ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಆದ್ರು, ಆದರೆ ಹನಿಮೂನ್ ಗೆ ಹೋಗ್ತಾ ಇಲ್ಲ ಯಾಕೆ ಗೊತ್ತಾ?? ನವ ಜೋಡಿ ಹನಿಮೂನ್ ಗೆ ಯಾಕೆ ಹೋಗುತ್ತಿಲ್ಲ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆ ತಿಳಿದಿರುವ ಹಾಗೆ ಏಪ್ರಿಲ್ 14ರಂದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರೂ ಕೂಡ ಮದುವೆಯಾಗುವುದರ ಮೂಲಕ ಹಲವಾರು ವರ್ಷಗಳ ಪ್ರೇಮಿಗಳ ಸಂಬಂಧವನ್ನು ಈಗ ದಾಂಪತ್ಯ ಜೀವನಕ್ಕೆ ಬದಲಾಯಿಸಿದ್ದಾರೆ. ಸಪ್ತಪದಿಯನ್ನು ತುಳಿಯುವ ಮೂಲಕ ಏಳೇಳು ಜನುಮಕ್ಕು ಜೊತೆಯಾಗಿ ಇರುವಂತಹ ಪ್ರಮಾಣವನ್ನು ಮಾಡಿದ್ದಾರೆ. ಹಲವಾರು ವರ್ಷಗಳಿಂದ ಇಬ್ಬರೂ ಕೂಡ ಪ್ರೀತಿಸಿ ಜೊತೆಯಾಗಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮದುವೆಯಾಗುವ ನಿರ್ಧಾರಕ್ಕೆ ಬಂದಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಏಪ್ರಿಲ್ 14ರಂದು ತಮ್ಮ ನಿವಾಸದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಇವರಿಬ್ಬರ ಮದುವೆಗೆ ಕುಟುಂಬಸ್ಥರನ್ನು ಹೊರತುಪಡಿಸಿ ಹೊರಗಿನ ಬೇರೆ ಯಾವುದೇ ಅತಿಥಿಗಳು ಬಂದಿಲ್ಲ ಎಂಬುದಾಗಿ ಕೇಳಿಬರುತ್ತಿದೆ. ಇವರಿಬ್ಬರ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಅಭಿಮಾನಿಗಳು ಇಬ್ಬರು ದೀರ್ಘಕಾಲದವರೆಗೆ ಹೀಗೆ ಚೆನ್ನಾಗಿ ಸುಖವಾಗಿರಿ ಎಂಬುದಾಗಿ ಹಾರೈಸಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ನಂತರ ಅಭಿಮಾನಿಗಳು ಹನಿಮೂನ್ಗೆ ಎಲ್ಲಿಗೆ ಹೋಗುತ್ತೀರಾ ಎಂಬುದಾಗಿ ಕೇಳುತ್ತಾರೆ. ಆದರೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ವಿಚಾರದಲ್ಲಿ ಇದು ಬೇರೆಯದೇ ರೀತಿಯ ತಿರುವನ್ನು ಪಡೆದುಕೊಂಡಿದೆ. ಹೌದು ಇಬ್ಬರೂ ಕೂಡ ಸದ್ಯಕ್ಕಂತೂ ಹನಿಮೂನ್ ಗೆ ಹೋಗುವ ಪ್ಲಾನನ್ನು ಹಾಕಿಕೊಂಡಿಲ್ಲ. ಅದಕ್ಕೆ ಸರಿಯಾದಂತಹ ಕಾರಣವೂ ಕೂಡ ಇದೆ.

alia bhat ranbir 2 | ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಆದ್ರು, ಆದರೆ ಹನಿಮೂನ್ ಗೆ ಹೋಗ್ತಾ ಇಲ್ಲ ಯಾಕೆ ಗೊತ್ತಾ?? ನವ ಜೋಡಿ ಹನಿಮೂನ್ ಗೆ ಯಾಕೆ ಹೋಗುತ್ತಿಲ್ಲ ಗೊತ್ತೇ??
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಆದ್ರು, ಆದರೆ ಹನಿಮೂನ್ ಗೆ ಹೋಗ್ತಾ ಇಲ್ಲ ಯಾಕೆ ಗೊತ್ತಾ?? ನವ ಜೋಡಿ ಹನಿಮೂನ್ ಗೆ ಯಾಕೆ ಹೋಗುತ್ತಿಲ್ಲ ಗೊತ್ತೇ?? 2

ಇಬ್ಬರೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆಗಿರುವ ಕಲಾವಿದರು. ಅದರಲ್ಲೂ ರಶ್ಮಿಕಾ ಮಂದಣ್ಣನ ಅವರೊಂದಿಗೆ ನಟಿಸುತ್ತಿರುವ ಅನಿಮಲ್ ಚಿತ್ರದ ಚಿತ್ರೀಕರಣಕ್ಕಾಗಿ ರಣಬೀರ್ ಕಪೂರ್ ಅವರು ಮನಾಲಿಗೆ ಹೋಗುತ್ತಿದ್ದಾರೆ. ಆಲಿಯಾ ಭಟ್ ರವರ ಹೊಸ ಪ್ರಾಜೆಕ್ಟ್ ಗಳು ಕೂಡ ಈ ತಿಂಗಳಿನಲ್ಲಿ ಟೇಕಾಫ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಸದ್ಯಕ್ಕೆ ಇಬ್ಬರು ಕೂಡ ತಮ್ಮ ವೃತ್ತಿಯ ಕುರಿತಂತೆ ಆಸಕ್ತಿಯನ್ನು ಹೆಚ್ಚಿಸಿದ್ದು ಇದರಿಂದ ಬಿಡುವು ಸಿಕ್ಕ ನಂತರ ಖಂಡಿತವಾಗಿ ಹನಿಮೂನ್ಗೆ ಹೋಗಬಹುದಾಗಿದೆ. ಮೂಲಗಳಿಂದ ಕೇಳಿ ಬಂದಂತೆ ಈ ಮೊದಲು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ದಕ್ಷಿಣ ಆಫ್ರಿಕಾಗೆ ಹನಿಮೂನ್ ಗೆ ಹೋಗುವ ಪ್ಲಾನಿಂಗ್ ಅನ್ನು ಮಾಡಿದ್ದರಂತೆ. ಆದರೆ ಅದು ಈಗ ಕ್ಯಾನ್ಸಲ್ ಆಗಿದ್ದು ಮುಂದಿನ ದಿನಗಳಲ್ಲಿ ಯಾವ ಪ್ರದೇಶಕ್ಕೆ ಹೋಗುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Comments are closed.