ಆರ್ ಸಿಬಿ ತಂಡ ದಿನೇಶ್ ಕಾರ್ತಿಕ್ ರವರನ್ನು ಖರೀದಿ ಮಾಡಿದ ದಿನ ಫೋನ್ ಮಾಡಿ ಹೇಳಿದ್ದೇನು ಗೊತ್ತೇ?? ದಿನೇಶ್ ಕಾರ್ತಿಕ್ ಬಿಚ್ಚಿಟ್ಟ ಸತ್ಯವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ರವರು ಮನಬಂದಂತೆ ಎದುರಾಳಿ ಬೌಲರ್ಗಳನ್ನು ಥಳಿಸುತ್ತಿದ್ದಾರೆ. ನಿಜಕ್ಕೂ ಕೂಡ ಇದು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ. ನಿಜಕ್ಕೂ ಕೂಡ ಹಲವಾರು ಸೀಸನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ನೀರಸವಾಗಿತ್ತು. ಆದರೆ ಈ ಬಾರಿ ಈಗಾಗಲೇ 2 ಸೋಲು ಹಾಗೂ 4 ಗೆಲುವುಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವಂತಹ ಬಲಿಷ್ಠ ತಂಡವಾಗಿ ನಿಂತಿದೆ ಎಂದರೆ ತಪ್ಪಾಗಲಾರದು.

ಅದರಲ್ಲೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಪ್ರತಿ ಪಂದ್ಯದಲ್ಲೂ ಕೂಡ ದಿನೇಶ್ ಕಾರ್ತಿಕ್ ರವರು ಫಿನಿಶರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಗೆದ್ದಿದೆ ಎಂದರೆ ಅದರಲ್ಲಿ ಪ್ರಮುಖವಾದ ಕೊಡುಗೆ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ನಿಂದ ಬಂದಿದೆ ಎಂದರೆ ತಪ್ಪಾಗಲಾರದು. ದಿನೇಶ್ ಕಾರ್ತಿಕ್ ರವರು ತಂಡದ ಸದಸ್ಯರಾಗಿ ಆಗಾಗ ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ರವರನ್ನು ಖರೀದಿಸಿದಾಗ ಅದೇ ದಿನ ಕರೆ ಮಾಡಿ ಏನು ಹೇಳಿತ್ತು ಎನ್ನುವುದನ್ನು ಕೂಡ ಇತ್ತೀಚಿನ ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ ರವರು ಬಿಚ್ಚಿಟ್ಟಿದ್ದಾರೆ.

sanjay bangar dinesh karthik rcb | ಆರ್ ಸಿಬಿ ತಂಡ ದಿನೇಶ್ ಕಾರ್ತಿಕ್ ರವರನ್ನು ಖರೀದಿ ಮಾಡಿದ ದಿನ ಫೋನ್ ಮಾಡಿ ಹೇಳಿದ್ದೇನು ಗೊತ್ತೇ?? ದಿನೇಶ್ ಕಾರ್ತಿಕ್ ಬಿಚ್ಚಿಟ್ಟ ಸತ್ಯವೇನು ಗೊತ್ತೇ??
ಆರ್ ಸಿಬಿ ತಂಡ ದಿನೇಶ್ ಕಾರ್ತಿಕ್ ರವರನ್ನು ಖರೀದಿ ಮಾಡಿದ ದಿನ ಫೋನ್ ಮಾಡಿ ಹೇಳಿದ್ದೇನು ಗೊತ್ತೇ?? ದಿನೇಶ್ ಕಾರ್ತಿಕ್ ಬಿಚ್ಚಿಟ್ಟ ಸತ್ಯವೇನು ಗೊತ್ತೇ?? 2

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎಬಿ ಡಿವಿಲಿಯರ್ಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿನಿಶರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಹೀಗಾಗಿ ಎರಡರಿಂದ ಮೂರು ಆಟಗಾರರು ಅವರ ಅನುಪಸ್ಥಿತಿಯಲ್ಲಿ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತು. ಈ ಕಾರಣಕ್ಕಾಗಿಯೇ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ರವರನ್ನು ಖರೀದಿಸಿದಾಗ ತಂಡದ ಮುಖ್ಯ ಕೋಚ್ ಆಗಿರುವ ಸಂಜಯ್ ಬಂಗಾರ್ ರವರು ದಿನೇಶ್ ಕಾರ್ತಿಕ್ ರವರಿಗೆ ಕರೆ ಮಾಡಿ ನಾವು ಈ ಬಾರಿಯ ಟೂರ್ನಮೆಂಟಿನಲ್ಲಿ ಎಬಿ ಡಿವಿಲಿಯರ್ಸ್ ರವರ ಸೇವೆಯಿಂದ ವಂಚಿತರಾಗಿದ್ದೇವೆ ಹೀಗಾಗಿ ಅವರ ಫಿನಿಶಿಂಗ್ ರೋಲನ್ನು ನೀವು ನಿಭಾಯಿಸಬೇಕಾಗಿದೆ ಎನ್ನುವುದಾಗಿ ಹೇಳಿದ್ದರು. ಅದರಿಂದಲೇ ಅರ್ಥಮಾಡಿಕೊಂಡ ದಿನೇಶ್ ಕಾರ್ತಿಕ್ ರವರು ಈ ಬಾರಿಯ ಟೂರ್ನಮೆಂಟ್ ನಲ್ಲಿ ತಮ್ಮ ಜವಾಬ್ದಾರಿಗೆ ತಕ್ಕಂತೆ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.