ಸಾಮಾನ್ಯ ಬ್ರೇಕ್ ಫಾಸ್ಟ್ ಬೋರ್ ಆಯ್ತಾ?? ಹಾಗಿದ್ದರೆ ಕೇರಳ ಶೈಲಿಯ ಪುಟ್ಟು ಟ್ರೈ ಮಾಡಿ, ಎಲ್ಲರೂ ಇಷ್ಟ ಪಟ್ಟು ತಿಂತಾರೆ.

ನಮಸ್ಕಾರ ಸ್ನೇಹಿತರೇ ಬೆಳಗಿನ ತಿಂಡಿಗೆ ದಿನವೂ ಹೊಸ ಹೊಸತನ್ನು ಮಾಡಿದ್ರೆ ತಿನ್ನೋರಿಗೂ ಖುಷಿ ಮಾಡೋರಿಗೂ ಬದಲಾವಣೆ ಇರುತ್ತೆ. ಅದರಲ್ಲೂ ನಮ್ಮ ನೆರೆ ರಾಜ್ಯಗಳಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಮಾಡುತ್ತಾರಲ್ಲ, ಏನ್ ರುಚಿ ಅಂತಿರಾ.. ಅವುಗಳಲ್ಲಿ ಈ ಪುಟ್ಟು ಕೂಡ ಒಂದು ಬನ್ನಿ ಹೇಗೆ ಮಾಡೋದು ನೋಡೋಣ.

ಪುಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು: 1/2 ಕೆ.ಜಿ ಅಕ್ಕಿ, 1/2 ತೆಂಗಿನ ಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ನೀರು, ಸಕ್ಕರೆ. ಪುಟ್ಟು ಮಾಡುವ ವಿಧಾನ: ಮೊದಲು ಅಕ್ಕಿಯನ್ನು ತೊಳೆದು 4 ಗಂಟೆ ನೀರಿನಲ್ಲಿ ನೆನಸಿ, ನೆನೆಸಿದ ಅಕ್ಕಿಯಲ್ಲಿ ನೀರನ್ನು ಚೆನ್ನಾಗಿ ಆರಿಸಿ ಅಕ್ಕಿಯನ್ನು ಪುಡಿ ಮಾಡಿಕೊಳ್ಳಿ. ಹೆಚ್ಚು ನುಣ್ಣಗೆ ಆಗಬಾರದು. ತರಿತರಿಯಾಗಿರಲಿ.

kerala puttu | ಸಾಮಾನ್ಯ ಬ್ರೇಕ್ ಫಾಸ್ಟ್ ಬೋರ್ ಆಯ್ತಾ?? ಹಾಗಿದ್ದರೆ ಕೇರಳ ಶೈಲಿಯ ಪುಟ್ಟು ಟ್ರೈ ಮಾಡಿ, ಎಲ್ಲರೂ ಇಷ್ಟ ಪಟ್ಟು ತಿಂತಾರೆ.
ಸಾಮಾನ್ಯ ಬ್ರೇಕ್ ಫಾಸ್ಟ್ ಬೋರ್ ಆಯ್ತಾ?? ಹಾಗಿದ್ದರೆ ಕೇರಳ ಶೈಲಿಯ ಪುಟ್ಟು ಟ್ರೈ ಮಾಡಿ, ಎಲ್ಲರೂ ಇಷ್ಟ ಪಟ್ಟು ತಿಂತಾರೆ. 2

ಈಗ ಪುಡಿ ಮಾಡಿಕೊಂಡ ಅಕ್ಕಿ ಹಿಟ್ಟನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅಕ್ಕಿ ಪುಡಿಯನ್ನು ಬಿಸಿ ಮಾಡುವಾಗ ಕೈಬಿಡದೆ ಹುರಿಯುತ್ತಾ ಇರಬೇಕು. ನಂತರ ಅಕ್ಕಿ ಹಿಟ್ಟನ್ನು ಆರಲು ಬಿಡಿ. ಈಗ ಹಿಟ್ಟಿಗೆ ಸ್ವಲ್ಪ ತುರಿದ ತೆಂಗಿನ ಕಾಯಿ ಹಾಕಿ. ಕಲಸುತ್ತಾ ಬನ್ನಿ ಪುಟ್ಟು ಮಾಡಲು ಒಂದು ಪಾತ್ರೆ ಸಿಗುತ್ತದೆ. ಅದರ ತಳದಲ್ಲಿ ನೀರು ಹಾಕಿ ಕುದಿಯಲು ಇಡಿ. ಆ ಪಾತ್ರೆಯಲ್ಲಿ ಮೇಲ್ಭಾಗದಲ್ಲಿ ಉದ್ದಕ್ಕಿರುವ ಒಂದು ಕೊಳವೆ ಇರುತ್ತದೆ.

ಈಗ ಆ ಕೊಳವೆಗೆ ತಯಾರಾಗಿರುವ ಮಿಶ್ರಣ ಹಾಗೂ ಸ್ವಲ್ಪ ತೆಂಗಿನ ತುರಿಯನ್ನು ಹಾಕಿ, ಮತ್ತೆ 1/4 ಭಾಗ ಅಕ್ಕಿ ಹಿಟ್ಟು ಸ್ವಲ್ಪ ತೆಂಗಿನ ತುರಿ ಹೀಗೆ ಹಾಕಿ ಆ ಕೊಳವೆ ಆಕಾರದ ಪಾತ್ರೆಯನ್ನು ತುಂಬಿಸಿ. ಅದರ ಮೇಲ್ಭಾಗದಲ್ಲಿ ತುರಿದ ತೆಂಗಿನ ಕಾಯಿ ಮತ್ತು ಸಕ್ಕರೆ ಹಾಕಿ ಅದರ ಮುಚ್ಚಳ ಹಾಕಿ ಬೇಯಿಸಿಕೊಳ್ಳಿ. ಹತ್ತು ನಿಮಿಷ ಆವಿಯಲ್ಲಿ ಬೇಯಲಿ. ಹಬೆ ಆಚೆ ಬಂದಾಗ ಅದು ಬೆಂದಿದೆ ಎಂದು ಅರ್ಥ. ಹೀಗೆ ಮಾಡಿದರೆ ಕೇರಳ ಪುಟ್ಟು ರೆಡಿ. ಕಡಲೆ ಕಾಳಿನ ಸಾರಿನ ಜೊತೆ ಇದನ್ನು ಸವಿಯಬಹುದು.

Comments are closed.