ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಎಲ್ಲರ ಜೀವನದಲ್ಲಿ ನಡೆಯಲೇಬೇಕಾದಂತಹ ಒಂದು ಕಾರ್ಯಕ್ರಮ. ಆದರೆ ಅದು ಸೆಲೆಬ್ರಿಟಿಗಳ ಜೀವನದಲ್ಲಿ ನಡೆದಾಗ ದೊಡ್ಡಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಳ್ಳುತ್ತದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಕ್ರಿಕೆಟಿಗರ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಮೋಹಮ್ಮದ್ ಅಜರುದ್ದಿನ್; ಭಾರತದ ಪರವಾಗಿ 99 ಟೆಸ್ಟ್ ಪಂದ್ಯಗಳು ಹಾಗೂ 334 ಏಕದಿನ ಪಂದ್ಯಗಳನ್ನು ಆಡಿರುವ ಮೊಹಮ್ಮದ್ ಅಜರುದ್ದಿನ್ ರವರು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಕೇವಲ ಸಾಧನೆಗಳಿಗಾಗಿ ಮಾತ್ರವಲ್ಲದೆ ಕ್ರಿಕೆಟ್ ಫಿಕ್ಸಿಂಗ್ನಲ್ಲಿ ಕೂಡ ಇವರು ಕುಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಮೊದಲಿಗೆ ಹೈದರಾಬಾದ್ ಮೂಲದ ನೌರೀನ್ ಎನ್ನುವವರನ್ನು ಮದುವೆಯಾಗುತ್ತಾರೆ.

azaruddina | ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ??
ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ?? 4

ಇವರಿಂದ ಎರಡು ಮಕ್ಕಳನ್ನು ಪಡೆದ ನಂತರ ಖ್ಯಾತ ಬಾಲಿವುಡ್ ನಟಿ ಆಗಿರುವ ಸಂಗೀತ ಬಿಜ್ಲನಿ ರವರನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಈಗಾಗಲೇ ನೌರೀನ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿರುತ್ತಾರೆ. ನಟಿ ಸಂಗೀತ ಬಿಜ್ಲನಿ ರವರನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದ ನಂತರ ಹದಿನಾಲ್ಕು ವರ್ಷಗಳ ನಂತರ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ಇತ್ತೀಚಿನ ಕೆಲ ದಿನಗಳಲ್ಲಿ ಭಾರತೀಯ ಖ್ಯಾತ ಬ್ಯಾಡ್ಮಿಂಟನ್ ತಾರೆ ಆಗಿರುವ ಜ್ವಾಲಾ ಗುಟ್ಟ ರವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಗುಸುಗುಸು ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ವಿನೋದ್ ಕಾಂಬ್ಳಿ; ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ನಾಗಿರುವ ಹಾಗೂ ಸಚಿನ್ ತೆಂಡೂಲ್ಕರ್ ರವರ ಆಪ್ತ ಸ್ನೇಹಿತನಾಗಿರುವ ವಿನೋದ್ ಕಾಂಬ್ಳಿ ಇವರಿಬ್ಬರು ಚಿಕ್ಕವಯಸ್ಸಿನಲ್ಲಿಯೇ 664 ರನ್ನುಗಳ ಪಾರ್ಟ್ನರ್ಶಿಪ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ಕ್ರಿಕೆಟಿಗನಾಗಿ ಟೆಸ್ಟ್ ತಂಡದಲ್ಲಿ ಅತಿವೇಗದ 1000 ರನ್ ಬಾರಿಸಿರುವ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ. 98ರಲ್ಲಿ ನಿಯೋಲ್ಲಾ ಲೆವಿಸ್ ಎಂಬಾಕೆಯನ್ನು ವಿವಾಹವಾಗುತ್ತಾರೆ. ನಂತರ 12 ವರ್ಷಗಳ ನಂತರ ಮೊದಲ ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡಿ ಆಂಡ್ರಿಯಾ ಹೆವಿಟ್ ಎನ್ನುವವರನ್ನು ಮದುವೆಯಾಗಿ ಒಂದು ಗಂಡು ಮಗುವನ್ನು ಪಡೆಯುತ್ತಾರೆ.

javagal srinath | ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ??
ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ?? 5

ಜಾವಗಲ್ ಶ್ರೀನಾಥ್; ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ಮೂಲದ ಬೌಲರ್ ಆಗಿ ಜಾವಗಲ್ ಶ್ರೀನಾಥ್ ಅವರು ತಮ್ಮದೇ ಆದಂತಹ ಹವಾ ಕ್ರಿಯೇಟ್ ಮಾಡಿ ಎದುರಾಳಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಮೂಡುವಂತೆ ಮಾಡುತ್ತಿದ್ದರು. ಈತನನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಮೈಸೂರ್ ಎಕ್ಸ್ಪ್ರೆಸ್ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಇವರ ದಾಂಪತ್ಯ ಜೀವನ ಕುರಿತಂತೆ ಹೇಳುವುದಾದರೆ ಮೊದಲಿಗೆ ಇವರು ಜ್ಯೋತ್ಸ್ನಾ ಎನ್ನುವವರನ್ನು ಮದುವೆಯಾಗುತ್ತಾರೆ. ಆದರೆ ಮದುವೆಯಾದ ಎಂಟು ವರ್ಷಗಳಲ್ಲಿ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯಿಂದಲೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆಯಾಗುತ್ತಾರೆ. ವಿವಾಹ ವಿಚ್ಛೇದನವನ್ನು ಪಡೆದುಕೊಂಡ ಮರುವರ್ಷವೇ ಮಾಧವಿ ಎನ್ನುವ ಪತ್ರಿಕಾ ಸಂಪಾದಕಿ ಯನ್ನು ಮದುವೆಯಾಗುತ್ತಾರೆ ಜಾವಗಲ್ ಶ್ರೀನಾಥ್.

