ಬಿಗ್ ನ್ಯೂಸ್: ಬೆಂಗಳೂರಿನ ನಿಮಾನ್ಸ್ ನಲ್ಲಿ ಅಧಿಕೃತ, ವಿವಿಧ ಉದ್ದೇಗಳಿಗೆ ಅರ್ಜಿ ಆಹ್ವಾನ. ಅರ್ಹತೆಯೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (ನಿಮ್ಹಾನ್ಸ್) ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಪದವಿ ಮುಗಿರುವವರಿಗೆ ಈ ಹುದ್ದೆಯನ್ನು ನೀಡಲಾಗುತ್ತದೆ. ನೀವು ಈ ಹುದ್ದೆಯಲ್ಲಿ ಆಸಕ್ತಿ ಹೊಂದಿದ್ದು ಅಗತ್ಯ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 31ಕ್ಕೆ ಆರಂಭವಾಗಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

nimhans jobs | ಬಿಗ್ ನ್ಯೂಸ್: ಬೆಂಗಳೂರಿನ ನಿಮಾನ್ಸ್ ನಲ್ಲಿ ಅಧಿಕೃತ, ವಿವಿಧ ಉದ್ದೇಗಳಿಗೆ ಅರ್ಜಿ ಆಹ್ವಾನ. ಅರ್ಹತೆಯೇನು ಗೊತ್ತೇ?
ಬಿಗ್ ನ್ಯೂಸ್: ಬೆಂಗಳೂರಿನ ನಿಮಾನ್ಸ್ ನಲ್ಲಿ ಅಧಿಕೃತ, ವಿವಿಧ ಉದ್ದೇಗಳಿಗೆ ಅರ್ಜಿ ಆಹ್ವಾನ. ಅರ್ಹತೆಯೇನು ಗೊತ್ತೇ? 2

ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ಆಫೀಸ್ ಅಡ್ಮಿನಿಸ್ಟ್ರೇಟರ್ ಒಂದು ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 31ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 8.

ಇನ್ನು ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ ಮುಗಿಸಿರಬೇಕು. ಅಭ್ಯರ್ಥಿಗೆ 35 ವರ್ಷ ವಯಸ್ಸು ಮೀರಬಾರದು. ಅಭ್ಯರ್ಥಿಗಳು ಆಫೀಸ್ ಕಮ್ಯುನಿಕೇಷನ್, ಬೇಸಿಕ್ ಅಕೌಂಟಿಂಗ್, ಟ್ಯಾಲಿ, ಎಂಎಸ್​ ಎಕ್ಸೆಲ್ ಮತ್ತು ಎಂಎಸ್ ಆಕ್ಸೆಸ್​ನಲ್ಲಿ ಡಾಟಾ ಎಂಟ್ರಿ ಮಾಡುವುದನ್ನು ಕಲಿತಿರಬೇಕು. ಅಲ್ಲದೆ ಅಕೌಂಟ್ಸ್​ ಮತ್ತು ಆಫೀಸ್ ಅಡ್ಮಿನಿಸ್ಟ್ರೇಷನ್​​ನಲ್ಲಿ ಕನಿಷ್ಠ 6 ತಿಂಗಳ ಕೆಲಸದ ಅನುಭವ ಇರಬೇಕು. ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 25 ಸಾವಿರ ಸಂಬಳ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ nimhans.ac.in ಗೆ ಭೇಟಿ ನೀಡಿ.

Comments are closed.