳ ನಾಮಕರಣ; ಮಗಳ ಹೆಸರೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳಂತೆ ಕಿರುತೆರೆ ಕ್ಷೇತ್ರದ ಧಾರಾವಾಹಿಯ ಸೆಲೆಬ್ರಿಟಿಗಳು ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿ ಅವರಷ್ಟೇ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಇದೇ ಕಿರುತೆರೆ ಕ್ಷೇತ್ರದ ಎಲ್ಲರ ನೆಚ್ಚಿನ ಜೋಡಿಹ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ದಾರವಾಹಿ ಕ್ಷೇತ್ರದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಶಾಮೀಲಾಗಿರುವ ಅಮೃತ ಹಾಗೂ ರಾಘವೇಂದ್ರರವರ ಕುರಿತಂತೆ‌. ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಕೂಡ ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ.

ಇದಕ್ಕೆ ಕಾರಣವಾಗಿರುವುದು ಇವರಿಬ್ಬರು ಒಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಇತ್ತೀಚಿಗಷ್ಟೇ ಈ ಕುರಿತಂತೆ ಇವರಿಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಣೆ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದರು. ಇತ್ತೀಚಿಗಷ್ಟೇ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಕೂಡ ಅದ್ದೂರಿಯಾಗಿ ನಡೆಸಿದ್ದಾರೆ. ನಾಮಕರಣ ಕಾರ್ಯಕ್ರಮದ ವಿಡಿಯೋವನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನಾಮಕರಣ ಕಾರ್ಯಕ್ರಮದಲ್ಲಿ ಅಪ್ಪು ಅವರನ್ನು ಕೂಡ ನೇಮಿಸಿಕೊಳ್ಳಲಾಗಿದೆ ಅವರ ಸಿನಿಮಾದ ಹಾಡನ್ನು ಕೂಡ ಈ ಸಂಭ್ರಮಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ.

amrutha | ಅದ್ದೂರಿಯಾಗಿ ನಡೆಯಿತು ಕಿರುತೆರೆಯ ಕಲಾವಿದರಾದ ಅಮೃತ ಹಾಗೂ ರಾಘವೇಂದ್ರರವರ ಮಗಳ ನಾಮಕರಣ; ಮಗಳ ಹೆಸರೇನು ಗೊತ್ತಾ??
ಅದ್ದೂರಿಯಾಗಿ ನಡೆಯಿತು ಕಿರುತೆರೆಯ ಕಲಾವಿದರಾದ ಅಮೃತ ಹಾಗೂ ರಾಘವೇಂದ್ರರವರ ಮಗಳ ನಾಮಕರಣ; ಮಗಳ ಹೆಸರೇನು ಗೊತ್ತಾ?? 2

ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿ ಮೂಲಕ ಇಬ್ಬರೂ ಒಟ್ಟಿಗೆ ನಾಯಕ ಹಾಗೂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ 2019 ರಲ್ಲಿ ನಿಜ ಜೀವನದಲ್ಲಿ ಕೂಡ ಕಪಲ್ ಗಳಾಗಿ ಒಂದಾಗುತ್ತಾರೆ. ಇನ್ನು ಹೆಣ್ಣು ಮಗುವಿಗೆ ನಾಮಕರಣ ಕಾರ್ಯಕ್ರಮದಲ್ಲಿ ದೃತಿ ಎಂದು ಹೆಸರಿಡಲಾಗಿದೆ. ಇನ್ನು ಹೆಣ್ಣು ಮಗುವಿನ ಜನನ ಆದಾಗಿನಿಂದಲೂ ತಾಯಿ ಅಮೃತ ಧಾರವಾಹಿಯಿಂದ ವಿರಾಮ ಪಡೆದು ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ ಎಂದು ಹೇಳಬಹುದಾಗಿದೆ. ಇವರ ಜೀವನದಲ್ಲಿ ಸದಾಕಾಲ ಸುಖ ಶಾಂತಿ ನೆಲೆಸಲಿ ಎಂದು ಹಾರೈಸೋಣ. ಪತಿ ರಾಘವೇಂದ್ರರವರು ಈಗಲೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಜೋಡಿಗೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.