ಉತ್ತಮ ಆಟವಾಡಿದ್ದು ಒಂದು ನಾಲ್ಕು ಪಂದ್ಯದಲ್ಲಿ, ಆದರೆ ಬಿಸಿಸಿಐ ಮೇಲೆ ಉರಿದು ಬಿದ್ದ KKR ಆಟಗಾರ. ಯಾರು ಮತ್ತೆ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ನಡೆಯುವ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನಲ್ಲಿ ಇದುವರೆಗೂ ಅತ್ಯಂತ ಉತ್ತಮವಾಗಿ ಪ್ರದರ್ಶನ ನೀಡಿರುವ ಹಲವಾರು ಯುವ ಆಟಗಾರರು ಈಗಾಗಲೇ ಬಿಸಿಸಿಐ ಮೂಲಕ ಆಯ್ಕೆಯಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ತಮ್ಮ ಕರಿಯರ್ ಅನ್ನು ಸೆಟ್ ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗಲ್ಲ. ಇತ್ತೀಚಿಗೆ ನೀವು ಹಲವಾರು ಭಾರತೀಯ ಕ್ರಿಕೆಟಗರನ್ನು ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನವರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿಪಡಿಸಿಯೇ ಭಾರತ ತಂಡಕ್ಕೆ ಆಯ್ಕೆಯಾದವರು.

ಆದರೆ ಎರಡು ಬಾರಿ ಚಾಂಪಿಯನ್ ತಂಡವಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಈ ಒಬ್ಬ ಆಟಗಾರನನ್ನು ಮಾತ್ರ ಬಿಸಿಸಿಐ ಆಯ್ಕೆ ಮಾಡುತ್ತಿಲ್ಲ ಎನ್ನುವುದಾಗಿ ಅವರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ರಣಜಿಯಲ್ಲಿ ದೆಹಲಿ ಪರ ಆಟವಾಡುವ ಹಾಗೂ ಐಪಿಎಲ್ ನಲ್ಲಿ ಕೊಲ್ಕತ್ತಾ ತಂಡದ ಪರವಾಗಿ ಆಟವಾಡುವ ನಿತೀಶ್ ರಾಣ ರವರು ಈ ಸ್ಟೇಟ್ಮೆಂಟ್ ಅನ್ನು ನೀಡಿದ್ದಾರೆ. ಒಂದು ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದಾಗ ಶಿಖರ ಧವನ್ ನಾಯಕತ್ವದಲ್ಲಿ ಇನ್ನೊಂದು ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ಸರಣಿಯನ್ನು ಆಡುತ್ತಿತ್ತು ಈ ಸಂದರ್ಭದಲ್ಲಿ ನಿತೀಶ್ ರಾಣ ಕೂಡ ತಂಡದಲ್ಲಿದ್ದರು. ನಿತೀಶ್ ರಾಣ ರವರು ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಒಂದು ಏಕದಿನ ಹಾಗೂ ಎರಡು ಟಿ 20 ಪಂದ್ಯಗಳನ್ನು ಆಡಿದ್ದಾರೆ.

bcci kkr | ಉತ್ತಮ ಆಟವಾಡಿದ್ದು ಒಂದು ನಾಲ್ಕು ಪಂದ್ಯದಲ್ಲಿ, ಆದರೆ ಬಿಸಿಸಿಐ ಮೇಲೆ ಉರಿದು ಬಿದ್ದ KKR ಆಟಗಾರ. ಯಾರು ಮತ್ತೆ ಯಾಕೆ ಗೊತ್ತೇ??
ಉತ್ತಮ ಆಟವಾಡಿದ್ದು ಒಂದು ನಾಲ್ಕು ಪಂದ್ಯದಲ್ಲಿ, ಆದರೆ ಬಿಸಿಸಿಐ ಮೇಲೆ ಉರಿದು ಬಿದ್ದ KKR ಆಟಗಾರ. ಯಾರು ಮತ್ತೆ ಯಾಕೆ ಗೊತ್ತೇ?? 2

ಈಗಾಗಲೇ ಈ ಐಪಿಎಲ್ ಪಂದ್ಯದಲ್ಲಿ 14 ಪಂದ್ಯಗಳಿಂದ 361 ರನ್ನುಗಳನ್ನು ಗಳಿಸಿದ್ದರು. ಈಗ ನನ್ನನ್ನು ಬಿಸಿಸಿಐ ಆಯ್ಕೆ ಮಾಡಲಿಲ್ಲ ಇದಕ್ಕಾಗಿ ಮುಂದಿನ ಸೀಸನ್ ನಲ್ಲಿ 400 ರನ್ನುಗಳನ್ನು ಬಾರಿಸುವೆ. ಆಗ ಕೂಡ ನನ್ನನ್ನು ಆಯ್ಕೆ ಮಾಡಿಲ್ಲ ಎಂದರೆ ಮುಂದಿನ ಸೀಸನ್ ನಲ್ಲಿ 500 ಇಲ್ಲದಿದ್ದರೆ 600 ರನ್ನುಗಳನ್ನು ಬಾರಿಸುವೆ ಎಂಬುದಾಗಿ ನಿತೀಶ್ ರಾಣ ಅಸಮಾಧಾನಕರ ಉತ್ತರವನ್ನು ನೀಡಿದ್ದಾರೆ. ಐಪಿಎಲ್ ನಲ್ಲಿ ಸಾಧ್ಯವಾದಷ್ಟು ಅತ್ಯುತ್ತಮ ಮಟ್ಟದಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆಯುವುದು ನನ್ನ ಮುಖ್ಯ ಗುರಿ ಎಂಬುದಾಗಿ ಹೇಳಿದ್ದಾರೆ.

Comments are closed.