ಹತ್ತಾರು ಸಿನಿಮಾ ಮಾಡಿದ್ದರೂ ಕೂಡ ತನ್ನ ಜೀವನದಲ್ಲಿ ಎಂದು ಮರೆಯದ ಸಿನಿಮಾ ಯಾವುದು ಎಂದು ಉತ್ತರ ನೀಡಿದ ಪ್ರಿಯಾಂಕಾ. ಯಾವ ಸಿನಿಮಾ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ನಮ್ಮ ಚಿತ್ರರಂಗಕ್ಕೆ ಪರಭಾಷೆಗಳಿಂದ ಖ್ಯಾತ ನಟಿಯರು ಬಂದು ನಟಿಸಿ ಹೋಗುತ್ತಿದ್ದುದು ಕಾಮನ್ ಆಗಿತ್ತು. ಆದರೆ ಪರಭಾಷೆಯಿಂದ ಬಂದರು ಕೂಡ ನಟಿಸಿ ಇದುವರೆಗೂ ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವಂತಹ ನಟಿಯೊಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಬೆಂಗಾಳಿ ಮೂಲದ ನಟಿಯಾಗಿರುವ ಹಾಗೂ ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ ಹಾಗೂ ನಟ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ ರವರ ಪತ್ನಿಯಾಗಿರುವ ಪ್ರಿಯಾಂಕ ಉಪೇಂದ್ರ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಈಗಾಗಲೇ ಅವರು ಕನ್ನಡ ತಮಿಳು ತೆಲುಗು ಹಾಗೂ ಬೆಂಗಾಳಿ ಭಾಷೆ ಸೇರಿದಂತೆ ಹಲವಾರು ಪ್ರಮುಖ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಇಂದಿಗೂ ಕೂಡ ಯಾವುದೇ ಪಾತ್ರವನ್ನು ನೀಡಿದರೆ ಕೂಡ ನಿರ್ವಹಿಸಬಲ್ಲಂತಹ ಚಾಣಾಕ್ಷತೆ ಅವರಲ್ಲಿದೆ. ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ತಾವು ತಮ್ಮ ಸಿನಿಮಾ ಜೀವನದಲ್ಲಿ ಎಂದು ಮರೆಯಲಾಗದಂತಹ ಮೂರು ಸಿನಿಮಾಗಳ ಕುರಿತಂತೆ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಪ್ರಿಯಾಂಕ ಉಪೇಂದ್ರ ರವರು ನಟಿಸಿರುವ ಇಷ್ಟೊಂದು ಸಿನಿಮಾಗಳಲ್ಲಿ ಅವರ ನೆಚ್ಚಿನ ಸಿನಿಮಾಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

upendra priyanka | ಹತ್ತಾರು ಸಿನಿಮಾ ಮಾಡಿದ್ದರೂ ಕೂಡ ತನ್ನ ಜೀವನದಲ್ಲಿ ಎಂದು ಮರೆಯದ ಸಿನಿಮಾ ಯಾವುದು ಎಂದು ಉತ್ತರ ನೀಡಿದ ಪ್ರಿಯಾಂಕಾ. ಯಾವ ಸಿನಿಮಾ ಅಂತೇ ಗೊತ್ತೇ??
ಹತ್ತಾರು ಸಿನಿಮಾ ಮಾಡಿದ್ದರೂ ಕೂಡ ತನ್ನ ಜೀವನದಲ್ಲಿ ಎಂದು ಮರೆಯದ ಸಿನಿಮಾ ಯಾವುದು ಎಂದು ಉತ್ತರ ನೀಡಿದ ಪ್ರಿಯಾಂಕಾ. ಯಾವ ಸಿನಿಮಾ ಅಂತೇ ಗೊತ್ತೇ?? 2

ಮೊದಲಿಗೆ ಪ್ರಿಯಾಂಕ ಉಪೇಂದ್ರ ರವರು ನಟಿಸಿರುವ ಬೆಂಗಾಳಿ ಸಿನಿಮಾ ಸಾಥಿ ಕಂಡುಬರುತ್ತದೆ. ಈ ಸಿನಿಮಾದಲ್ಲಿ ಅವರು ಹೊಸಬರಾಗಿ ಇದ್ದರೂ ಕೂಡ ಜನರು ಅವರನ್ನು ಮೆಚ್ಚಿ ಗೆಲ್ಲಿಸಿದ ರೀತಿ ಇಂದಿಗೂ ಕೂಡ ಅವರಿಗೆ ಅವಿಸ್ಮರಣೀಯವಾಗಿದೆ. ಇನ್ನು ಉಳಿದ ಎರಡು ಸಿನಿಮಾಗಳು ಕನ್ನಡ ಸಿನಿಮಾಗಳು ಆಗಿವೆ. ಹೌದು ಎರಡನೆಯದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಭುದೇವ ನಟಿಸಿರುವ ಎಚ್ 2 ಓ ಸಿನಿಮಾವಾದರೆ, ಮೂರನೇದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರೊಂದಿಗೆ ನಟಿಸಿರುವ ಮಲ್ಲ ಸಿನಿಮಾ. ಈ ಮೂರು ಸಿನಿಮಾಗಳು ಪ್ರಿಯಾಂಕ ಉಪೇಂದ್ರರವರ ಸಿನಿಮಾ ಜೀವನದಲ್ಲಿ ಎಂದು ಮರೆಯಲಾರದಂತಹ ಅನುಭವವನ್ನು ನೀಡಿರುವಂತಹ ಸಿನಿಮಾಗಳು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹಾಗೂ ಚಿತ್ರದ ಕಥೆ ಹಾಗೂ ಹಾಡುಗಳನ್ನು ಜನರು ಮೆಚ್ಚಿ ಅಭಿನಂದಿಸಿದ್ದಾರೆ ಇದೇ ಕಾರಣಕ್ಕಾಗಿ ಪ್ರಿಯಾಂಕ ಉಪೇಂದ್ರ ರವರಿಗೆ ಈ ಚಿತ್ರಗಳೆಂದರೆ ತುಂಬಾ ಇಷ್ಟ. ಪ್ರಿಯಾಂಕಾ ಉಪೇಂದ್ರ ನಟಿಸಿರುವ ಸಿನಿಮಾಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.