ಆಫ್ರಿಕಾ ವಿರುದ್ಧ ಸೋತ ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಡಬಲ್ ಬಿಗ್ ಶಾಕ್. ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್. ಈ ಖುಷಿಗೆ ವಿಶ್ವಕಪ್ ಬೇಕಿತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಮೊಟ್ಟ ಮೊದಲ ಬಾರಿಗೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲನ್ನು ಅನುಭವಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ನಿನ್ನೆ ಸೌತ್ ಆಫ್ರಿಕಾ ಬೌಲರ್ಗಳ ಕರಾರುವಕ್ ಬೌಲಿಂಗ್ ಮುಂದೆ ಮಕಾಡೇ ಮಲಗಿತ್ತು. ಸೂರ್ಯ ಕುಮಾರ್ ಯಾದವ್ ರವರನ್ನು ಬಿಟ್ಟರೆ ಮತ್ಯಾವ ಆಟಗಾರರು ಕೂಡ ದಕ್ಷಿಣ ಆಫ್ರಿಕಾದ ತಂಡದ ಬೌಲರ್ಗಳಿಗೆ ಉತ್ತರ ನೀಡುವಲ್ಲಿ ಸಂಪೂರ್ಣ ವಿಫಲರಾದರು . ಬಹಳ ನಿರೀಕ್ಷೆ ಮೂಡಿಸಿದ್ದ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ಕೂಡ ವಿಫಲವಾಗಿದ್ದು ಭಾರತ ಕ್ರಿಕೆಟ್ ತಂಡ ಕೊನೆಗೆ ಸೋಲನ್ನು ಕಾಣುವಂತೆ ಮಾಡಿತ್ತು.

ಇನ್ನು ಕಡಿಮೆ ರನ್ ಗಳನ್ನು ಗಳಿಸಿದರೂ ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಆದರೆ ಕಳಪೆ ಫೀಲ್ಡಿಂಗ್ ಮಾಡಿದ ಕಾರಣ ಭಾರತ ಕ್ರಿಕೆಟ್ ತಂಡ ಸೋಲನ್ನು ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ. ಒಟ್ಟಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಸೋತಿದ್ದಾಗಿದೆ. ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡಿ ಗೆಲುವಿನ ಹಾದಿಗೆ ಮರಳೋಣ ಎನ್ನುವಷ್ಟರಲ್ಲಿ ಭಾರತಕ್ಕೆ ಶಾಕ್ ಒಂದು ಎದುರಾಗಿದೆ.

dinesh karthik injury | ಆಫ್ರಿಕಾ ವಿರುದ್ಧ ಸೋತ ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಡಬಲ್ ಬಿಗ್ ಶಾಕ್. ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್. ಈ ಖುಷಿಗೆ ವಿಶ್ವಕಪ್ ಬೇಕಿತ್ತಾ??
ಆಫ್ರಿಕಾ ವಿರುದ್ಧ ಸೋತ ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಡಬಲ್ ಬಿಗ್ ಶಾಕ್. ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್. ಈ ಖುಷಿಗೆ ವಿಶ್ವಕಪ್ ಬೇಕಿತ್ತಾ?? 2

ಹೌದು ಸ್ನೇಹಿತರೇ, ಇದೀಗ ಬಂದಿರುವ ಮೂಲಗಳ ಪ್ರಕಾರ ನಿನ್ನೆ ಸೌತ್ ಆಫ್ರಿಕಾ ತಂಡದ ವಿರುದ್ಧದ ಪಂದ್ಯಕೂ ಮುನ್ನ ಅಭ್ಯಾಸ ನಡೆಸುವ ವೇಳೆಯಲ್ಲಿ ದಿನೇಶ್ ಕಾರ್ತಿಕ್ ರವರು ಬೆನ್ನಿನ ಹಿಂಜುರಿ ಮಾಡಿಕೊಂಡಿದ್ದರು, ನೋವಿನಲ್ಲಿಯೂ ಕೂಡ ಬ್ಯಾಟಿಂಗ್ ಮಾಡಿದರು, ಆದರೆ ವಿಫಲವಾದರು. ಇದಾದ ಬಳಿಕ ಕೀಪಿಂಗ್ ನಲ್ಲಿ ಮಾತ್ರ ಅತ್ಯದ್ಭುತ ಪ್ರದರ್ಶನ ನೀಡಿ ಅದ್ಬುತ ಕ್ಯಾಚ್ ಗಳನ್ನು ಹಿಡಿದರು. ಆದರೆ ಪಂದ್ಯ ಮುಗಿಯುವಷ್ಟರಲ್ಲಿ ಬೆನ್ನಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು ದಿನೇಶ್ ಕಾರ್ತಿಕ್ ಅವರು ಮುಂದಿನ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮುನ್ನ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ ಹಾಗೂ ಅಷ್ಟೇ ಅಲ್ಲದೆ ವೈದ್ಯರ ವರದಿಗೆ ಕಾಯುತ್ತಿದ್ದು ಒಂದು ವೇಳೆ ವೈದ್ಯರು ಸೂಚಿಸಿದ್ದಲ್ಲಿ ದಿನೇಶ್ ಕಾರ್ತಿಕ್ ರವರು ಸಂಪೂರ್ಣ ಟೂರ್ನಿ ಯಿಂದ ಹಿಂದೆ ಸರಿಯಬೇಕಾಗುತ್ತದೆ.

Comments are closed.