ನರೇಶ್ ಇಂದ ದೂರ ಆದ ಮೇಲೆ ಇದ್ದಕ್ಕಿದ್ದ ಹಾಗೆ ಲಕ್ಷ ಲಕ್ಷ ಖರ್ಚು ಮಾಡುತ್ತಿರುವ ಪವಿತ್ರ ಲೋಕೇಶ್: ಯಾಕೆ ಗೊತ್ತೇ?? ಇನ್ನು ಮುಂದೆ ಬಾರಿ ಹಬ್ಬ??
ನಟಿ ಪವಿತ್ರ ಲೋಕೇಶ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ನರೇಶ್ ಅವರ ಜೊತೆಗೆ ಕಾಣಿಸಿಕೊಂಡು ಮಾಧ್ಯಮದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಅವರು ಇದೀಗ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ನರೇಶ್ ಅವರ ಜೊತೆಗೆ ಪವಿತ್ರ ಅವರು ಲಿವಿಂಗ್ ಟುಗೆದರ್ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಇವರು ಜೊತೆಗೆ ಓಡಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಮೈಸೂರಿನ ಒಂದೇ ಹೋಟೆಲ್ನಲ್ಲಿ ಪತ್ನಿ ಎದುರಿಗೆ ನರೇಶ್ ಮತ್ತು ಪವಿತ್ರ ಸಿಕ್ಕಿಹಾಕಿಕೊಂಡಿದ್ದು ಮಾಧ್ಯಮದಲ್ಲಿ ದೊಡ್ಡ ಸದ್ದು ಮಾಡಿತ್ತು. ಆನಂತರ ನರೇಶ್, ಪವಿತ್ರ ಅವರನ್ನು ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಏಕಾಏಕಿ ಅವರಿಬ್ಬರೂ ದೂರವಾದರು. ಇದೀಗ ಪವಿತ್ರ ಲೋಕೇಶ್ ಅವರು ನರೇಶ್ ಇಂದ ದೂರವಾದ ನಂತರ ಹೆಚ್ಚಾಗಿ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವರು ತಮ್ಮ ಹಣವನ್ನು ಯಾಕೆ ಖರ್ಚು ಮಾಡುತ್ತಿದ್ದಾರೆ ಗೊತ್ತಾ, ಅದರ ಕುರಿತ ಮಾಹಿತಿ ಇಲ್ಲಿದೆ ನೋಡಿ.
ನಟಿ ಪವಿತ್ರ ಲೋಕೇಶ್ ರವರು ಮೊದಲಿಗೆ ಕನ್ನಡದ ಧಾರವಾಹಿಗಳ ಮೂಲಕ ತೆರೆ ಮೇಲೆ ಕಾಣಿಸಿಕೊಂಡವರು. ಆನಂತರ ಕೆಲವು ಕನ್ನಡದ ಚಿತ್ರಗಳಲ್ಲಿ ನಟಿಯಾಗಿಯೂ ಅಭಿನಯಿಸಿದರು. ಪೋಷಕ ನಟಿಯಾಗಿಯೇ ಹೆಚ್ಚು ಗುರುತಿಸಿಕೊಂಡಿರುವ ಅವರು ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದಾರೆ. ಬಹು ಭಾಷಾ ನಟಿಯಾಗಿರುವ ಅವರು ಸಾಕಷ್ಟು ಚಿತ್ರಗಳಲ್ಲಿ ನಾಯಕ, ನಾಯಕಿಯ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ. ಇಷ್ಟು ವಯಸ್ಸಾದರೂ ಅವರಿನ್ನು ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ನರೇಶ್ ಅವರ ಜೊತೆಗೆ ಗುರುತಿಸಿಕೊಂಡ ನಂತರ ಈ ವಿವಾದದ ಬಳಿಕ ನಟಿ ಪವಿತ್ರ ಅವರಿಗೆ ಹೆಚ್ಚು ಹೆಚ್ಚು ಸಿನಿಮಾ ಅವಕಾಶ ಕೇಳಿ ಬರುತ್ತಿವೆಯಂತೆ. ಅವರು ಮೊದಲಿಗಿಂತ ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೀಗ ಪವಿತ್ರ ಲೋಕೇಶ್ ರವರು ತಮ್ಮ ಸೌಂದರ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಸಾಕಷ್ಟು ದುಡ್ಡನ್ನು ಖರ್ಚು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಅವರು ಗ್ಲಾಮರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದು ಸೌಂದರ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಡಯಟ್ ಮೂಲಕ ಪವಿತ್ರ ಸಾಕಷ್ಟು ತೂಕ ಇಳಿಸಿಕೊಂಡಿದ್ದಲ್ಲದೆ ಇನ್ನೂ ಹೆಚ್ಚು ಸೌಂದರ್ಯವಾಗಿ ಸುಂದರವಾಗಿ ಕಾಣುತ್ತಿದ್ದಾರೆ. ಅಲ್ಲದೆ ಅವರು ನಿತ್ಯವೂ ಜಿಮ್ಗೆ ಹೋಗುವ ಅಭ್ಯಾಸ ಮಾಡಿಕೊಂಡಿರುವುದರಿಂದ ಅವರು ಸುಂದರವಾಗಿ ಕಾಣಲು ದುಬಾರಿ ವಸ್ತುಗಳನ್ನೇ ಕೊಳ್ಳುತ್ತಿದ್ದಾರಂತೆ. ಸದಾ ದುಬಾರಿ ಬಟ್ಟೆಗಳನ್ನೇ ಕೊಳ್ಳುವ ಅವರು ಮುಖಕ್ಕೆ ದುಬಾರಿ ಕ್ರೀಮ್ ಗಳನ್ನೇ ಅಚ್ಚುತ್ತಿದ್ದಾರೆ ಎಂಬ ಮಾತುಗಳು ಕೇಳುತ್ತಿವೆ. ಜಿಮ್ ನಲ್ಲಿ ನಿಯಮಿತವಾಗಿ ವರ್ಕೌಟ್ ಮಾಡುತ್ತಿರುವ ಅವರು ಸೌಂದರ್ಯ ವರ್ಧನೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲದೆ ಇತ್ತೀಚಿಗೆ ಅವರು ಸಿನಿಮಾಗಳಿಗೆ ಪಡೆಯುವ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.
Comments are closed.