ಯೋಗರಾಜ್ ಸಿಂಗ್; ಒಂದು ಕಾಲದಲ್ಲಿ ಕ್ರಿಕೆಟ್ ಲೋಕದ ಆಟಗಾರನಾಗಿ ಹೆಸರುವಾಸಿಯಾಗಿದ್ದ ಯುವರಾಜ್ ಸಿಂಗ್ ನಂತರದ ದಿನಗಳಲ್ಲಿ ಹಲವಾರು ವಿಚಾರಗಳಲ್ಲಿ ಸುದ್ದಿಯಾಗಿ ವಿವಾ’ದದ ಮೂಲಕವೂ ಕೂಡ ಹೆಸರುವಾಸಿ ಆಗುತ್ತಾರೆ. ಅದರಲ್ಲಿ ಕೂಡ ಕಪಿಲ್ ದೇವ್ ನನ್ನ ಕ್ರಿಕೆಟ್ ಜೀವನ ಹಾಳಾಗುವುದಕ್ಕೆ ಕಾರಣ ಎಂಬುದಾಗಿ ಆಶ್ಚರ್ಯಕರ ಹೇಳಿಕೆ ನೀಡಿದ್ದರು. ಇದು ಕೇವಲ ಪ್ರಚಾರಕ್ಕಾಗಿ ಎಂಬುದು ಎಲ್ಲರೂ ಮಾತನಾಡಿಕೊಂಡಿದ್ದರು.

ಇನ್ನು ಮೊದಲಿಗೆ ಇವರು ಶಬ್ನಮ್ ಎನ್ನುವವರನ್ನು ಮದುವೆಯಾಗಿದ್ದರು. ಶಬ್ನಮ್ ರವರಿಂದ ಯೋಗರಾಜ್ ಸಿಂಗ್ ರವರು ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗ ಹಾಗೂ 2011 ವಿಶ್ವಕಪ್ ಗೆಲ್ಲಲು ಕಾರಣವಾದಂತಹ ಪ್ರಮುಖ ಆಟಗಾರ ಯುವರಾಜ್ ಸಿಂಗ್ ಅವರನ್ನು ಮಗನಾಗಿ ಪಡೆದರು. ನಂತರ ಸತ್ವೀರ್ ಕೌರ್ ಎನ್ನುವವರನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆಯುತ್ತಾರೆ. ಇನ್ನು ಕ್ರಿಕೆಟ್ ರಂಗದಿಂದ ದೂರವಿರುವ ಯೋಗರಾಜ್ ಸಿಂಗರ್ ಅವರು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉದಾಹರಣೆಗೆ ಫರ್ಹಾನ್ ಅಖ್ತರ್ ನಟನೆಯ ಭಾಗ್ ಮಿಲ್ಕಾ ಭಾಗ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ದರ್ಬಾರ್ ಹಾಗೂ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

dinesh karthik | ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ??
ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರ ಲಿಸ್ಟ್ ನಲ್ಲಿ ಇರುವ ಆಟಗಾರರು ಯಾರ್ಯಾರು ಗೊತ್ತೇ?? 6

ದಿನೇಶ್ ಕಾರ್ತಿಕ್; ದಿನೇಶ್ ಕಾರ್ತಿಕ್ ರವರು ಎಂತಹ ಕ್ರಿಕೆಟಿಗ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಇತ್ತೀಚಿನದಿನಗಳಲ್ಲಿ ದಿನೇಶ್ ಕಾರ್ತಿಕ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ಆಗಿ ಯಾವ ಮಟ್ಟದಲ್ಲಿ ಕ್ರಿಕೆಟ್ ಬ್ಯಾಟಿಂಗನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವುದನ್ನು ವಿವರಿಸಿ ಹೇಳಬೇಕಾಗಿಲ್ಲ. ಮೊದಲಿಗೆ ತಮ್ಮ ಬಾಲ್ಯದ ಗೆಳತಿ ಯಾಗಿರುವ ನಿಕಿತಾ ರವರನ್ನು 2007 ರಲ್ಲಿ ಮದುವೆಯಾಗುತ್ತಾರೆ. ಆದರೆ ಅವರು ಅವರ ಸಹ ಕ್ರಿಕೆಟಿಗ ನಾಗಿರುವ ಮುರಳಿ ವಿಜಯ್ ರವರೊಂದಿಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿದ ದಿನೇಶ್ ಕಾರ್ತಿಕ್ ರವರು ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ನಂತರ 2015 ರಲ್ಲಿ ಭಾರತೀಯ ಖ್ಯಾತ ಸ್ಕ್ವಾಷ್ ಆಟಗಾರ್ತಿಯಾಗಿರುವ ದೀಪಿಕಾ ಪಳ್ಳಿಕಲ್ ರವರನ್ನು ಮದುವೆಯಾಗುತ್ತಾರೆ.

ಇವರಲ್ಲಿ ಕೆಲವರು ಸಮಸ್ಯೆಗಳ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ನೀಡಿ ಇನ್ನೊಂದು ಮದುವೆಯಾದರೆ ಇನ್ನು ಕೆಲವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನವನ್ನು ನೀಡಿ ಮದುವೆಯಾಗಿದ್ದಾರೆ. ಅವರ ದೃಷ್ಟಿಯಲ್ಲಿ ಅವರು ನ್ಯಾಯಯುತವಾಗಿದ್ದಾರೆ. ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಈ ಕ್ರಿಕೆಟಿಗರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.